No Result
View All Result
ಬೆಂಗಳೂರು ಮತ್ತು ಮೈಸೂರು (Bengaluru-Mysuru Expressway) ಎಕ್ಸ್ಪ್ರೆಸ್ ವೇನಲ್ಲಿ ಪ್ರಯಾಣಿಸುವ ವಾಹನ ಸವಾರರೇ ಎಚ್ಚರ. ಎಕ್ಸ್ಪ್ರೆಸ್ವೇನಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ರೆ ನೀವು ಕ್ಯಾಮರಾ ಕಣ್ಣಿಗೆ ಬೀಳ್ತೀರಿ, ನಿಮ್ಮ ಮನೆ ಬಾಗಿಲಿಗೆ ಟ್ರಾಫಿಕ್ ಪೊಲೀಸರು ದಂಡ ಪಾವತಿಸುವಂತೆ ನೋಟಿಸ್ ಕಳಿಸ್ತಾರೆ.
ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇನಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕ್ಯಾಮರಾ ತಂತ್ರಜ್ಞಾನವನ್ನು ಬಳಸಿ ಸಂಚಾರಿ ನಿಯಮಗಳ ಉಲ್ಲಂಘನೆಗೆ ದಂಡ ಹಾಕಲಾಗುತ್ತಿದೆ ಮತ್ತು ದಂಡ ಕಟ್ಟುವಂತೆ ವಾಹನ ಮಾಲೀಕರಿಗೆ ನೋಟಿಸ್ ನೀಡಲಾಗುತ್ತಿದೆ.
ಪೊಲೀಸ್ ಇಲಾಖೆ (Karnataka Police) ಮಾಹಿತಿ ಪ್ರಕಾರ ಮೇ 1ರಿಂದ ಮೇ 15ರವರೆಗೆ ಕೇವಲ 15 ದಿನದಲ್ಲಿ ಎಕ್ಸ್ಪ್ರೆಸ್ವೇನಲ್ಲಿ ಸಂಚಾರಿ ನಿಯಮ (Traffic Rules) ಉಲ್ಲಂಘಿಸಿದ 12,192 ಮಂದಿಗೆ ದಂಡ ಹಾಕಲಾಗಿದೆ.
ಎಕ್ಸ್ಪ್ರೆಸ್ ವೇನಲ್ಲಿ ಮೊಬೈಲ್ ಮಾತಾಡ್ಕೊಂಡು ಚಾಲನೆ ಮಾಡ್ತಿದ್ದ ಕೆಎಸ್ಆರ್ಟಿಸಿ (KSRTC) ಬಸ್ ಚಾಲಕರಿಗೂ ನೋಟಿಸ್ ಕಳುಹಿಸಲಾಗಿದೆ.
ಎಕ್ಸ್ಪ್ರೆಸ್ ವೇನಲ್ಲಿ ಗಂಟೆಗೆ 100 ಕಿಲೋ ಮೀಟರ್ಗಿಂತ ಅಧಿಕ ವೇಗದಲ್ಲಿ ಪ್ರಯಾಣಿಸುವಂತಿಲ್ಲ.
ವಾಹನ ಚಾಲನೆ ವೇಳೆ ಮೊಬೈಲ್ನಲ್ಲಿ (Mobile Phone) ಮಾತಾಡುವುದು, ಮುಂಭಾಗದಲ್ಲಿ ಕೂತವರು ಸೀಟ್ ಬೆಲ್ಟ್ (Seat Belt) ಧರಿಸದೇ ಇರುವುದು, ನಿಗದಿಪಡಿಸಿದ ಮಿತಿಗಿಂತ ಅಧಿಕ ವೇಗದಲ್ಲಿ ಚಾಲನೆ, ಲೇನ್ ಶಿಸ್ತನ್ನು ಕಾಪಾಡಿಕೊಳ್ಳದೇ ಲೇನ್ ನಿಯಮಗಳ ಉಲ್ಲಂಘನೆ ಹೀಗೆ ಎಲ್ಲ ರೀತಿ ಸಂಚಾರಿ ನಿಯಮಗಳ ಉಲ್ಲಂಘನೆಯನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯಲಾಗುತ್ತಿದೆ.
ಯಾವ ಸ್ಥಳದಲ್ಲಿ ನಿಯಮ ಉಲ್ಲಂಘನೆ ಮಾಡಲಾಗಿದೆ, ಎಷ್ಟೊತ್ತಿಗೆ ನಿಯಮ ಉಲ್ಲಂಘನೆ ಮಾಡಲಾಗಿದೆ, ಯಾವ ನಿಯಮ ಉಲ್ಲಂಘಿಸಲಾಗಿದೆ ಮತ್ತು ಆ ನಿಯಮ ಉಲ್ಲಂಘಿಸಿದ್ದಕ್ಕೆ ದಂಡದ ಮೊತ್ತ ಎಷ್ಟು ಎಂಬ ಮಾಹಿತಿಯನ್ನು ನೋಟಿಸ್ನಲ್ಲಿ ನೀಡಲಾಗುತ್ತದೆ.
ಕ್ಯಾಮರಾದಲ್ಲಿ ಸೆರೆಯಾಗುವ ವಾಹನದ ನೋಂದಣಿ ಸಂಖ್ಯೆ ಆಧರಿಸಿ ವಾಹನ ಮಾಲೀಕರಿಗೆ ದಂಡ ವಿಧಿಸಲಾಗುತ್ತದೆ.
ನೋಟಿಸ್ ಕಳುಹಿಸಿದ 7 ದಿನಗಳ ಒಳಗಾಗಿ ದಂಡ ಪಾವತಿ ಮಾಡ್ಬೇಕು. ಇಲ್ಲವಾದ್ರೆ ಗರಿಷ್ಠ 6 ತಿಂಗಳ ಜೈಲು ಶಿಕ್ಷೆ ಅಥವಾ 5 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ.
No Result
View All Result
error: Content is protected !!