ಬಾಲಿವುಡ್ ಟ್ರೋಲಿಗರಿಗೆ ‘ಬ್ರಹ್ಮಾಸ್ತ್ರ’ವಾದ ಆಲಿಯಾ ಮಾತು – ಮತ್ತೊಂದು ‘ಫ್ಲಾಪ್ ಬಸ್ಟರ್’ ಖಚಿತನಾ?

ಸದ್ಯದ ಬಾಲಿವುಡ್ (Bollywood)ಸ್ಥಿತಿಯನ್ನು ರಾಹುಲ್ ಗಾಂಧಿಗೆ (Rahul Gandhi) ನಟಿ ಸ್ವರಾ ಭಾಸ್ಕರ್ (Swara Bhaskar) ಹೋಲಿಕೆ ಮಾಡಿದ್ದಾರೆ. ಸಾಲು ಸಾಲು ಚಿತ್ರಗಳು ಸೋಲು ಕಾಣುತ್ತಿರುವ ಹಿನ್ನೆಲೆಯಲ್ಲಿ ನಟಿ ಸ್ವರಾ ಭಾಸ್ಕರ್, ಬಾಲಿವುಡ್ ಕೂಡ ಪಪ್ಪುಫಿಕೇಶನ್‌ನಿಂದ (Pappufication)ನರಳುತ್ತಿದೆ ಎಂದು ವ್ಯಂಗ್ಯ ಮಾಡಿದ್ದಾರೆ.

ಸ್ವರಾ ಭಾಸ್ಕರ್ ಹೀಗೆ ಹೇಳುತ್ತಿರುವುದಕ್ಕೂ ಕಾರಣವಿದೆ, ಸದ್ಯ ಬಾಲಿವುಡ್‌ನಲ್ಲಿ ಬಾಯ್ಕಾಟ್ ಪರ್ವ ನಡೆಯುತ್ತಿದೆ. ಸುಶಾಂತ್ ಸಿಂಗ್ ರಜಪೂತ್ (Sushant singh Rajaput)ಮರಣ ದ ನಂತರ ಬಾಲಿವುಡ್ ಮಾಫಿಯಾ (Bollywood Mafia), ನೆಫೋಟಿಸಂ (Nepotism)ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

ಅಮಿರ್ ಖಾನ್ (Amir Khan)ನಟನೆಯ ಲಾಲ್‌ಸಿಂಗ್ ಚಡ್ಡಾ (Lal Singh Chadda )ರಿಲೀಸ್ ವೇಳೆ ಶುರುವಾದ ಬಾಯ್ಕಾಟ್ (Boycott) ಕಿಡಿಯ ಟ್ರೆಂಡ್ ಕಾಳ್ಗಿಚ್ಚಿನಂತೆ ಹಬ್ಬಿ, ಆ ಸಿನಿಮಾದ ಗಳಿಕೆ ಮೇಲೆ ಭಾರೀ ಪ್ರಭಾವ ಬೀರಿತ್ತು. ರಿಲೀಸ್‌ಗೆ ಮುನ್ನ, ಚಿತ್ರದ ನಾಯಕಿ ಕರೀನಾ ಕಪೂರ್ (Kareena Kapoor)‘ಇಷ್ಟ ಇಲ್ಲ ಅಂದ್ರೆ ಸಿನಿಮಾ ನೋಡಬೇಡಿ’ ಎಂದಿದ್ದ ಮಾತುಗಳು ತೀವ್ರ ವಿವಾದಕ್ಕೆ ಕಾರಣವಾಯಿತು. ನಂತರ ತಪ್ಪಿನ ಅರಿವಾಗಿ ತಪ್ಪಾಯ್ತು.. ತಪ್ಪಾಯ್ತು ಎಂದು ಬೇಡಿಕೊಂಡರೂ, ನಡೆಯಬೇಕಿದ್ದ ನಷ್ಟ ನಡೆದುಹೋಗಿತ್ತು.

ಈಗ ಕರೀನಾ ಮಾದರಿಯಲ್ಲಿಯೇ ಆಲಿಯಾ ಭಟ್ (Alia Bhatt)ಕೂಡ ಬಾಯಿ ಜಾರಿದ್ದು, ಟ್ರೋಲಿಂಗ್ ಮತ್ತೆ ಶುರುವಾಗಿದೆ. ಇತ್ತೀಚಿಗೆ ಆಲಿಯಾ ಭಟ್ ಆಂಗ್ಲ ಮಾಧ್ಯಮಕ್ಕೆ ಸಂದರ್ಶನ ನೀಡಿದ್ದರು. ಈ ವೇಳೆ ನೆಪೋಟಿಸಂ, ಬಾಯ್ಕಾಟ್ ಟ್ರೆಂಡ್ (Trend)ಬಗ್ಗೆ ಸ್ಪಂದಿಸಿದ್ದರು.

ಇಂತಹ ಕುಟುಂಬದಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿಕೊಂಡು ನಾನು ಜನಿಸಿದ್ನಾ..? ಸಿನಿಮಾ ಹಿನ್ನೆಲೆ ಇರುವ ಕುಟುಂಬದಲ್ಲಿ ಹುಟ್ಟಿದಲ್ಲಿ, ಅದು ಮೊದಲ ಸಿನಿಮಾವರೆಗಷ್ಟೇ ಉಪಯೋಗ ಆಗುತ್ತದೆ. ಅಸಲಿಗೆ ಆ ಕುಟುಂಬದಲ್ಲಿ ಜನಿಸಿರುವುದೇ ತಪ್ಪು ಎಂದರೇ ಹೇಗೆ..?ನಿಮಗೆ ನಾನು ಇಷ್ಟ ಇಲ್ಲ ಎಂದರೇ ನನ್ನನ್ನು ನೋಡಬೇಡಿ.. ನಾನೇನು ಮಾಡಲು ಸಾಧ್ಯ ಇಲ್ಲ ಎಂದು ತಮ್ಮದೇ ಶೈಲಿಯಲ್ಲಿ ಸ್ವಲ್ಪ ಖಾರವಾಗಿಯೇ ಮಾತನಾಡಿದ್ದರು.

ಸೋಷಿಯಲ್ ಮೀಡಿಯಾದಲ್ಲಿ (Social Media)ಆಲಿಯಾ ಮಾತುಗಳು ವೈರಲ್ ಆದ ಕೂಡಲೇ ನೆಟ್ಟಿಗರು ಟ್ರೋಲಿಂಗ್ ಶುರು ಮಾಡಿದರು. ಆಕೆಯ ಕೋರಿಕೆಯನ್ನು ನಾವು ಪರಿಗಣಿಸೋಣ. ಬ್ರಹ್ಮಾಸ್ತ್ರ.. (bramhastra)೫೦೦ ಕೋಟಿ ಫ್ಲಾಪ್ ಬಸ್ಟರ್ (Flop Buster)ಮಾಡೋಣ.. ನಾವು ಅವರಿಗೆ ಕೇವಲ ಟಿಕೆಟ್‌ನಂತೆ ಮಾತ್ರ.. ಅವರಿಗೆ ಪ್ರೇಕ್ಷಕರ ದುಡ್ಡು ಮಾತ್ರ ಬೇಕು.. ಅವರಿಗೆ ನಿಮ್ಮ ಅಗತ್ಯವಲ್ಲ.. ಆಕೆಯ ಮುಂದಿನ ಸಿನಿಮಾಗಳನ್ನು ಬಾಯ್ಕಾಟ್ ಮಾಡೋಣ ಎಂದು ಟ್ರೋಲ್ (Troll)ಮಾಡುತ್ತಿದ್ದಾರೆ.

ಆಲಿಯಾ ಮಾತುಗಳು ಬ್ರಹ್ಮಾಸ್ತ್ರದ ಮೇಲೆ ಪರಿಣಾಮ ಬೀರು ಸಾಧ್ಯತೆಗಳು ಹೆಚ್ಚಿವೆ. ಈ ಸಿನಿಮಾ ಮೂರು ಭಾಗಗಳಲ್ಲಿ ಬರಲಿದೆ. ಮೊದಲ ಭಾಗ ಶಿವ(Shiva)ನನ್ನು ಸೆಪ್ಟೆಂಬರ್‌ನಲ್ಲಿ ರಿಲೀಸ್ ಮಾಡಲು ತಯಾರಿಗಳು ನಡೆದಿವೆ. ಈ ಸಿನಿಮಾದಲ್ಲಿ ರಣಬೀರ್ ಕಪೂರ್ (Ranbir Kapoor), ಆಲಿಯಾ ಭಟ್, ನಾಗಾರ್ಜುನ (Nagarjuna), ಅಮಿತಾಬ್‌(Amitaab)ನಂತಹ ಸ್ಟಾರ್ ನಟರೇ ಇದರಲ್ಲಿ ನಟಿಸಿದ್ದಾರೆ. ೫೦೦ ಕೋಟಿ ರೂಪಾಯಿಯ ಬಿಗ್ ಬಜೆಟ್ (Big Budget Movie) ಸಿನಿಮಾ ಇದು. ಇಷ್ಟು ದೊಡ್ಡ ಸಿನಿಮಾ ರಿಲೀಸ್‌ಗೆ ಮೊದಲು ಆಲಿಯಾ ಆಡಿದ ಮಾತುಗಳು ಚಿತ್ರತಂಡಕ್ಕೆ ತಲೆನೋವಾಗಿ ಪರಿಣಮಿಸಿದೆ.

ಸದ್ಯ ಬಾಲಿವುಡ್ ಸಂಕಷ್ಟದ ಸ್ಥಿತಿಯಲ್ಲಿರುವಾಗ ಆಲಿಯಾ ಭಟ್ ಹೀಗೆ ಮಾತನಾಡಿದ್ದು ಸರಿಯಲ್ಲ ಎಂದು ಸಿನಿಮಾ ಲೋಕ ಅಭಿಪ್ರಾಯಪಡುತ್ತಿದೆ. ಬ್ರಹ್ಮಾಸ್ತ್ರ ರಿಲೀಸ್‌ಗೆ ಒಂದಿಷ್ಟು ಸಮಯ ಇದೆ. ಅಷ್ಟರಲ್ಲಿ ವಿವಾದ ತಣ್ಣಗಾಗುತ್ತಾ..? ಅಥವಾ ಬಾಯ್ಕಾಟ್ ಕಿಡಿ ಬ್ರಹ್ಮಾಸ್ತ್ರವನ್ನು ಆಪೋಷನ ಪಡೆಯುತ್ತಾ ಎಂಬುದನ್ನು ಕಾದುನೋಡಬೇಕಿದೆ.

LEAVE A REPLY

Please enter your comment!
Please enter your name here