ಮೋದಿ ಒಬ್ಬ ಉತ್ತಮ ವ್ಯಕ್ತಿ, ಒಳ್ಳೆ ಕೆಲಸ ಮಾಡುತ್ತಿದ್ದಾರೆ – ಡೊನಲ್ಟ್​​ ಟ್ರಂಪ್​ರಿಂದ ಹೊಗಳಿಕೆ

Narendra Modi

ಮೋದಿ ಒಬ್ಬ ಉತ್ತಮ ವ್ಯಕ್ತಿ. ಅವರು ಅದ್ಭುತ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಬಣ್ಣಿಸಿದ್ದಾರೆ.

ಭಾರತವು ನನಗಿಂತ ಉತ್ತಮ ಸ್ನೇಹಿತನನ್ನು ಹೊಂದಲು ಸಾಧ್ಯವಿಲ್ಲ. ಮೋದಿ ಅವರು 2024ರ ಚುನಾವಣೆಯಲ್ಲೂ ಗೆಲುವು ಸಾಧಿಸಿ ಭಾರತವನ್ನು ಮುನ್ನಡೆಸಬಹುದು ಎಂದು ಟ್ರಂಪ್‌ ಆಶಯ ವ್ಯಕ್ತಪಡಿಸಿದ್ದಾರೆ.

ಟ್ರಂಪ್ ಅವರು ಭಾರತೀಯ ಸಮುದಾಯದಿಂದ ತನಗೆ ದೊರೆತ ಭಾರೀ ಬೆಂಬಲ ಮತ್ತು ಪ್ರಧಾನಿ ಮೋದಿಯೊಂದಿಗಿನ ಅವರ ಸಂಬಂಧದ ಬಗ್ಗೆಯೂ ಮಾತನಾಡಿ, ನನಗೆ ಭಾರತ ಮತ್ತು ಪ್ರಧಾನಿ ಮೋದಿಯವರೊಂದಿಗೆ ಉತ್ತಮ ಸಂಬಂಧವಿದೆ. ನಾವು ಸ್ನೇಹಿತರಾಗಿದ್ದೇವೆ. ಮೋದಿ ಅವರು ಉತ್ತಮ ವ್ಯಕ್ತಿ ಮತ್ತು ಅದ್ಭುತ ಕೆಲಸ ಮಾಡುತ್ತಿದ್ದಾರೆ ಎಂದು ಹೊಗಳಿದ್ದಾರೆ. ಇದನ್ನೂಓದಿ : ಬೈಡನ್ ಗೆ ಕೇವಲ ಮೂರು ಪದದ ಪತ್ರ ಬರೆದ ಟ್ರಂಪ್ – ಏನಿದೆ ಅದರಲ್ಲಿ ಗೊತ್ತಾ?

ನನ್ನ ಸ್ನೇಹಿತ ಹಾಗೂ ಪ್ರಧಾನಿ ಮೋದಿ ಅವರಿಂದಾಗಿ ಭಾರತವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಭಾರತಕ್ಕೆ ನನಗಿಂತ ಉತ್ತಮ ಸ್ನೇಹಿತ ಎಂದಿಗೂ ಇರಲಿಲ್ಲ ಎಂದು ನಾನು ಭಾವಿಸುತ್ತೇನೆ. ನಾನು ರೂಪಿಸಿದ ಸಂಬಂಧಗಳಲ್ಲಿ ಇದೂ ಒಂದು ಎಂದು ಅಭಿಪ್ರಾಯಪಟ್ಟಿದ್ದಾರೆ. ಇ

ಸೆಪ್ಟೆಂಬರ್ 2019 ರಲ್ಲಿ ಪಿಎಂ ಮೋದಿ (Narendra Modi) ಮರು ಆಯ್ಕೆಯಾದ ನಂತರ, ಅವರು ಮತ್ತು ಅಧ್ಯಕ್ಷ ಟ್ರಂಪ್ ಜಂಟಿಯಾಗಿ ಟೆಕ್ಸಾಸ್‌ನ ಹೂಸ್ಟನ್‌ನಲ್ಲಿ ಸಾವಿರಾರು ಭಾರತೀಯ ಅಮೆರಿಕನ್ನರು ಭಾಗವಹಿಸಿದ ಬೃಹತ್ ʼಹೌಡಿ ಮೋದಿʼ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ್ದರು. ಇದಾದ ಐದು ತಿಂಗಳ ನಂತರ ಟ್ರಂಪ್ ಮತ್ತು ಪಿಎಂ ಮೋದಿ ಅವರ ತವರು ಗುಜರಾತ್‌ಗೆ ಭೇಟಿ ನೀಡಿದ್ದರು. ಇದನ್ನೂ ಓದಿ : ಭಾರತವನ್ನು ಹಾಡಿ ಹೊಗಳಿದ ವಿಶ್ವದ ದೊಡ್ಡಣ್ಣನ ಅಧ್ಯಕ್ಷ ಟ್ರಂಪ್

LEAVE A REPLY

Please enter your comment!
Please enter your name here