ADVERTISEMENT
ಕರ್ನಾಟಕ ವಿಧಾನಸಭೆಯ ಚುನಾವಣೆಯಲ್ಲಿ ಎದುರಾದ ಹೀನಾಯ ಸೋಲು ಬಿಜೆಪಿಯನ್ನು ಕಂಗೆಡಿಸಿದೆ.
ಇದರ ಜೊತೆಗೆ ಸಿದ್ದರಾಮಯ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಬಿಜೆಪಿ ಪಕ್ಷದ ರಾಜಕೀಯ ತಂತ್ರಗಳನ್ನೇ ಬುಡಮೇಲುಮಾಡಿದೆ.
ಎಷ್ಟರ ಮಟ್ಟಿಗೆ ಎಂದರೇ ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡರೇ ಹೇಗೆ ಎಂಬ ಬಗ್ಗೆ ಬಿಜೆಪಿ ಗಂಭೀರ ಚಿಂತನೆ ನಡೆಸಿದೆ.
ರಾಜ್ಯದ ಎಲ್ಲಾ 28 ಲೋಕಸಭೆ ಕ್ಷೇತ್ರಗಳ ಮೇಲೆ ಗಮನಹರಿಸುವ ಬದಲು ಗೆಲ್ಲಬಹುದಾದು ಎಂದು ಭಾವಿಸಳಅಧ 15ರಿಂದ 18 ಕ್ಷೇತ್ರಗಳ ಮೇಲಷ್ಟೇ ಗಮನ ಕೇಂದ್ರೀಕರಿಸಲು ಬಿಜೆಪಿ ಮುಂದಾಗಿದೆ.
ಜೆಡಿಎಸ್ ಗೆಲ್ಲಬಹುದು ಎಂಬ ಲೆಕ್ಕಾಚಾರದ ಮೇಲೆ ಐದಾರು ಕ್ಷೇತ್ರಗಳನ್ನು ಆ ಪಕ್ಷಕ್ಕೆ ಬಿಟ್ಟುಕೊಟ್ಟು ಬಹಿರಂಗವಾಗಿ ಮೈತ್ರಿಯನ್ನೋ ಅಥವಾ ಒಳ ಒಪ್ಪಂದವನ್ನೋ ಮಾಡಿಕೊಂಡರೇ ಹೇಗೆ ಬಗ್ಗೆ ಬಿಜೆಪಿಯೊಳಗೆ ಗಂಭೀರ ಚರ್ಚೆಗಳು ನಡೆದಿವೆ.
ಜೆಡಿಎಸ್ ಜೊತೆ ಡೀಲ್ ಮಾಡಿಕೊಂಡು ಹೋದಲ್ಲಿ ಮಾತ್ರ ಕಾಂಗ್ರೆಸ್ ಸರ್ಕಾರವನ್ನು ಗ್ಯಾರಂಟಿಯಾಗಿ ಎದುರಿಸಬಹುದು ಎಂಬ ಲೆಕ್ಕಾಚಾರದಲ್ಲಿ ಬಿಜೆಪಿ ಇದೆ ಎನ್ನಲಾಗುತ್ತಿದೆ.
2019ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದ್ದು 25 ಲೋಕಸಭೆ ಸ್ಥಾನ. ಆದರೆ, ಈ ಬಾರಿ ಅಷ್ಟು ಸ್ಥಾನಗಳನ್ನು ಗೆಲ್ಲುವ ವಿಶ್ವಾಸವನ್ನು ಸ್ವತಃ ಬಿಜೆಪಿಯೇ ಹೊಂದಿಲ್ಲ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವದಲ್ಲಿರುವ ಕಾರಣ, ಇದರ ಪರಿಣಾಮ ಲೋಕಸಭೆ ಚುನಾವಣೆ ಮೇಲೆ ಸಹಜವಾಗಿಯೇ ಆಗಲಿದೆ ಎಂದು ಬಿಜೆಪಿ ಲೆಕ್ಕ ಹಾಕಿದೆ.
28 ಲೋಕಸಭೆ ಕ್ಷೇತ್ರಗಳಲ್ಲಿ 20-22 ಕಡೆ ಬಿಜೆಪಿ ಸ್ಪರ್ಧಿಸಿ, ಉಳಿದ ಸ್ಥಾನಗಳನ್ನು ಜೆಡಿಎಸ್ಗೆ ಬಿಟ್ಟುಕೊಡುವುದು ಕೇಸರಿ ನಾಯಕರ ಲೆಕ್ಕಾಚಾರವಾಗಿದೆ.
ಲೋಕ ಮೈತ್ರಿಯ ಪ್ರಪೋಸಲ್ ಅನ್ನು ಜೆಡಿಎಸ್ ಒಪ್ಪಿದಲ್ಲಿ ಎರಡು ಪಕ್ಷಗಳಿಗೂ ಅನುಕೂಲ ಆಗಲಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ADVERTISEMENT