ADVERTISEMENT
ಲೋಕಸಭಾ ಚುನಾವಣೆಯಲ್ಲಿ (Loksabha Election) ಇನ್ನೂ ಮೂರು ಹಂತದಲ್ಲಿ 163 ಕ್ಷೇತ್ರಗಳಿಗೆ ಚುನಾವಣೆ ಬಾಕಿ ಇರುವ ಹೊತ್ತಲ್ಲಿ ಕಾಂಗ್ರೆಸ್ ಮತ್ತೊಂದು ಮಹತ್ವದ ಘೋಷಣೆ ಮಾಡಿದೆ.
ಲೋಕಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದರೆ ಪ್ರತಿ ಬಡ ಕುಟುಂಬಕ್ಕೆ (Poor Families) ತಿಂಗಳಿಗೆ 10 ಕೆಜಿ ಆಹಾರ ಧಾನ್ಯವನ್ನು (Ration) ಉಚಿತವಾಗಿ ನೀಡುವುದಾಗಿ ಘೋಷಿಸಿದೆ.
ಈ ಬಗ್ಗೆ ಸ್ವತಃ ರಾಹುಲ್ ಗಾಂಧಿಯವರೇ (Rahul Gandhi) ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ನೀಡಿದ್ದಾರೆ.
ದೇಶದ ಬಡ ಕುಟುಂಬಗಳಿಗಾಗಿ ಕಾಂಗ್ರೆಸ್ (Congress) ಮತ್ತೊಂದು ದೊಡ್ಡ ನಿರ್ಧಾರವನ್ನು ಕೈಗೊಂಡಿದೆ – ನಮ್ಮ ಸರ್ಕಾರ ನಿಮಗೆ 5 ಅಲ್ಲ ಬದಲಿಗೆ 10 ಕೆಜಿ ಆಹಾರ ಧಾನ್ಯವನ್ನು ಉಚಿತವಾಗಿ ನೀಡಲಿದೆ.
ಯುಪಿಎ ಸರ್ಕಾರದ ಅವಧಿಯಲ್ಲಿ ನಾವು ಆಹಾರ ಹಕ್ಕು ಕಾಯ್ದೆಯನ್ನು (Food Security Act) ತಂದು ಅನ್ನದ ಹಕ್ಕನ್ನು ಕಾನೂನುಬದ್ಧಗೊಳಿಸಿದ್ವಿ. 10 ಕೆಜಿ ಆಹಾರ ಧಾನ್ಯ ಆ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆಯಾಗಿದೆ.
10 ಕೆಜಿ ಪಡಿತರ ಮತ್ತು ತಿಂಗಳಿಗೆ 8,500 ರೂಪಾಯಿಯು ಕೋಟ್ಯಂತರ ಕುಟುಂಬಗಳನ್ನು ಬಡತನದಿಂದ ಹೊರ ತಂದು ದೇಶದ ಅರ್ಥ ವ್ಯವಸ್ಥೆಗೆ ಹೊಸ ದಿಕ್ಕು ನೀಡಲಿದೆ.
ನರೇಂದ್ರ ಮೋದಿ (Narendra Modi) 20-25 ಉದ್ಯಮಿಗಳನ್ನು ಸೃಷ್ಟಿಸಿದರು ಮತ್ತು ಅದಾನಿಗಳ ಸರ್ಕಾರವನ್ನು ನಡೆಸಿದರು, ನಾವು ಕೋಟ್ಯಂತರ ಲಕ್ಷಾಧಿಪತಿಗಳನ್ನು ಮಾಡಲಿದ್ದೇವೆ ಮತ್ತು ಹಿಂದೂಸ್ತಾನಿಗಳ ಸರ್ಕಾರ ನಡೆಸುತ್ತೇವೆ
ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಉಚಿತ ಆಹಾರ ಧಾನ್ಯದ ಹೆಚ್ಚಳದಿಂದಾಗಿ 80 ಕೋಟಿ ಜನರಿಗೆ ಅನುಕೂಲವಾಗಲಿದೆ.
ಪ್ರಧಾನಿ ಮೋದಿ ಸರ್ಕಾರ ಬಡ ಕುಟುಂಬಗಳಿಗೆ 5 ಕೆಜಿ ಉಚಿತ ಪಡಿತರ ನೀಡುತ್ತಿದ್ದು ಇದೇ ಜನವರಿಯಲ್ಲಿ ಆ ಯೋಜನೆಯನ್ನು ಮುಂದಿನ 5 ವರ್ಷಕ್ಕೆ ವಿಸ್ತರಿಸಲಾಗಿತ್ತು.
ADVERTISEMENT