ಬಿಜೆಪಿ ನಾಯಕಿ ಸೋನಾಲಿ ಪೊಗಾಟ್ ಕೊಲೆ ಪ್ರಕರಣ : ಸತ್ಯ ಸಂಗತಿಗಳು

Sonali Phogat

ಸಾಮಾನ್ಯ ಸಾವು ಎಂದು ಪರಿಗಣಿಸಲಾಗಿದ್ದ ಬಿಜೆಪಿ ನಾಯಕಿ ಸೋನಾಲಿ ಪೊಗಾಟ್ (Sonali Phogat) ಅವರ ಸಾವು ರೋಚಕ ತಿರುವು ಪಡೆದುಕೊಂಡಿದೆ. ಇಂದು ಮೃತದೇಹದ ಪೋಸ್ಟ್ ಮಾರ್ಟಂ ನಡೆದಿದ್ದು ದೇಹದ ಮೇಲೆ ಬಲದ ಪೆಟ್ಟಿನ ಗಾಯಗಳಿವೆ ಎಂದು ವರದಿಯಾಗಿದೆ.

ಸೋನಾಲಿ ಪೊಗಾಟ್ ಸಾವಿನ ಹಿಂದಿನ 6 ಪ್ರಮುಖ ಸಂಗತಿಗಳು :

1) ಸೋನಾಲಿ ಪೊಗಾಟ್(Sonali Phogat) ಜೊತೆಯಿದ್ದ ಇಬ್ಬರು ಸಹಚರರ ಮೇಲೆ ಸಹೋದರ ರಿಂಕು ಡಾಕಾ ಇಂದು ಕೊಲೆ ಆರೋಪ ಮಾಡಿದ್ದರು. ಅನಂತರ ಕೆಲ ಗಂಟೆಗಳಲ್ಲೇ, ಪೊಗಾಟ್ ಅವರ ಮರಣೋತ್ತರ ಪರೀಕ್ಷೆಯ ವರದಿಯ ಬಂದಿದೆ. ಆಕೆಯ ದೇಹದಲ್ಲಿ ಅನೇಕ ಬಲವಾದ ಪೆಟ್ಟು ನೀಡಿರುವ ಗಾಯಗಳು ಕಂಡುಬಂದಿವೆ ಎಂದು ವರದಿ ಹೇಳಿದೆ. ದೇಹದ ಮೇಲೆ ಬಲವಾದ ಪೆಟ್ಟಿನ ಗಾಯಗಳು ಕಂಡುಬಂದಿವೆ. ಆದ್ದರಿಂದ ತನಿಖಾಧಿಕಾರಿ ಸಾವಿನ ವಿಧಾನ ಖಚಿತಪಡಿಸಿಕೊಳ್ಳಬೇಕು ಎಂದು ವರದಿಯಲ್ಲಿ ಹೇಳಲಾಗಿದೆ. ಅಲ್ಲದೇ, ಯಾವುದೇ ಹರಿತವಾದ ಆಯುಧ ಬಳಸಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ : ಬಿಜೆಪಿ ನಾಯಕಿ ಸೋನಾಲಿ ಪೊಗಾಟ್ ನಿಗೂಢ ಸಾವು : ಕೊಲೆ ಪ್ರಕರಣ ದಾಖಲು

2) 42 ವರ್ಷದ ಸೋನಾಲಿ ಪೊಗಾಟ್ ಗುಂಪಿನೊಂದಿಗೆ ಗೋವಾಗೆ ಹೋಗಿದ್ದಾಗ ಮಂಗಳವಾರ ನಿಗೂಢವಾಗಿ ಸಾವನ್ನಪ್ಪಿದ್ದಾರೆ.

3) ಸೋನಾಲಿ ಪೊಗಾಟ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂಬ ಪೊಲೀಸರು ನೀಡಿದ್ದ ವರದಿಗೆ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದರು.

4) ಸೋನಾಲಿ ಪೊಗಾಟ್ ಜೊತೆ ಸೋಮವಾರ ಗೋವಾಗೆ ಬಂದಿದ್ದ ಆಕೆಯ ಆಪ್ತ ಸಹಾಯಕ ಸುಧೀರ್ ಸಂಘ್ವಾನ್ ಮತ್ತು ಈತನ ಗೆಳೆಯ ಸುಖ್ವಿಂದರ್ ವಾಸಿ ಮೇಲೆ ಇಂದು ಗುರುವಾರ ಗೋವಾ ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದರು.

5) ಸೋನಾಲಿ ಪೊಗಾಟ್(Sonali Phogat) ಉತ್ತರ ಗೋವಾದ ಸೇಂಟ್ ಆಂತೋನಿ ಆಸ್ಪತ್ರೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಈಕೆ ಸಹೋದರ ರಿಂಕು ಡಾಕಾ ಅವರು ಸುಧೀರ್ ಸಂಘ್ವಾನ್ ಮತ್ತು ಸುಖ್ವಿಂದರ್ ವಾಸಿ ಮೇಲೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ದಾಖಲಿಸಿದ್ದರು.

6) ಸೋನಾಲಿ ಪೊಗಾಟ್ ಕೊಲೆ ಪ್ರಕರಣದಲ್ಲಿ ಆಪ್ತ ಸಹಾಯಕ ಸುಧೀರ್ ಸಂಘ್ವಾನ್ ಮತ್ತು ಈತನ ಗೆಳೆಯ ಸುಖ್ವಿಂದರ್ ವಾಸಿ ಅವರನ್ನು ಬಂಧಿಸಲಾಗಿದೆ ಎಂದು ಡಿವೈಎಸ್ಪಿ ಜಿವ್ಬಾ ದಲ್ವಿ ಹೇಳಿದ್ದಾರೆ.

LEAVE A REPLY

Please enter your comment!
Please enter your name here