BREAKING: ಬಿ ಎಲ್​ ಸಂತೋಷ್​ ಭೇಟಿ ಆದ ಯಡಿಯೂರಪ್ಪ – ಯಡಿಯೂರಪ್ಪ ಮಾರ್ಗದರ್ಶನಕ್ಕೆ ಕೋರಿಕೆ

B L Santosh Yediyurappa Meeting
B L Santosh Yediyurappa Meeting
ಮಾಜಿ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ( B S Yediyurappa) ಮತ್ತು ಬಿ ಎಲ್​ ಸಂತೋಷ್​ (B L Santosh) ನಡುವಿನ ಮುನಿಸು ಮರೆಯಾಗುವ ಲಕ್ಷಣಗಳು ಗೋಚರಿಸುತ್ತಿವೆ.
ನವದೆಹಲಿಯಲ್ಲಿ ಪ್ರವಾಸದಲ್ಲಿರುವ ಮಾಜಿ ಮುಖ್ಯಮಂತ್ರಿ ಬಿಎಸ್​ವೈ ಅವರು ಬಿಜೆಪಿ (BJP) ಸಂಘಟನಾ ಕಾರ್ಯದರ್ಶಿ ಬಿ ಎಲ್​ ಸಂತೋಷ್​ ಅವರನ್ನು ಭೇಟಿ ಆಗಿದ್ದಾರೆ.
ಇತ್ತೀಚೆಗೆ ಪುನರ್​ ರಚನೆ ಆದ ಬಿಜೆಪಿ ಸಂಸದೀಯ ಮಂಡಳಿ ಮತ್ತು ಚುನಾವಣಾ ಸಮಿತಿಗೆ ಯಡಿಯೂರಪ್ಪ ಮತ್ತು ಸಂತೋಷ್​ ಇಬ್ಬರೂ ನೇಮಕ ಆಗಿದ್ದರು.

ನವದೆಹಲಿಯಲ್ಲಿ ಇಂದು ನಮ್ಮ ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ @blsanthoshರವರೊಂದಿಗೆ ಹಲವು ವಿಷಯಗಳ ಕುರಿತು ಚರ್ಚೆ ನಡೆಸಲಾಯಿತು

ಎಂದು ಯಡಿಯೂರಪ್ಪ ಟ್ವೀಟಿಸಿದ್ದಾರೆ.
ಇತ್ತ ಸಂಸದೀಯ ಮಂಡಳಿ ಮತ್ತು ಕೇಂದ್ರೀಯ ಚುನಾವಣಾ ಸಮಿತಿಗೆ ನೇಮಕ ಆಗಿರುವ ಯಡಿಯೂರಪ್ಪ ಅವರಿಗೆ ಅಭಿನಂದನೆ ಸಲ್ಲಿಸಿರುವ ಬಿ ಎಲ್​ ಸಂತೋಷ್​ ಪಕ್ಷಕ್ಕೆ ಸಂಬಂಧಿಸಿದ ವಿವಿಧ ವಿಷಯಗಳಲ್ಲಿ ಮಾರ್ಗದರ್ಶನ ಮಾಡುವಂತೆ ಕೋರಿದ್ದಾರೆ.

LEAVE A REPLY

Please enter your comment!
Please enter your name here