ಮಧ್ಯಾಹ್ನ ಪತ್ನಿ ಮೇಲೆ ಹಲ್ಲೆ – ಮಾಜಿ ಕ್ರಿಕೆಟಿಗ ಕಾಂಬ್ಳಿ ವಿರುದ್ಧ FIR

ಪತ್ನಿ ಮೇಲೆ ಕುಡಿದ ಮತ್ತಿನಲ್ಲಿ ಹಲ್ಲೆ ನಡೆಸಿದ ಆರೋಪದಡಿ ಮಾಜಿ ಕ್ರಿಕೆಟಿಗ ವಿನೋದ್​ ಕಾಂಬ್ಳಿ ವಿರುದ್ಧ ಎಫ್​ಐಆರ್​ ದಾಖಲಾಗಿದೆ.

ಕುಡಿದ ಮತ್ತಿನಲ್ಲಿ ನನ್ನ ಮೇಲೆ ಮುರಿದು ಹೋಗಿದ್ದ ಫ್ಯಾನ್​ ರೆಕ್ಕೆಗಳನ್ನು ನನ್ನ ಮೇಲೆ ಎಸೆದು ಹಲ್ಲೆ ನಡೆಸಿದರು ಎಂದು ಕಾಂಬ್ಳಿ ಪತ್ನಿ ಕೊಟ್ಟ ದೂರು ಆಧರಿಸಿ ಮುಂಬೈನ ಬಾಂದ್ರಾ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ.

ಶುಕ್ರವಾರ ಮಧ್ಯಾಹ್ನ ಕುಡಿದ ಮತ್ತಿನಲ್ಲಿ ಬಾಂದ್ರಾದಲ್ಲಿರುವ ತನ್ನ ಫ್ಲ್ಯಾಟ್​ಗೆ ಬಂದ ಕಾಂಬ್ಳಿ ಜಗಳ ತೆಗೆಯಲು ಶುರು ಮಾಡಿದರು. ಈ ವೇಳೆ ತಮ್ಮ ಪತ್ನಿ ಆಂಡ್ರಿಯಾ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ತಮ್ಮ 12 ವರ್ಷದ ಮಗ ಬಿಡಿಸಲು ಬಂದ ಎಂದು ಆಂಡ್ರಿಯಾ ದೂರಿನಲ್ಲಿ ಹೇಳಿದ್ದಾರೆ.

ಹಲ್ಲೆಯಿಂದ ತನ್ನ ತಲೆಗೆ ಗಾಯವಾಗಿದೆ ಎಂದು ಆಂಡ್ರಿಯಾ ದೂರಿನಲ್ಲಿ ಆರೋಪಿಸಿದ್ದಾರೆ.

ಕಾಂಬ್ಳಿ ವಿರುದ್ಧ ಹಲ್ಲೆ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here