ಮದುವೆ ವಾರ್ಷಿಕೋತ್ಸವದ ದಿನ ಟಾಲಿವುಡ್ ನಟಿ ಕಮ್ ಆಂಕರ್ ಅನಸೂಯ ಭಾರದ್ವಜ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿವೆ.
ADVERTISEMENT
ಬಿಕಿನಿಯಲ್ಲಿ ಕಾಣಿಸಿಕೊಂಡಿರುವ ನಟಿ ಅನಸೂಯ ಪತಿ ಜೊತೆ ಬೀಚ್ ವೆಡ್ಡಿಂಗ್ ಮಾಡಿಕೊಂಡು ಮದುವೆ ವಾರ್ಷಿಕೋತ್ಸವನ್ನು ಬೀಡುಬೀಸಾಗಿ ಆಚರಿಸಿಕೊಂಡಿದ್ದಾರೆ.
ADVERTISEMENT
ಪತಿಯ ಬಗ್ಗೆ ಎಮೋಷನಲ್ ಪೋಸ್ಟ್ ಒಂದನ್ನು ಹಾಕಿಕೊಂಡಿದ್ದಾರೆ.
2001ರಲ್ಲಿ ನೀನು ಬರೆದ ಮೊದಲ ಪ್ರೇಮಪತ್ರ ನನಗಿನ್ನೂ ನೆನಪಿದೆ. ಆಗ ನಿನಗೆ ರಿಪ್ಲೈ ಕೊಡೋಕೆ ಆಗಲಿಲ್ಲ. ಅದಕ್ಕೆ ಈಗ ನನ್ನೊಳಗಿನ ಪ್ರೀತಿಯ ಉತ್ಕಟತೆಯನ್ನು ತೋರ್ಪಡಿಸಲು ಇಚ್ಚಿಸುತ್ತಿದ್ದೇನೆ.
ಇಷ್ಟು ವರ್ಷದ ನಮ್ಮ ಜೀವನದಲ್ಲಿ ನನ್ನ-ನಿನ್ನ ಬಗ್ಗೆ ಸಾಕಷ್ಟು ಮಂದಿ ಎಷ್ಟೋ ಮಾತುಗಳನ್ನು ಆಡಿದ್ದಾರೆ.
ಆದರೆ, ಅವುಗಳ ಬಗ್ಗೆ ತಲೆಕೆಡಿಸಿಕೊಳ್ಳದ ನೀವು, ನನಗೆ ಕೇವಲ ಪ್ರೀತಿಯನ್ನೇ ನೀಡುತ್ತಾ ಬಂದಿದ್ದೀರಿ..
ನಮ್ಮ ವಿವಾಹಬಂಧವನ್ನು ಅದ್ಭುತವಾಗಿ ಕಾಪಾಡುತ್ತಾ ಬಂದಿದ್ದೀರಿ..ಈವರೆಗೂ ನನಗಾಗಿ ನೀನು ಮಾಡಿದ ತ್ಯಾಗಗಳಿಗೆ ಲೆಕ್ಕವಿಲ್ಲ
ಒಮ್ಮೊಮ್ಮೆ ನೀನು ತೋರಿಸುವ ಪ್ರೀತಿಗೆ, ತಾಳ್ಮೆಗೆ ನಾನು ಕೂಡ ಆಶ್ಚರ್ಯ ಹೋಗುತ್ತೇನೆ. ನಾವಿಬ್ಬರು ಒಬ್ಬರಿಗೊಬ್ಬರು ಅರ್ಥ ಮಾಡಿಕೊಳ್ಳುತ್ತಾ ಬೆಳೆಯುತ್ತಿದ್ದೇವೆ.
ನಾವು ಫರ್ಫೆಕ್ಟ್ ಕಪಲ್ ಎನ್ನುವುದು ನನಗೂ ಗೊತ್ತು.. ಆದರೆ, ಕಷ್ಟ ಸುಖಗಳಲ್ಲಿ ನಾವು ಒಬ್ಬರಿಗೊಬ್ಬರು ಜೊತೆಯಾಗಿದ್ದೇವೆ. ಎಷ್ಟೇ ಅಡ್ಡಿ ಎದುರಾದರೂ ಮುಂದಕ್ಕೆ ಸಾಗುತ್ತಿದ್ದೇವೆ. ನನ್ನನ್ನು ನನ್ನನ್ನಾಗಿಯೇ ಸ್ವಾಗತಿಸುತ್ತಿರುವುದಕ್ಕೆ ಧನ್ಯವಾದ