Gujarat Election : ಕಾಂಗ್ರೆಸ್​​​ಗೆ ಬಿಜೆಪಿ ಟಕ್ಕರ್ – ಯುವ ನಾಯಕ ವಘೇಲಾ ಬಿಜೆಪಿ ಸೇರ್ಪಡೆ

Gujarat Election

ಗುಜರಾತ್​ನಲ್ಲಿ ಚುನಾವಣೆ (Gujarat Election) ಸಮೀಪವಾಗುತ್ತಿದೆ. ಈ ಬೆನ್ನಲ್ಲೇ, ಕಾಂಗ್ರೆಸ್​​ಗೆ ಬಿಜೆಪಿ ಅಘಾತ ನೀಡುತ್ತಿದ್ದು, ಯುವ ನಾಯಕರನ್ನು ತನ್ನತ್ತ ಸೆಳೆಯುತ್ತಿದೆ. ಕೆಲ ತಿಂಗಳುಗಳ ಹಿಂದೆಯಷ್ಟೇ ಪಟೇಲ್ ಸಮುದಾಯದ ಯುವ ನಾಯಕ ಹಾರ್ದಿಕ್ ಪಟೇಲ್ ಕಾಂಗ್ರೆಸ್​​ಗೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಇದೀಗ, ಮತ್ತೊಬ್ಬ ಕಾಂಗ್ರೆಸ್​​ ಯುವ ನಾಯಕ ವಿಶ್ವನಾಥ್ ಸಿನ್ಹಾ ವಘೇಲಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಕೆಲವು ದಿನಗಳ ನಂತರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಕೆಲವು ದಿನಗಳ ಹಿಂದೆ ಗುಜರಾತ್ ಯುವ ಕಾಂಗ್ರೆಸ್ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ವಘೇಲಾ ಅವರು ಇಂದು ಗಾಂಧಿನಗರದ ರಾಜ್ಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಆಡಳಿತ ಪಕ್ಷಕ್ಕೆ ಸೇರ್ಪಡೆಗೊಂಡರು. ಗುಜರಾತ್​​ನಲ್ಲಿ ಇನ್ನು ಕೆಲವೇ ತಿಂಗಳುಗಳಲ್ಲಿ ಚುನಾವಣೆ (Gujarat Election) ಘೋಷಣೆಯಾಗುವುದರಿಂದ ಪಕ್ಷಾಂತರ ಪರ್ವ ಮತ್ತಷ್ಟು ಕುತೂಹಲ ಕೆರಳಿದೆ. ಇದನ್ನೂ ಓದಿ : ಗುಜರಾತ್ : ಗುರುವಾರ ಹಾರ್ದಿಕ್ ಪಟೇಲ್ ಬಿಜೆಪಿ ಸೇರ್ಪಡೆ

ವಘೇಲಾ ಅವರೊಂದಿಗೆ ಇತರ ಮಾಜಿ ಯುವ ಕಾಂಗ್ರೆಸ್ ಮತ್ತು ಎನ್‌ಎಸ್‌ಯುಐ(ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ) ನಾಯಕರಾದ ವಿನಯಸಿಂಹ ತೋಮರ್ ಮತ್ತು ನಿಕುಲ್ ಮಿಸ್ತ್ರಿ ಅವರನ್ನು ಬಿಜೆಪಿ ರಾಜ್ಯ ಉಪಾಧ್ಯಕ್ಷ ಗೋರ್ಧನ್ ಝಡಾಫಿಯಾ ಅವರು ಬಿಜೆಪಿ ಧ್ವಜ ನೀಡಿ ಪಕ್ಷಕ್ಕೆ ಸ್ವಾಗತಿಸಿದ್ದಾರೆ.

ಸೆಪ್ಟೆಂಬರ್ 5 ರಂದು ರಾಹುಲ್ ಗಾಂಧಿಯವರ ಗುಜರಾತ್ ಭೇಟಿಗೆ ಮುಂಚಿತವಾಗಿ ರಾಜೀನಾಮೆ ನೀಡಿದ ವಘೇಲಾ, ವಿರೋಧ ಪಕ್ಷದಲ್ಲಿನ ಗುಂಪುಗಾರಿಕೆ ಮತ್ತು ಸ್ವಜನಪಕ್ಷಪಾತದಿಂದಾಗಿ ಕಾಂಗ್ರೆಸ್‌ನ ಅನೇಕ ಯುವ ನಾಯಕರು ಅತೃಪ್ತರಾಗಿದ್ದಾರೆ ಎಂದು ಕಾಂಗ್ರೆಸ್​​ ವಿರುದ್ಧ ವಘೇಲಾ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ : ಗುಜರಾತ್​ನ ‘ಗೋದ್ರಾ ಗಲಭೆ’ : ಪ್ರಧಾನಿ ಮೋದಿ ಸೇರಿದಂತೆ 64 ಜನರಿಗೆ ಕ್ಲೀನ್ ಚಿಟ್

LEAVE A REPLY

Please enter your comment!
Please enter your name here