Liger : ಸಿನೆಮಾದಲ್ಲಿ ತೆಲಂಗಾಣ ಸಿಎಂ ಪುತ್ರಿ ಕಪ್ಪು ಹಣ ಹೂಡಿಕೆ ಆರೋಪ

Liger Black Money

ನಟ ವಿಜಯ್ ದೇವರಕೊಂಡ ಹಾಗೂ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಜೋಡಿಯ ಲೈಗರ್ ಸಿನೆಮಾ ಬಾಕ್ಸ್ ಆಫೀಸ್ನಲ್ಲಿ ದುರಂತ ಅಂತ್ಯಕಂಡಿದೆ. ಆದರೆ, ಇದೀಗ ಈ ಚಿತ್ರದ ಸುತ್ತ ಕಪ್ಪು ಹಣದ ವಿವಾದ (Liger Black Money) ಸುತ್ತಿಕೊಂಡಿದ್ದು, ಇದರಲ್ಲಿ ಟಿಆರ್ಎಸ್ ನಾಯಕಿ ಹಾಗೂ ಮುಖ್ಯಮಂತ್ರಿ ಕೆಸಿಆರ್ ಅವರ ಮಗಳು ಕವಿತಾರ ಹೆಸರು ತಳುಕು ಹಾಕಿಕೊಂಡಿದೆ.

ಬಕ್ಕಾ ಜಡ್ಸನ್ ಎಂಬ ಕಾಂಗ್ರೆಸ್ ನಾಯಕರೊಬ್ಬರು ಜಾರಿ ನಿರ್ದೇಶನಾಲಯಕ್ಕೆ ದೂರು ಸಲ್ಲಿಸಿದ್ದು, ಲೈಗರ್ ಸಿನೆಮಾದ ನಿರ್ಮಾಣದಲ್ಲಿ ಕವಿತಾ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಬಗ್ಗೆ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಕಾಂಗ್ರೆಸ್ ನಾಯಕ ಬಕ್ಕಾ ಜಡ್ಸನ್ ಅವರು, ಕಪ್ಪು ಹಣವನ್ನು ಬಿಳಿಹಣವನ್ನಾಗಿ ಪರಿವರ್ತಿಸಲು ಲೈಗರ್ ಸಿನೆಮಾದ ನಿರ್ಮಾಣ ಮಾಡಲಾಗಿದೆ. ಈ ಕೃತ್ಯದಲ್ಲಿ ಟಿಆರ್ಎಸ್ ನಾಯಕಿ ಕವಿತಾ ಭಾಗಿಯಾಗಿದ್ದಾರೆ. ಲೈಗರ್ ಚಿತ್ರದ ಚಿತ್ರೀಕರಣ ಆರಂಭಕ್ಕೂ ಮುನ್ನ, ಅನೇಕ ರಾಜಕಾರಣಿಗಳಿಗೆ ಕರೆ ಮಾಡಿ ಈ ಚಿತ್ರದಲ್ಲಿ ಹೂಡಿಕೆ ಮಾಡಲು ಕೇಳಿಕೊಂಡಿದ್ದರು. ಇದು ಕಪ್ಪು ಹಣವನ್ನು ಪರಿವರ್ತಿಸಿಸುವ ಸ್ಪಷ್ಟ ಪ್ರಯತ್ನವಾಗಿದೆ. ಅಲ್ಲದೇ, ವಿಜಯ್ ದೇವರಕೊಂಡ ಅವರನ್ನು ಪ್ಯಾನ್ ಇಂಡಿಯಾ ಸ್ಟಾರ್ ಎಂದು ಬಿಂಬಿಸಲು ಕವಿತಾ ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ : ಲೈಗರ್ – ಮೊದಲ ದಿನದ ಕಲೆಕ್ಷನ್ ಎಷ್ಟು..?

ನಟಿ ಚಾರ್ಮಿ ನಿರ್ಮಿಸಿದ ಮತ್ತು ಪುರಿ ಜಗನ್ನಾಥ್ ನಿರ್ದೇಶಿಸಿದ ವಿಜಯ್ ದೇವರಕೊಂಡ ಅವರ ಪ್ಯಾನ್ ಇಂಡಿಯಾ ಚಿತ್ರ ಲೈಗರ್ನಲ್ಲಿ ತೆಲಂಗಾಣದ ಮುಖ್ಯಮಂತ್ರಿ ಕವಿತಾ ರಾವ್ ಅವರ ಹೂಡಿಕೆಯನ್ನು ತನಿಖೆ ಮಾಡಲು ಜಾರಿ ನಿರ್ದೇಶನಾಲಯವನ್ನು ಸಂಪರ್ಕಿಸಲಾಗಿದೆ ಎಂದು ಬಕ್ಕಾ ಜಡ್ಸನ್ ಟ್ವೀಟ್ ಮಾಡಿದ್ದಾರೆ.

ಲೈಗರ್ ಸಿನೆಮಾ ಅತಿ ದೊಡ್ಡ ನಷ್ಟ ಕಂಡಿದೆ. ಆದಾಗ್ಯೂ, ಯಾವುದೇ ಹಣಕಾಸುದಾರರು ಪರಿಹಾರ ಕೇಳಿಕೊಂಡು ಹೊರ ಬರುತ್ತಿಲ್ಲ. ಏಕೆಂದರೆ ಇದರಲ್ಲಿ ಸಾಕಷ್ಟು ಕಪ್ಪುಹಣ (Liger Black Money) ಹೂಡಿಕೆ ಮಾಡಲಾಗಿದೆ. ಈ ಬಗ್ಗೆ ತನಿಖೆ ನಡೆಸಲು ಇಡಿಯನ್ನು ಸಂಪರ್ಕಿಸಿದ್ದೇನೆ. ಟಾಲಿವುಡ್ ಡ್ರಗ್ಸ್ ಪ್ರಕರಣದಲ್ಲಿ ಕವಿತಾ ಈ ಚಲನಚಿತ್ರ ತಾರೆಯರಿಗೆ ಕ್ಲೀನ್ಚಿಟ್ ನೀಡುವ ಮೂಲಕ ಬಾಂಧವ್ಯವನ್ನು ವೃದ್ಧಿಸಿಕೊಂಡಿದ್ದಾರೆ ಎಂಬ ಮತ್ತೊಂದು ಆರೋಪವನ್ನು ಕಾಂಗ್ರೆಸ್ ನಾಯಕ ಬಕ್ಕಾ ಜಡ್ಸನ್ ಮಾಡಿದ್ದಾರೆ. ಇದನ್ನೂ ಓದಿ : Liger – ‘ಅನನ್ಯ’ ಸುಂದರಿ ರಹಸ್ಯಗಳು

ವಿಜಯ್ ದೇವರಕೊಂಡ ಹಾಗೂ ಅನನ್ಯಾ ಜೋಡಿ ನಟನೆಯ ಲೈಗರ್ (Liger Film) ಸಿನೆಮಾ ಅಗಸ್ಟ್ 25 ರಂದು ಬಿಡುಗಡೆಯಾಗಿತ್ತು. ಈ ಚಿತ್ರವನ್ನು ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ನಿರ್ದೇಶನ ಮಾಡಿದ್ದಾರೆ. ನಟಿ ಚಾರ್ಮಿ ಈ ಚಿತ್ರದ ನಿರ್ಮಾಪಕರಾಗಿದ್ದಾರೆ. ಚಿತ್ರ ಬಿಡುಗಡೆಯಾದ ದಿನವೇ ಚಿತ್ರದ ಬಗ್ಗೆ ಪ್ರೇಕ್ಷಕರು ಆಕ್ರೋಶ ವ್ಯಕ್ತಪಡಿಸಿದ್ದರು.

ಆ ಮೂಲಕ ಬಾಕ್ಸ್ ಆಫೀಸ್ನಲ್ಲಿ ಚಿತ್ರದ ಗಳಿಕೆ ತೀರಾ ಕೆಳಮಟ್ಟಕ್ಕೆ ಇಳಿಕೆಯಾಯಿತು. ಈ ಚಿತ್ರದ ಬಜೆಟ್ 95 ರಿಂದ 125 ಕೋ.ರೂ ಎನ್ನಲಾಗಿದೆ. ಆದರೆ, ಚಿತ್ರದ ಇಲ್ಲಿಯವರೆಗಿನ ಗಳಿಕೆ ಕೇವಲ 55.5 ಕೋ.ರೂ ಎನ್ನಲಾಗಿದೆ. ಇದನ್ನೂ ಓದಿ : ಬೆಂಗಳೂರಿಗೆ ಬಂದಾಗೆಲ್ಲ ಪುನೀತ್ ಅಣ್ಣನ್ನ ಮೀಟ್ ಮಾಡ್ತಿದ್ದೆ – ವಿಜಯ್ ದೇವರಕೊಂಡ

LEAVE A REPLY

Please enter your comment!
Please enter your name here