ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಚುನಾವಣಾ ಆಯೋಗ ನೋಟಿಸ್ ನೀಡಿದೆ.
ಮೋದಿ ಮತ್ತು ರಾಹುಲ್ ಗಾಂಧಿ ಭಾಷಣದ ವಿರುದ್ಧದ ದೂರಿನ ಮೇರೆಗೆ ಆಯೋಗವು ಈ ನೋಟಿಸ್ ಕಳುಹಿಸಿದ್ದು ಏ. 29ರೊಳಗೆ ಉತ್ತರಿಸಬೇಕೆಂದು ತಿಳಿಸಿದೆ.
ಧರ್ಮ, ಜಾತಿ, ಕೋಮು, ಭಾಷೆಯ ಆಧಾರದಲ್ಲಿ ಜನರ ನಡುವೆ ದ್ವೇಷ, ಒಡಕು ಮೂಡಿಸುವ ಕೆಲಸ ಮಾಡುತ್ತಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 77 ರ ಅಡಿಯಲ್ಲಿ ಎರಡೂ ಪಕ್ಷಗಳ ಅಧ್ಯಕ್ಷರಿಗೆ ನೋಟಿಸ್ ಕಳುಹಿಸಿದೆ.
ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳ ಕಾರ್ಯಚಟುವಟಿಕೆಗಳ ಮೊದಲ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಎಂದು ಅವರು ಎರಡೂ ಪಕ್ಷಗಳ ಅಧ್ಯಕ್ಷರಿಗೆ ಹೇಳಿದರು. ಬಹುಮುಖ್ಯವಾಗಿ, ಸ್ಟಾರ್ ಪ್ರಚಾರಕರ ವಿಚಾರದಲ್ಲಿ. ಉನ್ನತ ಹುದ್ದೆಯಲ್ಲಿರುವವರ ಚುನಾವಣಾ ಭಾಷಣಗಳ ಪರಿಣಾಮವು ಹೆಚ್ಚು ಗಂಭೀರ ಪರಿಣಾಮವನ್ನು ಬೀರಬಹುದು ಅಂತ ಚುನಾವಣಾ ಆಯೋಗ ಹೇಳಿದೆ.