ಸಂಚಾರಿ ನಿಯಮಗಳನ್ನು ಉಲ್ಲಂಘಿಸಿರುವ ವಾಹನ ಸವಾರರು ಈಗ ಆನ್ಲೈನ್ ಮೂಲಕವೇ ದಂಡ ಪಾವತಿ ಮಾಡಬಹುದಾಗಿದೆ. ಬೆಂಗಳೂರು ನಗರ ಹೊರತುಪಡಿಸಿ ರಾಜ್ಯದ ಉಳಿದ ಎಲ್ಲಾ ಜಿಲ್ಲೆಗಳ ವಾಹನ ಸವಾರರಿಗೆ ಅನುಕೂಲವಾಗುವಂತೆ ಸಂಚಾರಿ ಪೊಲೀಸರು ಹೊಸದೊಂದು ವೆಬ್ಸೈಟ್ನ್ನು ಲಾಂಚ್ ಮಾಡಿದ್ದಾರೆ.
ಈ ಮೂಲಕ ದಂಡ ಪಾವತಿಗೆ ವಾಹನ ಸವಾರರು ಪೊಲೀಸ್ ಠಾಣೆಗೆ ಬರುವುದು ತಪ್ಪಲಿದೆ.
ವೆಬ್ಸೈಟ್ ಲಿಂಕ್:
https://payfine.mchallan.com:7271/
ನಿಮ್ಮ ವಾಹನ ನೋಂದಣಿ ಸಂಖ್ಯೆಯನ್ನು ನಮೂದಿಸಿ
ನಿಮ್ಮ ನಗರ/ಜಿಲ್ಲೆಯನ್ನು ಆಯ್ಕೆಮಾಡಿ
ನಿಮ್ಮ ವಾಹನದ ಉಲ್ಲಂಘನೆಗಳನ್ನು ಹುಡುಕಲು “SEARCH” ಬಟನ್ ಅನ್ನು ಕ್ಲಿಕ್ ಮಾಡಿ
ದಂಡವನ್ನು ಪಾವತಿಸಲು ಪೇ ಬಟನ್ ಕ್ಲಿಕ್ ಮಾಡಿ
ADVERTISEMENT
ಈ ಮಾಹಿತಿಗಳನ್ನೆಲ್ಲ ನಮೂದು ಮಾಡಿದ ಬಳಿಕ ನಿಯಮ ಉಲ್ಲಂಘನೆ ಸ್ವರೂಪ ಮತ್ತು ಬಾಕಿ ಇರುವ ದಂಡದ ಮೊತ್ತದ ಬಗ್ಗೆ ಮಾಹಿತಿ ಸಿಗುತ್ತದೆ. ಆ ಬಳಿಕ ಅಲ್ಲೇ ಇರುವ Pay Nowಗೆ ಕ್ಲಿಕ್ ಮಾಡಿ ದಂಡ ಪಾವತಿಸಬಹುದು.
ADVERTISEMENT