ನಮ್ಮ ನೆರೆಯ ರಾಜ್ಯ ಕೇರಳದಲ್ಲಿ ಇದೀಗ ಹೊಸದೊಂದು ಸೋಂಕು ಕಾಣಿಸಿಕೊಂಡಿದೆ. ಅದರ ಹೆಸರು ಟೊಮ್ಯಾಟೋ ಫ್ಲೂ. ನಿಗೂಢ ಟೊಮ್ಯಾಟೋ ಫ್ಲೂ ಸಿಕ್ಕಾಪಟ್ಟೆ ಹಬ್ಬುತ್ತಿರುವ ಕಾರಣ ಸಾವುಗಳು ಕೂಡ ಸಂಭವಿಸುತ್ತಿದೆ. ಇದು ಕೇರಳದಲ್ಲಿ ಆತಂಕಕ್ಕೆ ಕಾರಣವಾಗಿದೆ.
ಐದು ವರ್ಷದೊಳಗಿನ ಮಕ್ಕಳಲ್ಲಿಯೇ ಹೆಚ್ಚಾಗಿ ಈ ಟೊಮ್ಯಾಟೋ ಸೋಂಕು ಕಂಡುಬರುತ್ತಿದೆ. ಈವರೆಗೂ 80ಕ್ಕೂ ಹೆಚ್ಚು ಮಕ್ಕಳು ಟೊಮ್ಯಾಟೋ ಫ್ಲೂನಿಂದ ಬಾಧಿತರಾಗಿದ್ದಾರೆ. ಸದ್ಯ ಕೊಲ್ಲಂ ಜಿಲ್ಲೆಯಲ್ಲಿ ಮಾತ್ರ ಈ ರೀತಿಯ ಪ್ರಕರಣಗಳು ಕಂಡುಬರುತ್ತಿವೆ.
ಏನಿದು ಟೊಮ್ಯಾಟೋ ಫ್ಲೂ.?
ಈ ವೈರಸ್ ಅನ್ನು ಟೊಮ್ಯಾಟೋ ಜ್ವರ ಎಂತಲೂ ಕರೆಯುತ್ತಾರೆ. ಇದು ಅತ್ಯಂತ ಅಪರೂಪದ ವೈರಸ್ ಎಂದು ತಜ್ಱರು ಹೇಳುತ್ತಿದ್ದಾರೆ. ಈ ಸೋಂಕು ಕಾರಣ ಚರ್ಮದ ಮೇಲೆ ಕೆಂಪು ಬೊಬ್ಬೆ ಏಳುತ್ತವೆ.ಅದು ಕೆಂಪ ಕೆಂಪಗೆ ಟೊಮ್ಯಾಟೋ ಆಕಾರದಲ್ಲಿ ಇರುವ ಕಾರಣ ಇದನ್ನು ಟೊಮ್ಯಾಟೋ ಫ್ಲೂ ಎಂದು ಕರೆಯಲಾಗುತ್ತಿದೆ.
ಟೊಮ್ಯಾಟೋ ಫ್ಲೂ ಲಕ್ಷಣಗಳು ಏನು?
ಈ ವೈರಸ್ ಸೋಕಿದ ಮಕ್ಕಳ ಶರೀರದ ತುಂಬಾ ಕಡೆ ಬೊಬ್ಬೆಗಳು ಕಾಣಿಸಿಕೊಳ್ಳುತ್ತವೆ. ಇದರ ಜೊತೆಗೆ ತೀವ್ರವಾದ ಜ್ವರ ಕೂಡ ಬರುತ್ತದೆ.ಕೆಲವು ಮಕ್ಕಳಲ್ಲಿ ಶೀತ, ಕೆಮ್ಮು, ಹೊಟ್ಟೆ ನೋವು, ವಾಂತಿಯಂತಹ ಲಕ್ಷಣಗಳು ಕೂಡ ಕಂಡು ಬಂದಿವೆ.
ಈ ಟೊಮ್ಯಾಟೋ ಫ್ಲೂಗೆ ಕಾರಣಗಳು ಏನು ಎಂಬುದು ಈವರೆಗೂ ಗೊತ್ತಾಗಿಲ್ಲ. ಸದ್ಯಕ್ಕೆ ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಮಾತ್ರ ಕಂಡುಬಂದಿದೆ. ಶೀಘ್ರವೇ ಇತರೆ ಪ್ರದೇಶಗಳಿಗೂ ಕೂಡ ಈ ಸೋಂಕು ಹಬ್ಬುವ ಸಾಧ್ಯತೆ ಇದೆ ಎಂದು ತಜ್ಱರು ಆತಂಕ ವ್ಯಕ್ತಪಡಿಸಿದ್ದಾರೆ. ಈಗಾಗಲೇ ತಮಿಳುನಾಡು ಸರ್ಕಾರ ಅಲರ್ಟ್ ಆಗಿದೆ. ಆದರೆ, ಕರ್ನಾಟಕ ಸರ್ಕಾರದಿಂದ ಇನ್ನೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.