ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಸೋಲಾಗುತ್ತಾ..? 6 ಚುನಾವಣೆಯಲ್ಲಿ ತನ್ನ ಹಿಡಿತದಲ್ಲೇ ಇಟ್ಟುಕೊಂಡಿದ್ದ ಉತ್ತರ ಕನ್ನಡ ಲೋಕಸಭಾ ಕ್ಷೇತ್ರವನ್ನು ಈ ಬಾರಿ ಬಿಜೆಪಿ ಕಳೆದುಕೊಳ್ಳುತ್ತಾ..?
ಈ ಕ್ಷೇತ್ರದಲ್ಲಿ ಈ ಬಾರಿ 6 ಬಾರಿ ಸಂಸದರಾಗಿದ್ದ ಅನಂತ್ ಕುಮಾರ್ ಹೆಗಡೆ ಬದಲು ಮಾಜಿ ಸಚಿವ, ಮಾಜಿ ಸ್ಪೀಕರ್ ಮತ್ತು ಮಾಜಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಬಿಜೆಪಿ ಟಿಕೆಟ್ ನೀಡಿತ್ತು. ಕಾಂಗ್ರೆಸ್ನಿಂದ ಖಾನಾಪುರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ಡಾ ಅಂಜಲಿ ನಿಂಬಾಳ್ಕರ್ ಸ್ಪರ್ಧಿಸಿದ್ದಾರೆ.
ಚುನಾವಣಾ ಆಯೋಗ ಪ್ರಕಟಿಸಿರುವ ಅಂತಿಮ ಅಂಕಿಅಂಶದ ಪ್ರಕಾರ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ದಾಖಲೆ ಪ್ರಮಾಣದಲ್ಲಿ ಮತದಾನವಾಗಿದೆ.
ಶೇಕಡಾ 76.53ರಷ್ಟು ಮಂದಿ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಇವರಲ್ಲಿ ಶೇಕಡಾ 76.93ರಷ್ಟು ಮಂದಿ ಪುರುಷ ಮತದಾರರು ಮತ್ತು ಶೇಕಡಾ 76.13ರಷ್ಟು ಮಂದಿ ಮಹಿಳಾ ಮತದಾರರು ಮತದಾನ ಮಾಡಿದ್ದಾರೆ.
ಅಂದರೆ ಮತದಾನ ಮಾಡಿರುವ ಪುರುಷ ಮತ್ತು ಮಹಿಳಾ ಮತದಾರರ ನಡುವಿನ ಅಂತರ ಕೇವಲ ಶೇ.0.80 ಮಾತ್ರ.
ಈ ಬಾರಿ ಕ್ಷೇತ್ರದಲ್ಲಿ 16 ಲಕ್ಷದ 41 ಸಾವಿರದ 156 ಮಂದಿ ಮತದಾರರಿದ್ದಾರೆ. ಇವರಲ್ಲಿ ಪುರುಷ ಮತದಾರರು 8 ಲಕ್ಷದ 23 ಸಾವಿರದ 604 ಮತ್ತು ಮಹಿಳಾ ಮತದಾರರು 8 ಲಕ್ಷದ 17 ಸಾವಿರದ 536.
ಮೂರು ಲೋಕಸಭಾ ಚುನಾವಣೆಗೆ ಹೋಲಿಸಿದ್ರೆ ಈ ಬಾರಿಯೇ ಅತ್ಯಧಿಕ ಮತದಾನವಾಗಿದೆ.
2014ರಲ್ಲಿ ಶೇಕಡಾ 70.48ರಷ್ಟು ಪುರುಷ ಮತ್ತು ಶೇಕಡಾ 67.81ರಷ್ಟು ಮಹಿಳಾ ಮತದಾರರು ಅಂದರೆ ಒಟ್ಟು 69.04ರಷ್ಟು ಮಂದಿ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು.
2019ರಲ್ಲಿ ಶೇಕಡಾ 74.78ರಷ್ಟು ಮಂದಿ ಪುರುಷ ಮತದಾರರು ಮತ್ತು ಶೇಕಡಾ 72.99ರಷ್ಟು ಮಂದಿ ಮಹಿಳಾ ಮತದಾರರು ಅಂದರೆ ಒಟ್ಟು ಶೇಕಡಾ 74.16ರಷ್ಟು ಮಂದಿ ತಮ್ಮ ಹಕ್ಕು ಚಲಾಯಿಸಿದ್ದರು.
2014ರ ಚುನಾವಣೆಗೆ ಹೋಲಿಸಿದರೆ ಮತದಾನ ಪ್ರಮಾಣ ಶೇಕಡಾ 5ಕ್ಕಿಂತಲೂ ಹೆಚ್ಚಾಗಿದೆ.
ಪಾರ್ಥದಾಸ್ ಅವರ ಅಂದಾಜಿನ ಪ್ರಕಾರ ಪುರುಷ ಮತ್ತು ಮಹಿಳಾ ಮತದಾರ ಒಟ್ಟು ಮತಗಳಲ್ಲಿ ಬಿಜೆಪಿಗೆ ಸಿಗಬಹುದಾದ ಮತ ಪ್ರಮಾಣ ಶೇಕಡಾ 89.1.
ಆದರೆ ಕಾಂಗ್ರೆಸ್ಗೆ ಬೀಳಬಹುದಾದ ಪುರುಷ ಮತ್ತು ಮಹಿಳಾ ಮತದಾರರ ಒಟ್ಟು ಮತಗಳ ಶೇಕಡಾವಾರು ಪ್ರಮಾಣ 106.8ರಷ್ಟು.ಅಂದರೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಶೇಕಡಾ 17.7ರಷ್ಟು ಮತ ವ್ಯತ್ಯಾಸ ಇರಲಿದೆ.
ಒಂದು ವೇಳೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಹಿಳಾ ಮತದಾನ ಪ್ರಮಾಣ ಜಾಸ್ತಿಯಾಗಿದ್ದು, ಬಿಜೆಪಿಗೆ ದೊಡ್ಡ ಹೊಡೆತ ಬಿದ್ದರೂ ಅಚ್ಚರಿಯೇನಿಲ್ಲ. ನೀಡಲಿದೆ.
ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಮತ್ತು ಲೋಕಸಭೆಯಲ್ಲಿ ಗೆದ್ದು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ವರ್ಷಕ್ಕೆ 1 ಲಕ್ಷ ರೂಪಾಯಿ ನೀಡುವ ನ್ಯಾಯ ಗ್ಯಾರಂಟಿ ಕಾಂಗ್ರೆಸ್ನತ್ತ ಮಹಿಳಾ ಮತಗಳನ್ನು ವರ್ಗಾಯಿಸಿರುವುದು ಮೇಲ್ನೋಟಕ್ಕೆ ಕಾಣ್ತಿದೆ.
ADVERTISEMENT
ADVERTISEMENT