ಕರ್ನಾಟಕದಲ್ಲಿ ಎರಡನೇ ಹಂತದಲ್ಲಿ ಶೇಕಡಾ 71.84ರಷ್ಟು ಮತದಾನ ಆಗಿದೆ ಎಂದು ಬುಧವಾರ ರಾತ್ರಿ 10.29ರ ವೇಳೆಗೆ ಭಾರತೀಯ ಚುನಾವಣಾ ಆಯೋಗ ಅಂತಿಮ ಅಂಕಿಅಂಶವನ್ನು ಪ್ರಕಟಿಸಿದೆ.
ಮೇ 7ರಂದು ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆದಿತ್ತು.
ಆದರೆ ಯಾವ ಲೋಕಸಭಾ ಕ್ಷೇತ್ರಗಳಲ್ಲಿ ಎಷ್ಟೆಷ್ಟು ಮತದಾನ ಆಗಿದೆ ಎಂಬ ಅಂತಿಮ ಅಂಕಿಅಂಶವನ್ನು ಇನ್ನೂ ಪ್ರಕಟ ಮಾಡಿಲ್ಲ. ಕಲಬುರಗಿ ಚುನಾವಣಾಧಿಕಾರಿ ಪ್ರಕಟಿಸಿರುವ ಮಾಹಿತಿ ಪ್ರಕಾರ ಕಲಬುರಗಿ ಕ್ಷೇತ್ರದಲ್ಲಿ ಶೇಕಡಾ 62.24 ರಷ್ಟು ಮತದಾನವಾಗಿದೆ
ಏಪ್ರಿಲ್ 26ರಂದು ನಡೆದಿದ್ದ ಮೊದಲ ಹಂತದಲ್ಲಿ ಶೇಕಡಾ 69.56ರಷ್ಟು ಮತದಾನ ನಡೆದಿತ್ತು. ಮೊದಲ ಹಂತದಲ್ಲಿ ಶೇಕಡಆ 69.48ರಷ್ಟು ಪುರುಷ ಮತದಾರರು ಮತ್ತು ಶೇಕಡಾ 69.56ರಷ್ಟು ಮಹಿಳಾ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು.
ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಅತ್ಯಧಿಕ ಶೇಕಡಾ 81.67ರಷ್ಟು ಮತದಾನ ನಡೆದಿತ್ತು.
ADVERTISEMENT
ADVERTISEMENT