ತಿರುಪತಿಯಲ್ಲಿ ನಟಿ ಅರ್ಚನಾ ಗೌತಮ್ ಗಲಾಟೆ – ನಿಜಕ್ಕೂ ಅಂದು ನಡೆದದ್ದೇನು..?

Archana Gautam

ಉತ್ತರ ಪ್ರದೇಶದ ನಟಿ ಹಾಗೂ ರಾಜಕಾರಣಿ ಅರ್ಚನಾ ಗೌತಮ್ (Archana Gautam) ಅವರು ಆಂದ್ರಪ್ರದೇಶದ ತಿರುಪತಿ ದೇವಸ್ಥಾನದಲ್ಲಿ ದೇವರ ದರ್ಶನಕ್ಕೆ 10 ಸಾವಿರ ರೂ. ಕೇಳುತ್ತಿದ್ದಾರೆ ಹಾಗೂ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಗಂಭೀರ ಆರೋಪ ಮಾಡಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿಡಿಯೋ ಹರಿಬಿಟ್ಟಿದ್ದರು. ಇದೀಗ, ಅರ್ಚನಾ ಈ ವಿಡಿಯೋ ಬಗ್ಗೆ ಪ್ರತಿಕ್ರಿಯೆ ನೀಟಿರುವ ತಿರುಪತಿ ದೇವಸ್ಥಾನ ಮಂಡಳಿ ಇದು ಸುಳ್ಳು ಆರೋಪ ಎಂದು ಹೇಳಿದೆ.

ಈ ಬಗ್ಗೆ ಆಂಧ್ರಪ್ರದೇಶ ಸರ್ಕಾರ ಫ್ಯಾಕ್ಟ್​ ಚೆಕ್ ವರದಿಯನ್ನು ಪ್ರಕಟಮಾಡಿದೆ. ಈ ವರದಿಯಲ್ಲಿ, ಉತ್ತರಪ್ರದೇಶ ಮೂಲದ ಶಿವಕಾಂತ್ ತಿವಾರಿ, ನಟಿ ಹಾಗೂ ರಾಜಕಾರಣಿ ಅರ್ಚನಾ ಗೌತಮ್ ಸೇರಿದಂತೆ 7 ಜನ ತಿರುಪತಿ ದರ್ಶನಕ್ಕಾಗಿ ಅಗಸ್ಟ್​ 30 ರಂದು ಕೇಂದ್ರ ಸರ್ಕಾರದ ಮಂತ್ರಿಯೊಬ್ಬರ ಶಿಫಾರಸ್ಸು ಪತ್ರ ತೆಗೆದುಕೊಂಡು ಬಂದಿದ್ದರು. ಇದನ್ನೂ ಓದಿ : ತಿಮ್ಮಪ್ಪನ ದರ್ಶನಕ್ಕೆ ಟಿಕೆಟ್ ಕಡ್ಡಾಯ: ದರ ನಿಗದಿ ಮಾಡಿದ ಟಿಟಿಡಿ

ಅವರಿಂದ 300 ರೂ. ಹಣ ಪಡೆದು ದರ್ಶನಕ್ಕಾಗಿ ಟಿಕೆಟ್ ನೀಡಲಾಗುತ್ತು. ಆದರೆ, ಅಂದು ಅವರು ದರ್ಶನ ಮಾಡಿರಲಿಲ್ಲ. ಮತ್ತೆ ಅಗಸ್ಟ್ 31 ರಂದು ಬಂದ ಶಿವಕಾಂತ್ ತಿವಾರಿ ಅದೇ ಟಿಕೆಟ್​ನಲ್ಲಿ ದರ್ಶನಕ್ಕಾಗಿ ಪಟ್ಟು ಹಿಡಿದರು. ಈ ವೇಳೆ ಸಿಬ್ಬಂದಿಗಳ ಆ ಟಿಕೆಟ್​ನ ಅವಧಿ ಮುಕ್ತಾಯವಾಗಿದೆ ಎಂದು ತಿಳಿಸಿದರೂ, ನಟಿ ಸಿಬ್ಬಂದಿಗಳ ವಿರುದ್ಧ ಅವಾಚ್ಯವಾಗಿ ನಿಂದಿಸಿದ್ದರು. ಅನಂತರ 31 ನೇ ದಿನಾಂಕಕ್ಕೆ 300 ರೂ. ಪಡೆದು ಟಿಕೆಟ್ ನೀಡಲಾಗಿತ್ತು. ಆದರೆ, ದರ್ಶನ ಪಡೆಯದೇ ಅವರು ಪೊಲೀಸ್ ಸ್ಟೇಷನ್​ಗೆ ಹೋಗಿದ್ದರು.

ಪೊಲೀಸರು ತಿರುಪತಿ ದರ್ಶನದ ಇಒ ಅಧಿಕಾರಿಗೆ ಕರೆ ಮಾಡಿ ವಿಚಾರಿಸಿದ್ದರು. ಈ ವೇಳೆ ಅಧಿಕಾರಿ ಕಚೇರಿಯಲ್ಲಿ ದಾಖಲಾಗಿದ್ದ ವಿಡಿಯೋವನ್ನು ಪೊಲೀಸರಿಗೆ ಕಳುಹಿಸಿದ್ದರು. ಆಗ ಅಲ್ಲಿಂದ ಮರಳಿ ಕಚೇರಿಗೆ ಬಂದಿದ್ದ ನಟಿಗೆ ಸೆ.1 ರಂದು ದರ್ಶನ ಪಡೆಯಲು ಶ್ರೀವಾಣಿ ಟಿಕೆಟ್ ಪಡೆಯಲು ತಿಳಿಸಿದೆವು. ಈ ಟಿಕೆಟ್ ಗೆ 10500 ರೂ. ನಿಗದಿಪಡಿಸಲಾಗಿದೆ. ( ಇದರಲ್ಲಿ 10 ಸಾವಿರ ರೂ. ಶ್ರೀವಾಣಿ ಟ್ರಸ್ಟ್​ಗೆ, 500 ರೂ. ಟಿಕೆಟ್​ಗೆ) ಆದರೆ, ನಟಿ ಅರ್ಚನಾ ಗೌತಮ್ ಸಿಬ್ಬಂದಿಗೆ ಹಲ್ಲೆ ಮಾಡಿದ್ದು ಅಲ್ಲದೇ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮಾಡಿ 10 ಸಾವಿರ ರೂ ಕೇಳಲಾಗುತ್ತಿದೆ ಎನ್ನುವ ಸುಳ್ಳು ಆರೋಪ ಮಾಡಿದ್ದಾರೆ.

ಈ ಬಗ್ಗೆ ಟಿಟಿಡಿ ಮಂಡಳಿ ಅಧಿಕೃತ ಪ್ರಕಟಣೆ ಹೊರಡಿಸಿದ್ದು, ನಟಿ ಹಾಗೂ ರಾಜಕಾರಣಿ ಅರ್ಚನಾ ಗೌತಮ್ (Archana Gautam) ಮಾಡಿರುವ ಆರೋಪಗಳು ಸುಳ್ಳು. ಭಕ್ತರು ಇಂತಹ ಆಧಾರವಿಲ್ಲದೆ ಹೇಳಿಕೆಗಳನ್ನು ನಂಬಬಾರದು ಎಂದು ತಿಳಿಸಿದೆ. ಇದನ್ನೂ ಓದಿ : ತಿರುಪತಿ ತಿಮ್ಮಪ್ಪನ ಭಕ್ತರಿಗೆ ಇಲ್ಲಿದೆ ಗುಡ್‌ ನ್ಯೂಸ್

LEAVE A REPLY

Please enter your comment!
Please enter your name here