Health Department Jobs : 558 ಸರ್ಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ

Karnataka Govt Jobs

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಉಳಿಕೆ ಮೂಲ ವೃಂದದಲ್ಲಿ ಖಾಲಿ ಇರುವ ವಿವಿದ ಅರೆ ವೈದ್ಯಕೀಯ ಹುದ್ದೆಗಳಿಗೆ ನೇರ ನೇಮಕಾತಿ ಮಾಡಲು ಅರ್ಜಿ ಆಹ್ವಾನಿಸಿದೆ (Health Department Jobs). ಒಟ್ಟು 558 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಇದರಲ್ಲಿ 6 ಹುದ್ದೆಗಳು ಕ.ಕರ್ನಾಟಕ ಅಭ್ಯರ್ಥಿಗಳಿಗೆ ಮೀಸಲಿವೆ.

ಹುದ್ದೆಗಳ ಹೆಸರು : 1) ಜ್ಯೂನಿಯರ್ ಲ್ಯಾಬ್ ಟೆಕ್ನಿಷಿಯನ್ ಆಫೀಸರ್ 2) ಫಾರ್ಮಸಿ ಆಫೀಸರ್ 3) ರೇಡಿಯೋಲಜಿ ಇಮೇಜಿಂಗ್ ಆಫೀಸರ್

ಹುದ್ದೆಗಳ ಸಂಖ್ಯೆ : 1) ಜ್ಯೂನಿಯರ್ ಲ್ಯಾಬ್ ಟೆಕ್ನಿಷಿಯನ್ ಆಫೀಸರ್ :- 147+3(HK)=150                                                         2)  ಫಾರ್ಮಸಿ ಆಫೀಸರ್                      :- 397+3(HK)=400                                                         3) ರೇಡಿಯೋಲಜಿ ಇಮೇಜಿಂಗ್ ಆಫೀಸರ್      :- 07+01(HK)=8

ವಿದ್ಯಾರ್ಹತೆ : 1) ಜ್ಯೂನಿಯರ್ ಲ್ಯಾಬ್ ಟೆಕ್ನಿಷಿಯನ್ ಆಫೀಸರ್ ಹುದ್ದೆಗೆ : 10 ನೇ ತರಗತಿ ತೇರ್ಗಡೆಯಾಗಿರಬೇಕು ಹಾಗೂ ಕರ್ನಾಟಕ ವೊಕೇಷನಲ್ ಬೋರ್ಡ್​​ನಿಂದ 2 ವರ್ಷಗಳ ಡಿಪ್ಲೋಮಾ ಪದವಿ ಪಡೆದಿರಬೇಕು. ಅಥವಾ ವಿಜ್ಞಾನ ವಿಭಾಗದಲ್ಲಿ ಪಿಯುಸಿ ತೇರ್ಗಡೆಯಾಗಿರಬೇಕು ಹಾಗೂ ಕರ್ನಾಟಕ ಪ್ಯಾರಾ ಮೆಡಿಕಲ್ ಬೋರ್ಡ್​ನಿಂದ 2 ವರ್ಷದ ಪದವಿ ಪಡೆದಿರಬೇಕು.

2)  ಫಾರ್ಮಸಿ ಆಫೀಸರ್ ಹುದ್ದೆಗೆ : 10 ನೇ ತರಗತಿ ತೇರ್ಗಡೆಯಾಗಿರಬೇಕು, ಕರ್ನಾಟಕ ಸರ್ಕಾರದಿಂದ ಅಂಗೀಕೃತಗೊಂಡ ಸಂಸ್ಥೆಗಳಿಂದ ಫಾರ್ಮಸಿಯಲ್ಲಿ ಡಿಪ್ಲೋಮಾ ಪದವಿ ಪಡೆದುಕೊಂಡಿರಬೇಕು ಮತ್ತು ಕರ್ನಾಟಕ ಫಾರ್ಮಸಿ ಕೌನ್ಸಿಲ್​ನಲ್ಲಿ ನೊಂದಾಯಿತರಾಗಿರಬೇಕು.

3) ರೇಡಿಯೋಲಜಿ ಇಮೇಜಿಂಗ್ ಆಫೀಸರ್ : 10 ನೇ ತರಗತಿ ತೇರ್ಗಡೆಯಾಗಿರಬೇಕು ಹಾಗೂ ಕರ್ನಾಟಕ ಪ್ಯಾರಾ ಮೆಡಿಕಲ್ ಬೋರ್ಡ್​ನಿಂದ ಎಕ್ಸರೇ ಟೆಕ್ನಾಲಜಿಯಲ್ಲಿ ಡಿಪ್ಲೋಮಾ ಪದವಿ ಪಡೆದಿರಬೇಕು. ಅಥವಾ ವಿಜ್ಞಾನ ವಿಭಾಗದಲ್ಲಿ ಪಿಯುಸಿ ತೇರ್ಗಡೆಯಾಗಿರಬೇಕು ಹಾಗೂ ಕರ್ನಾಟಕ ಪ್ಯಾರಾ ಮೆಡಿಕಲ್ ಬೋರ್ಡ್​ನಿಂದ ಎಕ್ಸರೇ ಟೆಕ್ನಾಲಜಿಯಲ್ಲಿ ಡಿಪ್ಲೋಮಾ ಪದವಿ ಪಡೆದಿರಬೇಕು.

ಇದನ್ನೂ ಓದಿ : Banking Jobs: 3,000 ಹುದ್ದೆಗಳ ಭರ್ತಿ

ವೇತನ : 1) ಜ್ಯೂನಿಯರ್ ಲ್ಯಾಬ್ ಟೆಕ್ನಿಷಿಯನ್ ಆಫೀಸರ್ :- 27,650 – 52650  ರೂ.                                                  2)  ಫಾರ್ಮಸಿ ಆಫೀಸರ್                       :- 27,650 – 52650  ರೂ.                                                    3) ರೇಡಿಯೋಲಜಿ ಇಮೇಜಿಂಗ್ ಆಫೀಸರ್      :- 27,650 – 52650   ರೂ.

ಪ್ರಮುಖ ದಿನಾಂಕಗಳು : 

ಆನ್​ಲೈನ್ ಅರ್ಜಿ ಆರಂಭದ ದಿನಾಂಕ           :- 07.09.22                                                                    ಆನ್​ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 06.10.22                                                                      ಶುಲ್ಕ ಪಾವತಿಯ ಕೊನೆ ದಿನಾಂಕ              : 07.10.22

ಅರ್ಜಿ ಶುಲ್ಕ : ಸಾಮಾನ್ಯ ಅಭ್ಯರ್ಥಿಗಳಿಗೆ 700 ರೂ.ಗಳು, ಪ್ರವರ್ಗ 2ಎ,2ಬಿ,3ಎ,3ಬಿ ಗೆ ಸೇರಿದ ಅಭ್ಯರ್ಥಿಗಳಿಗೆ 400 ರೂ., ಮಾಜಿ ಸೈನಿಕ ಅಭ್ಯರ್ಥಿಗಳಿಗೆ 200 ರೂ., ಪ್ರವರ್ಗ 1, ಪರಿಶಿಷ್ಟ ಜಾತಿ, ಪಂಗಡ ಹಾಗೂ ವಿಕಲಚೇತನ ಅಭ್ಯರ್ಥಿಗಳಿಗೆ ಅರ್ಜಿ ಪ್ರಕ್ರಿಯಾ ಶುಲ್ಕ 100 ರೂ. ಮಾತ್ರ.

ಆಯ್ಕೆ ವಿಧಾನ : 10 ನೇ ತರಗತಿ ಅಥವಾ ಪಿಯುಸಿಯಲ್ಲಿ ಪಡೆದ ಪರ್ಸಂಟೇಜ್ ಹಾಗೂ ಡಿಪ್ಲೋಮಾ ಪದವಿಯಲ್ಲಿ ಪಡೆದ ಪರ್ಸಂಡೇಜ್​ ಮೇಲೆ ಅರ್ಹ ಅಭ್ಯರ್ಥಿಗಳ ಪಟ್ಟಿ ತಯಾರಿಸಲಾಗುತ್ತದೆ.

ಅರ್ಜಿ ಸಲ್ಲಿಕೆ ಹೇಗೆ : ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ನೋಟಿಫಿಕೇಷನ್ ನೋಡಲು ಇಲ್ಲಿ ಕ್ಲಿಕ್ ಮಾಡಿ. ಆರೋಗ್ಯ ಇಲಾಖೆಯ ವೆಬ್​ಸೈಟ್​ನಲ್ಲಿ ಸೆ.7 ರಿಂದ ಆನ್​ಲೈನ್ ಅರ್ಜಿ ಸಲ್ಲಿಕೆ ಆರಂಭವಾಗಲಿದೆ (Health Department Jobs).

ಇದನ್ನೂ ಓದಿ : ಭಾರತೀಯ ಆಹಾರ ನಿಗಮದಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ -113 ಹುದ್ದೆಗಳು ಖಾಲಿ

LEAVE A REPLY

Please enter your comment!
Please enter your name here