ಬೆಂಗಳೂರಿನಲ್ಲಿ ಗುರುವಾರ ಧಾರಾಕಾರ ಮಳೆಯಾಗಿದೆ. ಇವತ್ತು ಬೆಳಗ್ಗೆಯೇ ರಾಜಧಾನಿಯಲ್ಲಿ ಮೋಡ ಕವಿದ ವಾತಾವರಣವಿದೆ.
ಕರ್ನಾಟಕ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದ ಮಾಹಿತಿ ಪ್ರಕಾರ ಇವತ್ತೂ ಕೂಡಾ ಬೆಂಗಳೂರಲ್ಲಿ ಭಾರೀ ಮಳೆಯಾಗಲಿದೆ.
ಬೆಂಗಳೂರಿನ ಕೆಂಗೇರಿ, ವಿದ್ಯಾಪೀಠ, ವಿದ್ಯಾರಣ್ಯಪುರ, ನಾಗರಭಾವಿ, ಚಾಮರಾಜಪೇಟೆ, ಗಾಳಿ ಆಂಜನೇಯ ವಾರ್ಡ್ನಲ್ಲಿ ಭಾರೀ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ.
ನಾಳೆ ಬೆಳಗ್ಗೆ 8.30ರವರೆಗೆ ಕೆಂಗೇರಿಯಲ್ಲಿ 157 ಮಿಲಿಮೀಟರ್, ವಿದ್ಯಾಪೀಠ, ವಿದ್ಯಾರಣ್ಯಪುರ, ನಾಗರಭಾವಿ, ಚಾಮರಾಜಪೇಟೆ, ಗಾಳಿ ಆಂಜನೇಯ ವಾರ್ಡ್ನಲ್ಲಿ 146 ಮಿಲಿ ಮೀಟರ್ ಮಳೆಯಾಗಬಹುದು ಎಂದು ಮುನ್ಸೂಚನೆ ನೀಡಲಾಗಿದೆ.