ಹುತಾತ್ಮ ಸೈನಿಕರ ಕುಟುಂಬಕ್ಕೆ ಹಣಕಾಸು ಪರಿಹಾರ, ನಿವೇಶನ ಸಿಗಲ್ಲ – ಬಿಜೆಪಿ ಸರ್ಕಾರದಿಂದ ತೀರ್ಮಾನ

CM Basavaraj Bommai
ಹುತಾತ್ಮರಾಗುವ ಸೈನಿಕರಿಗೆ (Martyrs) ರಾಜ್ಯ ಸರ್ಕಾರದ (Karnataka Govt Jobs) ನೌಕರಿಯನ್ನು ಕೊಡುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರ ಗುರುವಾರ ನಡೆದ ಸಂಪುಟ ಸಭೆಯಲ್ಲಿ ತೀರ್ಮಾನಿಸಿದೆ.
ರಾಜ್ಯ ಸರ್ಕಾರದ ನೌಕರಿಯನ್ನು ಕೊಡುವ ಸರ್ಕಾರ ನೌಕರಿ ಪಡೆಯುವ ಹುತಾತ್ಮ ಸೈನಿಕರ ಕುಟುಂಬಕ್ಕೆ ಯಾವುದೇ ಹಣಕಾಸು ಪರಿಹಾರವನ್ನಾಗಲೀ ಅಥವಾ ಇತರೆ ಸೌಲಭ್ಯಗಳನ್ನು ನೀಡಲ್ಲ.
ಒಂದು ವೇಳೆ ಹುತಾತ್ಮ ಸೈನಿಕರ ಕುಟುಂಬ ಸರ್ಕಾರದಿಂದ ನೀಡಲಾಗುವ 60*40 ನಿವೇಶನ ಮತ್ತು 50 ಲಕ್ಷ ರೂಪಾಯಿ ಪರಿಹಾರ ಅಥವಾ ಇತರೆ ಸೌಲಭ್ಯಗಳನ್ನು ಪಡೆಯದೇ ಇದ್ದಲ್ಲಿ ಮಾತ್ರ ಅಂತಹ ಹುತಾತ್ಮ ಸೈನಿಕರ ಕುಟುಂಬಕ್ಕೆ ರಾಜ್ಯ ಸರ್ಕಾರದ ನೌಕರಿ ಲಭಿಸಲಿದೆ.
ಕರ್ನಾಟಕದಲ್ಲಿ 400 ಹುತಾತ್ಮ ಸೈನಿಕರ ಕುಟುಂಬವಿದ್ದು, ಇವರಲ್ಲಿ 200 ಮಂದಿ ರಾಜ್ಯ ಸರ್ಕಾರದ ನೌಕರಿ ಪಡೆಯಲು ಅರ್ಹರು
ಎಂದು ಸಂಪುಟ ಸಭೆಯ ಬಳಿಕ ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ ( Minister J C Madhuswamy) ಹೇಳಿದ್ದಾರೆ.
ಆದರೆ ರಾಜ್ಯ ಸರ್ಕಾರದ ಈ ನಿರ್ಧಾರಕ್ಕೆ ನಿವೃತ್ತ ಸೈನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ನಿಯಮಗಳ ಪ್ರಕಾರ ನಿವೃತ್ತ ಸೈನಿಕರಿಗೆ ಸರ್ಕಾರ 2 ಎಕರೆ ನೀರಾವರಿ ಭೂಮಿ ಅಥವಾ 8 ಎಕರೆ ಒಣ ಭೂಮಿ ನೀಡಬೇಕು. ಸರ್ಕಾರವೇನು ನಮಗೆ ಅನುಕಂಪ ತೋರಿಸಬೇಕಿಲ್ಲ, ಅದು ಸರ್ಕಾರದ ಕರ್ತವ್ಯ ಎಂದು ಕಿಡಿಕಾರಿದ್ದಾರೆ.

LEAVE A REPLY

Please enter your comment!
Please enter your name here