ಪಿಎಸ್ಐ ನೇಮಕಾತಿ ಹಗರಣದಲ್ಲಿ ಆರೋಪ ಎದುರಿಸುತ್ತಿರುವ ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ್ ಅವರು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ್ ಅವರನ್ನು ಭೇಟಿ ಆಗಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಕೆಶಿವಕುಮಾರ್ ನೀಡಿರುವ ಹೇಳಿಕೆ ಈಗ ಕಾಂಗ್ರೆಸ್ನಲ್ಲಿ ಬಹಿರಂಗ ಅಸಮಾಧಾನ ಸ್ಫೋಟಗೊಳ್ಳಲು ಕಾರಣ ಆಗಿದೆ.
ಎಂಬಿ ಪಾಟೀಲ್ ಅವರ ಬಗ್ಗೆ ಡಿಕೆಶಿ ಆಡಿರುವ ಮಾತಿನ ಬಗ್ಗೆ ಟ್ವೀಟಿಸಿರುವ ನಟಿಯೂ ಆಗಿರುವ ಮಾಜಿ ಸಂಸದೆ ರಮ್ಯಾ,
ಪಕ್ಷಾತೀತವಾಗಿ ಜನ ಭೇಟಿ ಆಗ್ತಾರೆ, ಕಾರ್ಯಕ್ರಮಗಳಿಗೆ ಹೋಗ್ತಾರೆ, ಕುಟುಂಬಗಳ ನಡುವೆ ಮದ್ವೆಯೂ ಆಗ್ತಾರೆ. ಆದರೆ ನಿಷ್ಠಾವಂತ ಕಾಂಗ್ರೆಸ್ಸಿಗ ಆಗಿರುವ ಎಂಬಿ ಪಾಟೀಲ್ ಅವರ ಬಗ್ಗೆ ಡಿಕೆಶಿವಕುಮಾರ್ ಅವರ ಮಾತುಗಳನ್ನು ಕೇಳಿ ಅಚ್ಚರಿ ಆಗಿದೆ. ಪಕ್ಷ ಒಗ್ಗಟ್ಟಾಗಿ ಚುನಾವಣೆ ಎದುರಿಸಬೇಕಲ್ವೇ..?
ಎಂದು ಮಾಜಿ ಸಂಸದೆ ರಮ್ಯಾ ಟ್ವೀಟಿಸಿದ್ದಾರೆ.