ಬಿಜೆಪಿ ನಾಯಕಿ ಸೋನಾಲಿ ಪೊಗಾಟ್ ನಿಗೂಢ ಸಾವು : ಕೊಲೆ ಪ್ರಕರಣ ದಾಖಲು

Sonali Phogat

ಬಿಜೆಪಿ ನಾಯಕಿ ಸೋನಾಲಿ ಪೊಗಾಟ್ ( Sonali Phogat)​​​ ನಿಗೂಢ ಸಾವಿನ ಬಗ್ಗೆ ಗೋವಾ ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದಾರೆ. ನಿನ್ನೆಯಷ್ಟೇ ಟಿಕ್ ಟಾಕ್ ಸ್ಟಾರ್​​​ ಆಗಿ ಗುರುತಿಸಿಕೊಂಡಿದ್ದ ಸೋನಾಲಿ ಪೊಗಾಟ್​​ ಗೋವಾದಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.

ಗೋವಾಗೆ ಸೋನಾಲಿ ಪೊಗಾಟ್ ಜೊತೆಗೆ ಪ್ರಯಾಣಿಸಿದ್ದ ಇನ್ನಿಬ್ಬರ ಮೇಲೆ ಕೊಲೆ ಪ್ರಕರಣ ದಾಖಲಿಸುವಂತೆ ಸಹೋದರ ರಿಂಕು ಡಾಕಾ ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದರು.

ಪೊಲೀಸರು ಕೊಲೆ ಪ್ರಕರಣ ದಾಖಲಿಸಿದರೆ ಮಾತ್ರ ಸಿಸಿಟಿವಿ ಕ್ಯಾಮೆರಾದ ಮುಂದೆ ಪೋಸ್ಟ್​ ಮಾರ್ಟಂ ಮಾಡಲು ಅನುಮತಿ ನೀಡುವುದಾಗಿ ಕುಟುಂಬಸ್ಥರು ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ ಗೋವಾ ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ : ನಟಿ, ಬಿಜೆಪಿ ನಾಯಕಿ ಸೋನಾಲಿ ಫೋಗಟ್​ ಹೃದಯಾಘಾತದಿಂದ ನಿಧನ

ಈ ಬಗ್ಗೆ ಮಾತನಾಡಿರುವ ರಿಂಕು ಡಾಕಾ, ಸಹೋದರಿ ದೋನಾಲಿ ಪೊಗಾಟ್ ಸಾವನ್ನಪ್ಪುವ ಮುಂಚೆ ಕರೆ ಮಾಡಿದ್ದಳ. ಈ ವೇಳೆ ದುಃಖದಲ್ಲಿದ್ದ ಆಕೆ ತನ್ನ ಜೊತೆ ಇದ್ದ ಇಬ್ಬರ ಮೇಲೆ ಆರೋಪ ಮಾಡಿದ್ದಳು ಎಂದು ಹೇಳಿದ್ದಾರೆ.

ಬಿಜೆಪಿ ನಾಕಿ ಹಾಗೂ 2020 ರ ಹಿಂದಿ ಬಿಗ್​ಬಾಸ್​​ ನ ಸ್ಪರ್ಥಿಯಾಗಿದ್ದ ಸೋನಾಲಿ ಪೊಗಾಟ್( Sonali Phogat)​​​ ​​ ಗೋವಾದಲ್ಲಿ ಸಾವನ್ನಪ್ಪಿದ ಸ್ತಿತಿಯಲ್ಲಿ ಪತ್ತೆಯಾಗಿದ್ದರು. ಙಪೊಲೀಸರು ಹೃದಯಾಘಾತದಿಂದ ಸಾವನ್ನಪ್ಪಿರಬಹುದು ಎಂದು ಅಂದಾಜಿಸಿದ್ದರು. ಸೋನಾಲಿ ಪೊಗಾಟ್ ಕಳೆದ ಲೋಕಸಭೆ ಚುನಾವಣೆ ಹರಿಯಾಣದ ಆದಂಪುರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋಲು ಅನುಭವಿಸಿದ್ದರು.

ಇದನ್ನೂ ಓದಿ : ಚಿರು ಸರ್ಜಾ, ಪುನೀತ್​, ಸೋನಾಲಿ ಪೊಗಾಟ್ – ಭಾರತೀಯ ಯುವಕರಲ್ಲೇಕೆ​​ ಹೃದಯಾಘಾತ ಹೆಚ್ಚು

LEAVE A REPLY

Please enter your comment!
Please enter your name here