ಮೈಗ್ರೇನ್ ಸಾಮಾನ್ಯ ಸಮಸ್ಯೆಯಂತೆ ಕಂಡರೂ, ವಿಪರೀತ ತಲೆನೋವನ್ನು ತಡೆದುಕೊಳ್ಳುವುದು ಕಷ್ಟದ ಸಂಗತಿ. ಇಡೀ ತಲೆ ನೋವು ಸಾಮಾನ್ಯವಾದದ್ದಾದರೂ ಅರ್ಧ ತಲೆ ನೋವು ತಡೆದುಕೊಳ್ಳಲಾಗದಷ್ಟು ನೋವನ್ನುಂಟುಮಾಡುತ್ತದೆ.
ಮೈಗ್ರೇನ್ ನಿವಾರಣೆಗೆ ವೈದ್ಯರು ಅಗತ್ಯ ಔಷಧಿಗಳನ್ನು ನೀಡುತ್ತಾರೆ, ಆದರೆ ಯೋಗ ಮತ್ತು ವ್ಯಾಯಾಮವು ಇದರ ಚಿಕಿತ್ಸೆಯಲ್ಲಿ ಹೆಚ್ಚು ಪರಿಣಾಮಕಾರಿಯಾಗಿದೆ.
ತುಂಬಾ ವರ್ಷಗಳಿಂದ ತಲೆ ನೋವಿನ ಸಮಸ್ಯೆಯಿದ್ದು, ಅದನ್ನು ಮೈಗ್ರೇನ್ ಎಂದು ವೈದ್ಯರು ಹೇಳಿದ್ದರೆ ನೀವು ಈ ಯೋಗಗಳನ್ನು ಮಾಡುವ ಮೈಗ್ರೇನ್ ತೊಂದರೆಯನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ.
ಭುಜಂಗಾಸನ
ಈ ಆಸನವು ಕೇವಲ ತಲೆನೋವು ನಿವಾರಣೆ ಮಾಡುವುದು ಮಾತ್ರವಲ್ಲದೆ, ಬೆನ್ನಿನ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಇದು ಸೂರ್ಯನಮಸ್ಕಾರ ಮೊದಲ ಭಂಗಿಯಾಗಿದೆ.
ಉಸ್ತ್ರಾಸನ
ಇದು ಹಿಂದಕ್ಕೆ ಬಾಗುವಂತಹ ಮತ್ತೊಂದು ಒಳ್ಳೆಯ ಯೋಗಾಭ್ಯಾಸವಾಗಿದ್ದು, ಇಲ್ಲಿ ನಿಮ್ಮ ಹೊಟ್ಟೆ ಮತ್ತು ತೊಡೆಗಳಿಗೆ ಹಿಂದಕ್ಕೆ ಬಾಗಿದ ವೇಳೆ ಬಲ ಬರುವುದು ಮತ್ತು ತಲೆನೋವು ನಿವಾರಣೆ ಕೂಡ ಆಗುವುದು. ನೀವು ಭುಜಂಗಾಸನದ ಬಳಿಕ ಇದನ್ನು ಮಾಡಬಹುದು.
ಸೇತುಬಂಧಾಸನ
ಸೇತುಬಂಧಾಸನವು ಹೊಟ್ಟೆಯ ಕೊಬ್ಬನ್ನು ಕರಗಿಸಲು ತುಂಬಾ ಪರಿಣಾಮಕಾರಿ. ಯಾಕೆಂದರೆ ಈ ಯೋಗಾಭ್ಯಾಸದ ವೇಳೆ ಹೊಟ್ಟೆಯ ಸ್ನಾಯುಗಳು ಎಳೆಯಲ್ಪಡುವುದು. ಇದನ್ನು ನಿತ್ಯವೂ ಅಭ್ಯಾಸ ಮಾಡಿದರೆ ಮೈಗ್ರೇನ್ ನಿವಾರಣೆ ಮಾಡಬಹುದು.
ಸರ್ವಾಂಗಾಸನ
ಈ ಭಂಗಿಯು ರಕ್ತಸಂಚಾರವನ್ನು ತಡೆಯುವುದು. ಈ ವೇಳೆ ಕುತ್ತಿಗೆಯು ಹಿಡಿಯಲ್ಪಡುವುದು ಮತ್ತು ತಲೆಯ ಭಾಗಕ್ಕೆ ರಕ್ತಸಂಚಾರವು ಕಡಿಮೆ ಆಗುವುದು. ಸರ್ವಾಂಗಾಸನವು ತಲೆನೋವು ಕಡಿಮೆ ಮಾಡುವುದು. ಮೈಗ್ರೇನ್ ತಲೆನೋವು ಅತಿಯಾಗಿದ್ದರೆ ಆಗ ನೀವು ಈ ಭಂಗಿಯನ್ನು ಪ್ರಯತ್ನಿಸಬಾರದು. ಅತಿಯಾಗಿ ತಲೆನೋವು ಇದ್ದರೆ ಆಗ ನೀವು ಕೆಳಮುಖವಾಗಿ ಮಾಡುವಂತಹ ಆಸನಗಳನ್ನು ಮಾಡಬಾರದು.