Hyderbad : ಎಲೆಕ್ಟ್ರಿಕ್ ಶೋ ರೂಂಗೆ ಬೆಂಕಿ – ಲಾಡ್ಜ್​ನಲ್ಲಿದ್ದ 8 ಜನ ಸಾವು

Hyderbad

ಹೈದ್ರಾಬಾದ್​ನ (Hyderbad) ಎಲೆಕ್ಟ್ರಿಕ್ ಬೈಕ್‌ ಶೋ ರೂಂ ಒಂದರಲ್ಲಿ ಸೋಮವಾರ ರಾತ್ರಿ ಅಗ್ನಿ ಅವಘಡ ಸಂಭವಿಸಿದೆ. ಈ ದುರಂತದಲ್ಲಿ 8 ಜನ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಶೋ ರೂಂ ಮೇಲಿನ ಮಹಡಿಯಲ್ಲಿರುವ ಲಾಡ್ಜ್‌ಗೂ ಬೆಂಕಿ ವ್ಯಾಪಿಸಿದೆ. ಹಲವು ಎಲೆಕ್ಟ್ರಿಕ್ ಸ್ಕೂಟರ್‌ಗಳು ಸುಟ್ಟು ಹೋಗಿವೆ. ಗಾಯಾಳುಗಳನ್ನು ನಗರದ ಗಾಂಧಿ ಮತ್ತು ಯಶೋಧಾ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಇದನ್ನೂ ಓದಿ : ‘ಹೀರೋ’ ಸಿನೆಮಾ ಚಿತ್ರೀಕರಣ ವೇಳೆ ಬೆಂಕಿ ಅವಘಡ: ಅಪಾಯದಿಂದ ಪಾರಾದ ಸ್ಯಾಂಡಲ್‌ವುಡ್‌ ಮಾಸ್ಟರ್ ಮೈಂಡ್‌ ಡೈರೆಕ್ಟರ್

ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಶ್ರಮಿಸುತ್ತಿದ್ದು, ದುರಂತಕ್ಕೆ ಕಾರಣ ಏನು ಎಂಬುದು ತಿಳಿದುಬಂದಿಲ್ಲ.

ಹೈದ್ರಾಬಾದ್​ನ (Hyderbad)ನಲ್ಲಿ ಕಟ್ಟಡದ ನೆಲ ಮಹಡಿಯಲ್ಲಿರುವ ಶೋ ರೂಂನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದರಿಂದಾಗಿ ಮೇಲಿನ ಮಹಡಿಯಲ್ಲಿರುವ ರೂಬಿ ಲಾಡ್ಜ್‌ನಲ್ಲಿ ದಟ್ಟ ಹೊಗೆ ಆವರಿಸಿದೆ. ಅಗ್ನಿ ಶಾಮಕ ಸಿಬ್ಬಂದಿ 9 ಜನರನ್ನು ರಕ್ಷಿಸಿದ್ದಾರೆ ಎಂದು ತಿಳಿದುಬಂದಿದೆ. ಲಾಡ್ಜ್‌ನಲ್ಲಿದ್ದ ಹಲವು ಜನ ಪ್ರಾಣ ಉಳಿಸಿಕೊಳ್ಳುಳು ಕಿಟಕಿಗಳ ಮೂಲಕ ಹೊರ ಜಿಗಿದಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಇದನ್ನೂ ಓದಿ : ಆಸ್ಪತ್ರೆಗೆ ಬೆಂಕಿ ಅವಘಡ – 10 ಜನ ಸಜೀವ ದಹನ

LEAVE A REPLY

Please enter your comment!
Please enter your name here