ಭಾರತೀಯ ಆಹಾರ ನಿಗಮದಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ -113 ಹುದ್ದೆಗಳು ಖಾಲಿ

FCI Jobs

ಭಾರತೀಯ ಆಹಾರ ನಿಗಮದಲ್ಲಿ (FCI Jobs) ಖಾಲಿಯಿರುವ 113 ಮ್ಯಾನೇಜರ್ ಕೆಟಗರಿ 2 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.

ಆಯ್ಕೆಯಾದ ಅಭ್ಯರ್ಥಿಗಳು ಮೊದಲ 6 ತಿಂಗಳು ತರಬೇತಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಬೇಕು. ಅನಂತರ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸಬಹುದಾಗಿದೆ.

ಭಾರತೀಯ ಆಹಾರ ನಿಗಮದಲ್ಲಿನ (FCI Jobs) 113 ಮ್ಯಾನೇಜರ್ ಕೆಟಗರಿ 2 ಹುದ್ದೆಗಳಿಗೆ ಇದೇ ಅಗಸ್ಟ್​ 27 ರಿಂದ ಅರ್ಜಿ ಸಲ್ಲಿಸಬಹುದಾಗಿದೆ. ಸೆಪ್ಟಂಬರ್ 26 ಕೊನೆಯ ದಿನಾಂಕವಾಗಿದೆ. ಇಚ್ಚಿಸುವ ಅಭ್ಯರ್ಥಿಗಳು ನಿಗಮದ ಅಧಿಕೃತ ವೆಬ್​ಸೈಟ್​​ https://fci.gov.in/ ಗೆ ಭೇಟಿ ನೀಡಬಹುದು.

ದೇಶದ 5 ಜೋನ್​ಗಳಲ್ಲಿನ 113 ಮ್ಯಾನೇಜರ್​​ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗಳನ್ನು ಜೆನೆರಲ್, ಡಿಪೋಟ್, ಟೆಕ್ನಿಕಲ್, ಸಿವಿಲ್ ಇಂಜೀನಿಯರ್, ಎಲೆಕ್ಟ್ರಿಕಲ್ ಮತ್ತು ಮೆಕ್ಯಾನಿಕಲ್ ಇಂಜಿನಿಯರ್ ವಿಭಾಗಗಳಲ್ಲಿ ವಿಭಜಿಸಲಾಗಿದೆ.

ಹುದ್ದೆಯ ಹೆಸರು : ಮ್ಯಾನೇಜರ್ ಗ್ರೇಡ್ 2

ಒಟ್ಟು ಹುದ್ದೆಗಳ ಸಂಖ್ಯೆ : 113

  •  ಉತ್ತರ ವಿಭಾಗದಲ್ಲಿ 11 ಹುದ್ದೆಗಳು
  • ದಕ್ಷಿಣ ವಿಭಾಗದಲ್ಲಿ 16 ಹುದ್ದೆಗಳು
  • ಪಶ್ಚಿಮ ವಿಭಾಗದಲ್ಲಿ 20 ಹುದ್ದೆಗಳು
  • ಪೂರ್ವ ವಿಭಾಗದಲ್ಲಿ 21 ಹುದ್ದೆಗಳು
  • ಈಶಾನ್ಯ ವಿಭಾಗದಲ್ಲಿ 18 ಹುದ್ದೆಗಳು

ಸಂಬಳ : 40 ಸಾವಿರದಿಂದ 1,40,000 ದ ವರೆಗೆ

ವಿದ್ಯಾರ್ಹತೆ : ಆಯಾ ವಿಭಾಗಗಳಲ್ಲಿ ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು.

ವಯಸ್ಸಿನ ಮಿತಿ : ಹಿಂದಿ ಮ್ಯಾನೇಜರ್ ಹುದ್ದೆಗೆ ವಯಸ್ಸು 25, ಇತರೆ ಹುದ್ದೆಗಳಿಗೆ 28 ವರ್ಷ.

ಅರ್ಜಿ ಶುಲ್ಕ : 800 ರೂ.ಗಳು ( ಎಸ್​​ಸಿ,ಎಸ್​​ಟಿ,ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಿಲ್ಲ )

ಹುದ್ದೆಯ ಆಯ್ಕೆಯ ಪ್ರಕ್ರಿಯೆ : ಆನ್​ಲೈನ್​ ಮೂಲಕ ಪರೀಕ್ಷೆ, ಸಂದರ್ಶನ ಮತ್ತು ತರಬೇತಿ ( ಆನ್​ಲೈನ್ ಪರೀಕ್ಷೆ ಎರಡು ಹಂತಗಳಲ್ಲಿ ನಡೆಯುತ್ತದೆ).

ಪ್ರಮುಖ ದಿನಾಂಕಗಳು :

ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಖ : ಅಗಸ್ಟ್​ 27

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಸೆಪ್ಟಂಬರ್ 26

ಪರೀಕ್ಷಾ ದಿನಾಂಕ : ಡಿಸೆಂಬರ್ 2022

ಅರ್ಜಿ ಸಲ್ಲಿಸುವುದು ಹೇಗೆ : ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ನಿಗಮದ ಅಧಿಕೃತ ವೆಬ್​ಸೈಟ್​​ https://fci.gov.in/ ಗೆ ಭೇಟಿ ಅಪ್ಲೈ ಆನ್​ಲೈನ್​ ಮೇಲೆ ಕ್ಲಿಕ್ ಮಾಡುವ ಮೂಲಕ ಅರ್ಜಿ ಪ್ರಕ್ರಿಯೆ ಆರಂಭಿಸಬೇಕು. ನೋಟಿಫಿಕೇಶನ್ ಅನ್ನು ಇಲ್ಲಿ ಡೌನ್​ಲೋಡ್ ಮಾಡಬಹುದು. https://www.recruitmentfci.in/assets/current_category_II/Advt.%20No.02-2022-FCI%20Category-II.pdf

LEAVE A REPLY

Please enter your comment!
Please enter your name here