SBI Jobs : ಪದವಿ ಪಾಸಾದವರಿಗೆ 5008 ಹುದ್ದೆಗಳು – ಈಗಲೇ ಅರ್ಜಿ ಸಲ್ಲಿಸಿ

SBI Bank Jobs

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI Jobs) ಕ್ಲರಿಕಲ್ ಕೇಡರ್‌ನಲ್ಲಿ ಜೂನಿಯರ್ ಅಸೋಸಿಯೇಟ್ (Customer Care And Sales) ಹುದ್ದೆಗಳಿಗೆ ಅರ್ಜಿ‌ ಸ್ವೀಕರಿಸುವ ಪ್ರಕ್ರಿಯೆ ಪ್ರಾರಂಭಿಸಿದೆ. ದೇಶಾದ್ಯಂತ 5008 ಹುದ್ದೆಗಳಿಗೆ ಅಧಿಸೂಚನೆಯನ್ನು ಎಸ್‌ಬಿಐ ಪ್ರಕಟಿಸಿದೆ.

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಎಸ್‌ಬಿಐ ವೆಬ್‌ಸೈಟ್‌ನ ಕರಿಯರ್ಸ್‌ ಪೋರ್ಟಲ್  ಅಥವಾ ibpsonline.ibps.in ನಲ್ಲಿ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 27 ಆಗಿದೆ. ಕನ್ನಡಿಗರಿಗೂ ಬೆಂಗಳೂರು ವೃತ್ತದಲ್ಲಿ 400ರಷ್ಟು ಉದ್ಯೋಗಾವಕಾಶವಿದೆ. ಅರ್ಜಿ ಸಲ್ಲಿಕೆಗೆ sbi.co.in ನಲ್ಲಿ ಅವಕಾಶ ಕಲ್ಪಿಸಲಾಗಿದೆ.

ಒಟ್ಟು ಹುದ್ದೆಗಳು : 5008

ವಿದ್ಯಾರ್ಹತೆ : ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದಿರುವ ಅಥವಾ ಸಮಾನ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ವಯಸ್ಸು : ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 20ರಿಂದ 28 ವರ್ಷದೊಳಗಿನ ವಯೋಮಾನದವರಾಗಿರಬೇಕು.

ಆಯ್ಕೆ ಪ್ರಕ್ರಿಯೆ : ಆನ್‌ಲೈನ್ ಪರೀಕ್ಷೆ (ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆ) ಮತ್ತು ನಿರ್ದಿಷ್ಟಪಡಿಸಿದ ಸ್ಥಳೀಯ ಭಾಷೆಯ ಪರೀಕ್ಷೆ ಒಳಗೊಂಡಿರುತ್ತದೆ.

ಅರ್ಜಿ ಶುಲ್ಕ : ಸಾಮಾನ್ಯ/ಒಬಿಸಿ/ಇಡಬ್ಲ್ಯೂಎಸ್ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 750 ರೂ.ಗಳು ಹಾಗೂ ಪರಿಶಿಷ್ಟ ಜಾತಿ ಹಾಗೂ ಪಂಗಡ, PwBD/ DESM ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ. ಇದನ್ನೂ ಓದಿ : 3,064 ಪೊಲೀಸ್​ ಹುದ್ದೆಗಳ ನೇಮಕಾತಿಗೆ ಆದೇಶ – ವೇತನ, ವಯೋಮಿತಿ, ಪರೀಕ್ಷೆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

ಅರ್ಜಿಯ ಆನ್‌ಲೈನ್ ನೋಂದಣಿ ಪ್ರಾರಂಭ – 07-09-2022
ಅರ್ಜಿಯ ನೋಂದಣಿ ಮುಕ್ತಾಯ- 27-09-2022
ಅಪ್ಲಿಕೇಶನ್ ವಿವರ ಎಡಿಟ್‌ ಮಾಡಲು ಕೊನೇ ದಿನ 27-09-2022
ಆನ್‌ಲೈನ್ ಶುಲ್ಕ ಪಾವತಿ ಅವಧಿ 07-09-2022 ರಿಂದ 27-09-2022

ಎಸ್‌ಬಿಐ ನೋಟಿಫಿಕೇಶನ್‌ ನೇಮಕಾತಿ ಅಧಿಸೂಚನೆ (SBI Jobs) ನೋಡಲು ಇಲ್ಲಿ ಕ್ಲಿಕ್‌ ಮಾಡಿ– Pratikshana NewS/ Job Updates  sbi-clerk-job-advt

ಅರ್ಜಿ ಸಲ್ಲಿಕೆಗೆ ಈ ಲಿಂಕ್‌ ಕ್ಲಿಕ್‌ ಮಾಡಿ – SBI Clerk recruitment 2022: Notification & registration link

ಇದನ್ನೂ ಓದಿ : Govt Jobs: ಕರ್ನಾಟಕದಲ್ಲಿ ಎಷ್ಟು ಸರ್ಕಾರಿ ಹುದ್ದೆಗಳು ಖಾಲಿ ಇವೆ ಗೊತ್ತಾ..?

LEAVE A REPLY

Please enter your comment!
Please enter your name here