ಮುಸಲ್ಮಾನ ಮಹಿಳಾ ಮತದಾರರ ಬುರ್ಕಾ ತೆಗೆಸಿ ಚೆಕ್ಕಿಂಗ್ ಮಾಡಿದ ಹೈದ್ರಾಬಾದ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ಕೊಂಪೆಲ್ಲ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಐಪಿಸಿ ಸೆಕ್ಷನ್ 171ಸಿ, 186, 505(1)(ಸಿ) ಮತ್ತು ಜನಪ್ರತಿನಿಧಿ ಕಾಯ್ದೆಯ ಕಲಂ 132ರಡಿಯಲ್ಲಿ ಎಫ್ಐಆರ್ ದಾಖಲಾಗಿದೆ.
ಮಲಕಪೇಟೆಯಲ್ಲಿರುವ ಮತಗಟ್ಟೆಯಲ್ಲಿ ಬುರ್ಖಾ ಧರಿಸಿದ್ದ ಮಹಿಳೆಯ ವೋಟರ್ ಐಡಿ ಕಾರ್ಡ್ ಪಡೆದ ಮಾಧವಿ ಲತಾ ಅವರಿಗೆ ಬುರ್ಕಾ ತೆಗೆದು ಮುಖ ತೋರಿಸುವಂತೆ ಸೂಚಿಸಿದ್ದಾರೆ.
171 ಸಿ – ಚುನಾವಣೆಯಲ್ಲಿ ಪ್ರಭಾವ ಬೀರಲು ಯತ್ನಿಸಿದ ಆರೋಪ, 186 – ಸಾರ್ವಜನಿಕ ಅಧಿಕಾರಿಗೆ ಅವರ ಕರ್ತವ್ಯ ನಿರ್ವಹಣೆಗೆ ಅಡ್ಡಿ, 505(1)(c) – ಸಮುದಾಯಗಳ ನಡುವೆ ಪ್ರಚೋದನೆ ಉಂಟು ಮಾಡುವುದು ಮತ್ತು ಜನಪ್ರನಿಧಿ ಕಾಯ್ದೆಯ ಕಲಂ 132 ಮತಗಟ್ಟೆಯಲ್ಲಿ ಅನುಚಿತ ವರ್ತನೆ ಆರೋಪದಡಿಯಲ್ಲಿ ಎಫ್ಐಆರ್ ದಾಖಲಾಗಿದೆ.
ಹೈದ್ರಾಬಾದ್ ಲೋಕಸಭಾ ಕ್ಷೇತ್ರದಲ್ಲಿ ಎಂಐಎಂನ ಅಸಾದುದ್ದೀನ್ ಓವೈಸಿ ವಿರುದ್ಧ ಬಿಜೆಪಿ ಮಾಧವಿ ಲತಾ ಅವರನ್ನು ಕಣಕ್ಕಿಳಿಸಿದೆ.