ಗೋಮಾಂಸ ಸೇವನೆ : ಬ್ರಹ್ಮಾಸ್ತ್ರ ಚಿತ್ರ ಬಾಯ್ಕಾಟ್ ಟ್ರೆಂಡ್ ಬೆನ್ನಲ್ಲೇ, ವಿವೇಕ್ ಅಗ್ನಿಹೋತ್ರಿ ಬೀಫ್ ಹೇಳಿಕೆ ವೈರಲ್

Consumption of beef

ಗೋಮಾಂಸ ಸೇವನೆ (Consumption of beef) ವಿಚಾರಕ್ಕೆ ಬ್ರಹ್ಮಾಸ್ತ್ರ ಸಿನಿಮಾದ ನಟ ರಣಬೀರ್ ಕಪೂರ್ ಹಾಗೂ ನಟಿ ಆಲಿಯಾ ಭಟ್​​ ಅವರಿಗೆ ಹಿಂದೂಪರ ಸಂಘಟನೆಗಳಿಂದ ತೀವ್ರ ಪ್ರತಿರೋಧ ವ್ಯಕ್ತವಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಸಹಿತ ಬಾಯ್ಕಾಟ್ ಬ್ರಹ್ಮಾಸ್ತ್ರ (#BoycotBrahmastra) ಎಂಬ ಟ್ಯಾಗ್​ಲೈನ್​ ಟ್ರೆಂಡಿಂಗ್​ನಲ್ಲಿದೆ. ಅಲ್ಲದೇ, ನಿನ್ನೆಯಷ್ಟೆ ರಣಬೀರ್​ ಕಪೂರ್​ ಹಾಗೂ ಆಲಿಯಾಣ ಭಟ್ ಮಹಾಕಾಲೇಶ್ವರ ದೇವಸ್ಥಾನ ಭೇಟಿ ಮಾಡದಂತೆ ಭಜರಂಗ ದಳದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು.

ರಣಬೀರ್ ಕಪೂರ್ ಈ ಹಿಂದೆ ಹೇಳಿದ್ದ ವಿಡಿಯೋದಲ್ಲಿ ಗೋಮಾಂಸ ತಿನ್ನುವ (Consumption of beef) ವಿಚಾರ ಪ್ರಸ್ತಾಪ ಆಗಿತ್ತು. ಅದನ್ನೇ ಇಟ್ಟುಕೊಂಡು ಹಿಂದೂಪರ ಸಂಘಟನೆಗಳು ಪ್ರತಿಭಟಿಸಿದ್ದವು. ಇದೀಗ ಇಂಥದ್ದೇ ಸಂಕಷ್ಟಕ್ಕೆ ಸಿಲುಕಿದ್ದಾರೆ ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ.

ಈ ಹಿಂದೆ ಅವರು ಸಂದರ್ಶನವೊಂದರಲ್ಲಿ ‘ನಾನು ಈ ಹಿಂದೇನೂ ಗೋಮಾಂಸ ತಿನ್ನುತ್ತಿದ್ದೆ, ಈಗಲೂ ತಿನ್ನುತ್ತೇನೆ’ ಎಂದು ಹೇಳಿರುವ  ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸದಾ ಹಿಂದೂಪರ ಯೋಚನೆ ಮಾಡುವ ವಿವೇಕ್ ಬಗ್ಗೆ ಭಜರಂಗ ದಳ ಯಾಕೆ ಸುಮ್ಮನಿದೆ ಎಂದು ಹಲವರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ : ನಟ ರಣ್​ಬೀರ್, ಆಲಿಯಾ ಭಟ್ ದೇವಸ್ಥಾನ ಭೇಟಿಗೆ ವಿರೋಧ – ಪೊಲೀಸರಿಂದ ಲಾಠಿ ಚಾರ್ಜ್

ಗೋಮಾಂಸ ತಿನ್ನುತ್ತೇನೆ ಎಂದು ಬಹಿರಂಗವಾಗಿಯೇ ಹೇಳಿಕೊಂಡಿರುವ ವಿವೇಕ್ ಅಗ್ನಿಹೋತ್ರಿ ಸಿನಿಮಾಗಳನ್ನು ಬಹಿಷ್ಕರಿಸಬೇಕು ಮತ್ತು ಅವರನ್ನೂ ಯಾವುದೇ ದೇವಸ್ಥಾನದ ಒಳಗೆ ಬಿಡಕೂಡದು ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ರಣಬೀರ್ ಪರ ನಿಂತಿದ್ದ ಸಾಕಷ್ಟು ಅಭಿಮಾನಿಗಳು ಈ ವಿಡಿಯೋವನ್ನು ವೈರಲ್ ಮಾಡುತ್ತಿದ್ದಾರೆ. ಕೇವಲ ರಣಬೀರ್ ಗಷ್ಟೇ ಈ ಬಿಸಿ ತಾಗಬಾರದು, ವಿವೇಕ್ ಅಗ್ನಿಹೋತ್ರಿ ಮೇಲೂ ಕ್ರಮ ಆಗಬೇಕು ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.

ದಿ ಕಾಶ್ಮೀರ್ ಸಿನೆಮಾದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿಯವರನ್ನು ಹೊತ್ತು ಮೆರೆಸಿದ್ದ, ಹಿಂದೂಪರ ಸಂಘಟನೆಗಳ ಸದಸ್ಯರು, ಈಗ ಅವರ ಮೇಲೆ ಯಾವ ಕ್ರಮ ಕೈಗೊಳ್ಳುತ್ತಾರೆ ಎಂದು ರಣಬೀರ್ ಕಪೂರ್ ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ.  ಇದನ್ನೂ ಓದಿ : ಬಾಲಿವುಡ್ ಟ್ರೋಲಿಗರಿಗೆ ‘ಬ್ರಹ್ಮಾಸ್ತ್ರ’ವಾದ ಆಲಿಯಾ ಮಾತು – ಮತ್ತೊಂದು ‘ಫ್ಲಾಪ್ ಬಸ್ಟರ್’ ಖಚಿತನಾ?

LEAVE A REPLY

Please enter your comment!
Please enter your name here