ADVERTISEMENT
ಇವತ್ತು ಬೆಳಗ್ಗೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕನ್ನಡದ ನಟಿ ಪವಿತ್ರಾ ಜಯರಾಂ ಅವರು ಸಾವನ್ನಪ್ಪಿದ್ದಾರೆ.
ಆಂಧ್ರ ಪ್ರದೇಶದ ಕರ್ನೂಲ್ನಲ್ಲಿ ಅಪಘಾತ ಸಂಭವಿಸಿದೆ.ಪವಿತ್ರಾ ಜಯರಾಂ ಅವರು ತಮ್ಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಕಾರಿನಲ್ಲಿ ಕುಟುಂಬಸ್ಥರು ಇದ್ದರು.
ಪವಿತ್ರಾ ಜಯರಾಂ ಅವರು ಪ್ರಯಾಣಿಸುತ್ತಿದ್ದ ಕಾರು ಮತ್ತು ಬಸ್ ನಡುವೆ ಡಿಕ್ಕಿ ಆಗಿ ಪವಿತ್ರಾ ಅವರು ಮೃತಪಟ್ಟಿದ್ದಾರೆ.
ಮೂಲತಃ ಕನ್ನಡಿಗರಾದ ಪವಿತ್ರಾ ಜಯರಾಂ ಅವರು ತೆಲುಗಿನ ತ್ರಿನಯನಿ ಧಾರವಾಹಿಯ ಮೂಲಕ ಮನೆಮಾತಾಗಿದ್ದರು.
ಕನ್ನಡದ ‘ರೋಬೋ ಫ್ಯಾಮಿಲಿ’ ನಟಿಸಿದ್ದರು.
ಮಂಡ್ಯ ಜಿಲ್ಲೆಯ ಹನೆಕೆರೆಯ ಇವರು ‘ಜೋಕಾಲಿ’, ‘ನೀಲಿ’, ‘ರಾಧಾರಮಣ’ ಇನ್ನೂ ಕೆಲವು ಧಾರಾವಾಹಿಗಳಲ್ಲೂ ನಟಿಸಿದ್ದರು.
ADVERTISEMENT