Chinese Loan Apps Case : ರೇಜರ್​ ಪೇ, ಪೇಟಿಎಂ ಕಚೇರಿಗಳ ಮೇಲೆ ಇಡಿ ದಾಳಿ

Paytm
Paytm

ಬೆಂಗಳೂರಿನಲ್ಲಿರುವ ರೇಜರ್ ಪೇ, ಪೇಟಿಎಂ, ಕ್ಯಾಶ್‌ಫ್ರೀಗೆ ಸಂಬಂಧಿಸಿದ ಸ್ಥಳಗಳ ಮೇಲೆ ಜಾರಿ ನಿರ್ದೆಶನಾಲಯ(ಇ.ಡಿ) ದಾಳಿ ನಡೆಸಿದೆ. ಚೀನಾದ ವ್ಯಕ್ತಿಗಳು ನಿಯಂತ್ರಿಸುತ್ತಿರುವ ಕಾನೂನು ಬಾಹಿರ ತ್ವರಿತ ಸ್ಮಾರ್ಟ್‌ಫೋನ್ ಆಧಾರಿತ ಸಾಲಗಳ ವ್ಯವಹಾರಕ್ಕೆ (Chinese Loan Apps Case)  ಸಂಬಂಧಿಸಿದಂತೆ ಈ ಶೋಧ ನಡೆಸಲಾಗುತ್ತಿದೆ ಎಂದು ಇ.ಡಿ ತಿಳಿಸಿದೆ.

ಕರ್ನಾಟಕದ ರಾಜಧಾನಿಯ 6 ಕಡೆಗಳಲ್ಲಿ ಶುಕ್ರವಾರದಿಂದ ಶೋಧ ನಡೆಸಲಾಗುತ್ತಿದೆ ಎಂದು ಇಡಿ ಪ್ರಕಟಣೆಯಲ್ಲಿ ತಿಳಿಸಿದ್ದು, ಶನಿವಾರವೂ ಶೋಧ ಕಾರ್ಯಾಚರಣೆ ಮುಂದುವರಿದಿದೆ.

ದಾಳಿ ವೇಳೆ, ತನಿಖಾ ಸಂಸ್ಥೆಯು ಚೀನೀ ವ್ಯಕ್ತಿಗಳು ನಿಯಂತ್ರಿಸಲ್ಪಡುತ್ತಿದ್ದ ಈ ಘಟಕಗಳ ವ್ಯಾಪಾರಿ ಐಡಿಗಳು ಮತ್ತು ಬ್ಯಾಂಕ್ ಖಾತೆಗಳಲ್ಲಿ ಇರಿಸಲಾಗಿದ್ದ 17 ಕೋಟಿ ಹಣವನ್ನು ವಶಪಡಿಸಿಕೊಂಡಿದೆ. ಈ ಘಟಕಗಳು ಭಾರತೀಯರ ನಕಲಿ ದಾಖಲೆಗಳನ್ನು ಬಳಸಿ ಅಪರಾಧದ ಮೂಲಕ ಆದಾಯ ಗಳಿಕೆಗೆ ಡಮ್ಮಿ ನಿರ್ದೇಶಕರನ್ನಾಗಿ ಮಾಡುತ್ತಾರೆ. ಅಲ್ಲದೇ, ಈ ಘಟಕಗಳನ್ನು ಚೀನೀ ವ್ಯಕ್ತಿಗಳು ನಿಯಂತ್ರಿಸುತ್ತಾರೆ ಎಂದು ಇ.ಡಿ ಹೇಳಿದೆ. ಇದನ್ನೂ ಓದಿ : ರೋಷನ್ ಬೇಗ್ ಕಚೇರಿ ಮೇಲೆ ಇಡಿ ದಾಳಿ: ಕಚೇರಿ ಕೀ ಇಲ್ಲದೇ ಬೆಳಗ್ಗಿನಿಂದ ಕಾದ ಅಧಿಕಾರಿಗಳು

ಮೊಬೈಲ್ ಮೂಲಕ ಸಣ್ಣ ಮೊತ್ತದ ಸಾಲ ಪಡೆದ ಸಾರ್ವಜನಿಕರ ಸುಲಿಗೆ ಮತ್ತು ಕಿರುಕುಳ (Chinese Loan Apps Case)  ನೀಡುವುದರಲ್ಲಿ ತೊಡಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ಘಟಕಗಳು/ವ್ಯಕ್ತಿಗಳ ವಿರುದ್ಧ ಬೆಂಗಳೂರು ಪೊಲೀಸ್ ಸೈಬರ್ ಕ್ರೈಂ ಠಾಣೆಯಲ್ಲಿ ಕನಿಷ್ಠ 18 ಎಫ್‌ಐಆರ್‌ಗಳು ದಾಖಲಾಗಿದ್ದು, ಅವುಗಳನ್ನು ಆಧರಿಸಿ ಇ.ಡಿ ಹಣ ಅಕ್ರಮ ವರ್ಗಾವಣೆ ಪ್ರಕರಣವನ್ನು ದಾಖಲಿಸಿಕೊಂಡಿದೆ ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here