ಮಂಗಳೂರು: ಕೆಎಂಎಫ್​ನಲ್ಲಿ ನೌಕರಿ ಕೊಡಿಸುವುದಾಗಿ ವಂಚನೆ – ಮೂವರ ಬಂಧನ

ಕೆಎಂಎಫ್​ನಲ್ಲಿ (KMF) ನೌಕರಿ ಕೊಡಿಸುವುದಾಗಿ ನಂಬಿಸಿದ ವಂಚಿಸಿದ ಪ್ರಕರಣದಲ್ಲಿ ಮಂಗಳೂರು ಪೊಲೀಸರು (Mangaluru) ಮೂವರನ್ನು ಬಂಧಿಸಿದ್ದಾರೆ.
ಪುತ್ತೂರು ತಾಲೂಕಿನ ಬಲ್ನಾಡು ಗ್ರಾಮದ ರಮೇಶ್​ ಪೂಜಾರಿ ಬಿ, ಪಡೀಲ್​ ಬಳಿಯ ಅಲಪೆಯ 36 ವರ್ಷದ ಚಂದ್ರಾವತಿ, ಬೆಂಗಳೂರಿನ ಎಲೆಕ್ಟ್ರಾನಿಕ್​ ಸಿಟಿಯ ನಿವಾಸಿ ಸುರೇಂದ್ರ ರೆಡ್ಡಿ ಬಂಧಿತರು.
138 ಮಂದಿ ನೌಕರಿ ಆಕಾಂಕ್ಷಿಗಳಿಗೆ ಮಂಗಳೂರಲ್ಲಿರುವ ಕೆಎಂಎಫ್​ ಡೈರಿಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ವಂಚಿಸಿದ್ದರು.
ಈ ಸಂಬಂಧ ಆಗಸ್ಟ್​ 18ರಂದು ಮಂಗಳೂರಿನ ಸೈಬರ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬಂಧಿತರನ್ನು ಕೋರ್ಟ್​​ಗೆ ಹಾಜುರುಪಡಿಸಿದ ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

LEAVE A REPLY

Please enter your comment!
Please enter your name here