ನಟ ರಣ್​ಬೀರ್, ಆಲಿಯಾ ಭಟ್ ದೇವಸ್ಥಾನ ಭೇಟಿಗೆ ವಿರೋಧ – ಪೊಲೀಸರಿಂದ ಲಾಠಿ ಚಾರ್ಜ್

Brahmastra

ಬ್ರಹ್ಮಾಸ್ತ್ರ (Brahmastra) ಸಿನೆಮಾದ ನಾಯಕ ನಟಿ ರಣ್​ಬೀರ್ ಕಪೂರ್ ಮತ್ತು ನಟಿ ಆಲಿಯಾ ಭಟ್ ಉಜ್ಜಯಿನಿಯ ಮಹಾಕಾಲೇಶ್ವರ ಜ್ಯೋತೀರ್ಲಿಂಗ ದೇವಸ್ಥಾನಕ್ಕೆ ಭೇಟಿ ನೀಡುವುದನ್ನು ವಿರೋಧಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ ದಳದ ಕಾರ್ಯಕರ್ತರು ದೇವಸ್ಥಾನದ ಹೊರಗಡೆ ಪ್ರತಿಭಟನೆ ನಡೆಸಿದ್ದಾರೆ.

ದೇವಸ್ಥಾನಕ್ಕೆ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಬೇಟಿ ನೀಡುತ್ತಾರೆ ಎಂದು ತಿಳಿಯುತ್ತಿದ್ದಂತೆಯೇ ಹಿಂದೂಪರ ಸಂಘಟನೆಗಳ ಸದಸ್ಯರು ದೇವಸ್ಥಾನದ ಗೇಟ್​ನ ಮುಂದೆ ಜಮಾಯಿಸಿದ್ದರು. ದೇವಸ್ಥಾನಕ್ಕೆ ಬಂದ ರಣ್​ಬೀರ್ ಹಾಗೂ ಆಲಿಯಾಗೆ ಕಪ್ಪು ಬಟ್ಟೆ ಪ್ರದರ್ಶಿಸಿದ್ದಾರೆ. ಈ ಗುಂಪನ್ನು ಹತೋಟಿಗೆ ತರಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ.

ಮುಂಬೈ, ಚೆನ್ನೈ ಮತ್ತು ಹೈದ್ರಾಬಾದ್​ನಲ್ಲಿ ಪ್ರಚಾರ ಮುಗಿಸಿದ ನಂತರ ಬ್ರಹ್ಮಾಸ್ತ್ರ (Brahmastra) ಚಿತ್ರದ ಕಲಾವಿದರಾದ ರಣಬೀರ್ ಕಪೂರ್, ಆಲಿಯಾ ಭಟ್​​ ಅವರು ನಿರ್ದೇಶಕ ಅಯಾನ್ ಮುಖರ್ಜಿಯೊಂದಿಗೆ ಉಜ್ಜಯಿನಿಯಲ್ಲಿರುವ ಮಹಾಕಾಲೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಈ ಬಗ್ಗೆ ನಟಿ ಆಲಿಯಾ ಭಟ್ ಸಾಮಾಜಿಕ ಜಾಲತಾಣಗಳಲ್ಲಿ ನಾವು ಉಜ್ಜಯಿನಿಗೆ ಬರುತ್ತಿದ್ದೇವೆ ಎಂದು ಮಾಹಿತಿ ಹಂಚಿಕೊಂಡಿದ್ದರು.

ನಟಿ ಆಲಿಯಾ ಭಟ್ ಗರ್ಭಿಣಿಯಾಗಿರುವುದರಿಂದ ಗಲಾಟೆ ನಡೆಯುತ್ತಿರುವ ಕಾರಣಕ್ಕೆ ದೇವರ ದರ್ಶನ ಪಡೆದುಕೊಳ್ಳದೇ ಇಂದೋರ್​ನಿಂದ ವಾಪಾಸು ಮುಂಬೈಗೆ ತೆರಳಿದ್ದಾರೆ ಎಂದು ಉಜ್ಜಯಿನಿ ಜಿಲ್ಲಾಧಿಕಾರಿ ಆಶಿಶ್ ಸಿಂಗ್ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ : ಬಾಲಿವುಡ್ ಟ್ರೋಲಿಗರಿಗೆ ‘ಬ್ರಹ್ಮಾಸ್ತ್ರ’ವಾದ ಆಲಿಯಾ ಮಾತು – ಮತ್ತೊಂದು ‘ಫ್ಲಾಪ್ ಬಸ್ಟರ್’ ಖಚಿತನಾ?

LEAVE A REPLY

Please enter your comment!
Please enter your name here