ಭಾರತದಲ್ಲಿ ಮಾಂಸ ಬಡವರಿಗೆ ಅಗ್ಗದಲ್ಲಿ ಸಿಗುವ ಪ್ರೋಟಿನ್​ನ ಮೂಲ – ಸುಪ್ರೀಂಕೋರ್ಟ್​

ಭಾರತದಲ್ಲಿ ಮಾಂಸ ಬಡವರಿಗೆ ಅಗ್ಗದಲ್ಲಿ (ಕಡಿಮೆ ಬೆಲೆಯಲ್ಲಿ ಸಿಗುವ) ಪ್ರೋಟಿನ್​ನ ಮೂಲ ಎಂದು ಸುಪ್ರೀಂಕೋರ್ಟ್​ ಅಭಿಪ್ರಾಯ ಪಟ್ಟಿದೆ.

ಪ್ರಾಣಿಗಳ ಹತ್ಯೆ ಮೇಲೆ ನಿರ್ಬಂಧ ಹೇರಬೇಕು ಮತ್ತು ಪ್ರಯೋಗಾಲಯದಲ್ಲಿ ತಯಾರಿಸಬಹುದಾದ ಮಾಂಸದ ಸೇವೆನೆಗೆ ಬದಲಾಗುವಂತೆ ಸೂಚಿಸಬೇಕು ಎಂದು ಕೋರಿ ಸಲ್ಲಿಸಲಾಗಿರುವ ಅರ್ಜಿಯನ್ನು ವಿಚಾರಣೆಗೆ ಮಾನ್ಯ ಮಾಡಿದ ಪೀಠ ಮೇಲ್ಕಂಡ ಅಭಿಪ್ರಾಯ ವ್ಯಕ್ತಪಡಿಸಿದೆ.

ಜಲ್ಲಿಕಟ್ಟು ಸಂಬಂಧ ಸಂವಿಧಾನಿಕ ಪೀಠ ತೀರ್ಪು ನೀಡಲಿದೆ. ಆ ತೀರ್ಪು ಪ್ರಕಟವಾದ ಬಳಿಕ ಈ ಅರ್ಜಿಯ ಬಗ್ಗೆ ವಿಚಾರಣೆ ನಡೆಸೋಣ

ಎಂದು ನ್ಯಾಯಮೂರ್ತಿ ಕೆ ಎಂ ಜೋಸೆಫ್​ ಮತ್ತು ನ್ಯಾಯಮೂರ್ತಿ ಪರ್ದಿವಾಲಾ ಅವರ ಪೀಠ ಅರ್ಜಿದಾರರಿಗೆ ಹೇಳಿದೆ.

ಮುಂದಿನ ತಿಂಗಳು ಅಂದರೆ ಮಾರ್ಚ್​ 3ರಂದು ಅರ್ಜಿ ಮತ್ತೆ ವಿಚಾರಣೆಗೆ ಬರಲಿದೆ.

LEAVE A REPLY

Please enter your comment!
Please enter your name here