ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಹಾಸನ ಲೋಕಸಭಾ ಕ್ಷೇತ್ರದ ಸಂಸದ ಪ್ರಜ್ವಲ್ ರೇವಣ್ಣ ದೇಶ ಬಿಟ್ಟು ಓಡಿಹೋಗಿ ಇವತ್ತಿಗೆ 20 ದಿನ ದಿನ.
ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ತೆಯಾಗಿರುವ ಮಹಿಳೆಯನ್ನು ಅಪಹರಿಸಿ ಬೆದರಿಸಿ ಬಂಧಿತರಾಗಿದ್ದ ಮಾಜಿ ಸಚಿವ ಹೆಚ್ ಡಿ ರೇವಣ್ಣ ನಿನ್ನೆಯಷ್ಟೇ ಬಿಡುಗಡೆಯಾಗಿದ್ದಾರೆ.
ಮೊಮ್ಮಗ ಎಸಗಿದ್ದಾನೆ ಎನ್ನಲಾಗಿರುವ ಘೋರ ಕೃತ್ಯಗಳ ವೀಡಿಯೋಗಳು ಬಯಲಾದ ಬಳಿಕ ಮತ್ತು ಹಿರಿ ಮಗ ರೇವಣ್ಣ ಬಂಧನದ ಬಳಿಕ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರು ಆಘಾತಗೊಂಡಿದ್ದಾರೆ. ಆ ಆಘಾತದಲ್ಲೇ ಗಡ್ಡ ಬಿಟ್ಟಿದ್ದಾರೆ.
ಈ ಬಗ್ಗೆ ಜೆಡಿಎಸ್ ಶಾಸಕ ಸಮೃದ್ಧಿ ಮಂಜುನಾಥ್ ಪ್ರತಿಕ್ರಿಯಿಸಿದ್ದಾರೆ.
ನಿಮ್ಮನ್ನು ಈ ಸ್ಥಿತಿಯಲ್ಲಿ ನೋಡುತ್ತಿರುವುದು ಮನಸ್ಸಿಗೆ ತುಂಬ ನೋವಾಗಿದೆ, ಕಾಲಾಯ ತಸ್ಮೈ ನಮಃ… ಯಾರೋ ಮಾಡಿದ ತಪ್ಪಿಗೆ ದೊಡ್ಡಗೌಡರ ಹೆಸರಿಗೆ ಮಸಿ ಬಳಸಿ ಅವರ ಘನತೆಗೆ ಚ್ಯುತಿ ತರಲು ಹೊರಟವರಿಗೆ ಕಾಲವೇ ಉತ್ತರ ನೀಡುತ್ತೆ. ಕರ್ನಾಟಕ ರಾಜ್ಯದಿಂದ ದೆಹಲಿ ಕೆಂಪುಕೋಟೆಯ ಮೇಲೆ ಧ್ವಜವನ್ನು ಹಾರಿಸಿದ ಏಕೈಕ ವ್ಯಕ್ತಿ ನಮ್ಮ ಪೂಜ್ಯ ಅಪ್ಪಾಜಿಯವರು ನಿಮ್ಮೊಂದಿಗೆ ನಾವಿದ್ದೇವೆ ಅಪ್ಪಾಜಿ ನೀವು ಆರೋಗ್ಯವಾಗಿ ಧೈರ್ಯವಾಗಿರಿ ನಿಮ್ಮ ಮಾರ್ಗದರ್ಶನದಲ್ಲಿ ಪಕ್ಷವನ್ನು ಕಟ್ಟುವ ಕೆಲಸಕ್ಕೆ ನಾವು ಸೈನಿಕರಾಗುತ್ತೇವೆ
ಎಂದು ಮುಳಬಾಗಿಲು ಕ್ಷೇತ್ರದ ಶಾಸಕರು ಧೈರ್ಯ ಹೇಳಿದ್ದಾರೆ.
ಕಳೆದ ತಿಂಗಳು ಪ್ರಜ್ವಲ್ ವೀಡಿಯೋ ಬಯಲಾದ ಬಳಿಕ ಪ್ರಜ್ವಲ್ರನ್ನು ಪಕ್ಷದಿಂದ ಉಚ್ಛಾಟನೆ ಮಾಡುವಂತೆ ಶಾಸಕ ಸಮೃದ್ಧಿ ಮಂಜುನಾಥ್ ಅವರು ಒತ್ತಾಯಿಸಿದ್ದರು.