Asia Cup : ಪಾಕಿಸ್ತಾನ ತಂಡ ಬೆಂಬಲಿಸಿ ಪೋಸ್ಟ್ : ಕೋಲಾರದ ವ್ಯಕ್ತಿ ಬಂಧನ

ಏಷ್ಯಾಕಪ್‌ ಟಿ–20 ಕ್ರಿಕೆಟ್‌ ಟೂರ್ನಿಯಲ್ಲಿ ಭಾರತ ವಿರುದ್ಧ ಗೆದ್ದ ಪಾಕಿಸ್ತಾನ ತಂಡ ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಾಕಿದ್ದ ಆರೋಪದ ಮೇಲೆ ಮೂವರ ವಿರುದ್ಧ ಶ್ರೀನಿವಾಸಪುರ ಪಟ್ಟಣ ಠಾಣಾ ಪೊಲೀಸರು ಪ್ರಕರಣ ದಾಖಲಿಸಲಾಗಿದೆ. ಇರದಲ್ಲಿ ಸುಹೇಲ್‌ ಎಂಬಾತನನ್ನು ಬಂಧಿಸಿದ್ದಾರೆ.

ಪಟ್ಟಣದ ಜಾಕಿರ್ ಹುಸೇನ್‌ ಮೊಹಲ್ಲಾ ನಿವಾಸಿ ಸುಹೇಲ್, ತೋಹಿದ್‌ ಪಾಷಾ, ಎಸ್‌.ಕೆ.ಮನ್ಸೂರ್ ಉಲ್ಲಾ ಪಾಕಿಸ್ತಾನ ಪರ ಘೋಷಣೆಯ ಸಂದೇಶವನ್ನು ವಾಟ್ಸ್‌ಆ್ಯಪ್‌ ಸ್ಟೇಟಸ್‌ನಲ್ಲಿ ಹಾಕಿಕೊಂಡಿದ್ದ ಆರೋಪಿಗಳು. ಇದನ್ನೂ ಓದಿ : ಪಾಕಿಸ್ತಾನ ವಿರುದ್ಧ ಕಾರ್ಯಾಚರಣೆ: 38 ವರ್ಷಗಳ ಬಳಿಕ ಹುತಾತ್ಮ ಯೋಧನ ದೇಹ ಪತ್ತೆ

ಇನ್ನಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ :

ಸೆಪ್ಟಂಬರ್ 4 ರಂದು ನಡೆದಿದ್ದ ಭಾರತ ಹಾಗೂ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ಸೋಲು ಅನುಭವಿಸಿತ್ತು. ಈ ಬೆನ್ನಲ್ಲೇ, ಆರೋಪಿಗಳು ಪಾಕಿಸ್ತಾನದ ಧ್ವಜದೊಂದಿಗೆ ಭಾರತ ತಂಡವನ್ನು ಅಣಕಿಸುವ ಹಾಗೆ ಸ್ಟೇಟಸ್ ಹಾಕಿದ್ದರು.

ಇವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ವಿ.ರಾಮಾಂಜಿ ಎಂಬುವರು ಶ್ರೀನಿವಾಸಪುರದ ಪಟ್ಟಣ ಪೊಲೀಸ್‌ ಠಾಣೆಯಲ್ಲಿ ಸೆ.6ರಂದು ದೂರು ನೀಡಿದ್ದರು. ಈ ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ : ಹೆಚ್ಚುತ್ತಿರುವ ಅತ್ಯಾಚಾರ – ಪಾಕಿಸ್ತಾನದ ಪಂಜಾಬ್​ ನಲ್ಲಿ ‘ತುರ್ತು ಪರಿಸ್ಥಿತಿ’ ಘೋಷಣೆ

LEAVE A REPLY

Please enter your comment!
Please enter your name here