ಮಾಜಿ ಸಿಎಂ ಸಿದ್ದರಾಮಯ್ಯನವರ ಕಿರಿಯ ಸಹೋದರ ರಾಮೇಗೌಡ ಅವರು ನಿಧನರಾಗಿದ್ದಾರೆ.
ಇವರು ಇವತ್ತು ಸಂಜೆ ಮೈಸೂರಿನ ಕಾವೇರಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇವರಿಗೆ 67 ವರ್ಷ ವಯಸ್ಸಾಗಿತ್ತು. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಇವರು ಇವತ್ತು ರಾತ್ರಿ 9 ಗಂಟೆಗೆ ನಿಧನರಾಗಿದ್ದಾರೆ.
ಸಿದ್ದರಾಮಯ್ಯ ಅವರಿಗೆ ಮೂವರು ಸಹೋದರು. ನಾಲ್ವರಲ್ಲಿ ರಾಮೇಗೌಡ ಅತ್ಯಂತ ಕಿರಿಯ ಸಹೋದರ.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದರೂ ರಾಮೇಗೌಡ ಅವರಿಗೆ ತಾವು ಸಿಎಂ ಅವರ ಸಹೋದರ ಎಂಬ ಹಮ್ಮು-ಬಿಮ್ಮು ಇರಲಿಲ್ಲ.
ಮೈಸೂರು ಜಿಲ್ಲೆಯ ವರುಣಾ ಕ್ಷೇತ್ರದಲ್ಲಿ ಬರುವ ಸಿದ್ದರಾಮನಹುಂಡಿಯಲ್ಲಿರುವ ತಮ್ಮ ಜಮೀನಿನಲ್ಲಿ ಇವರು ತಮ್ಮ ಕೊನೆಯವರೆಗೂ ದುಡಿಮೆ ಮಾಡುತ್ತಿದ್ದರು.
ಸಿದ್ದರಾಮಯ್ಯ ಅವರಿಗೆ ಇಬ್ಬರು ಸಹೋದರಿಯರು ಮತ್ತು ಮೂವರು ಸಹೋದರರು. ಇವರಲ್ಲಿ ಇಬ್ಬರು ಸಹೋದರಿಯರು ಮತ್ತು ಸಹೋದರ ಕೆಲ ವರ್ಷಗಳ ಹಿಂದೆ ನಿಧನರಾಗಿದ್ದಾರೆ.