EXIT POLL: ಹುಬ್ಬಳ್ಳಿ ಸೆಂಟ್ರಲ್​ನಲ್ಲಿ ಯಾರ್​ ಗೆಲ್ತಾರೆ..? ಶೆಟ್ಟರ್​​ಗೆ ಸಿಹಿಯೋ..? ಸೋಲೋ..?

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಮತ್ತು ಅವರ ಮಗ ಬಿ ವೈ ವಿಜಯೇಂದ್ರ ವೈಯಕ್ತಿಕವಾಗಿ ಸವಾಲಾಗಿ ತೆಗೆದುಕೊಂಡಿರುವ ಕ್ಷೇತ್ರ ಅದು ಹುಬ್ಬಳ್ಳಿ ಸೆಂಟ್ರಲ್​. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್​.

ಜಾತಿ ಲೆಕ್ಕಾಚಾರ:

ಹುಬ್ಬಳ್ಳಿ-ಧಾರವಾಡ ಸೆಂಟ್ರಲ್​ನಲ್ಲಿ ಲಿಂಗಾಯತ- 71,000, ಮುಸ್ಲಿಂ- 43,000, ಎಸ್ಸಿ/ಎಸ್ಟಿ- 32,000, ಕ್ರೈಸ್ತರು- 26,500, ಮರಾಠಾ- 22,700, ಬ್ರಾಹ್ಮಣ- 22,000 ಹಾಗೂ ಇತರೆ- 25,000 ಮತದಾರರಿದ್ದಾರೆ.

ಯಾರು ಗೆಲ್ಲಬಹುದು..?

ಬಿಜೆಪಿ ಟಿಕೆಟ್​ ನಿರಾಕರಿಸಿದ್ದ ಕಾರಣ ಕೊನೆ ಕ್ಷಣದಲ್ಲಿ ಶೆಟ್ಟರ್​ ಅವರು ಬಿಜೆಪಿ ಬಿಟ್ಟು ಕಾಂಗ್ರೆಸ್​​ಗೆ ಬಂದು ಅಖಾಡಕ್ಕಿಳಿದರು. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್​ ಸಂತೋಷ್​ ಆಪ್ತ ಮಹೇಶ್​ ತೆಂಗಿನಕಾಯಿಗೆ ಬಿಜೆಪಿ ಟಿಕೆಟ್​ ನೀಡಿದೆ.

ನಮಗೆ ಲಭ್ಯ ಇರುವ ಮಾಹಿತಿ ಪ್ರಕಾರ ಹುಬ್ಬಳ್ಳಿ ಸೆಂಟ್ರಲ್​ ವಿಧಾನಸಭಾ ಕ್ಷೇತ್ರದಲ್ಲಿ ಜಗದೀಶ್​ ಶೆಟ್ಟರ್​ ಅವರೇ ಗೆಲ್ಲಲಿದ್ದಾರೆ. ಬಿಜೆಪಿಗೆ ಮುಖಭಂಗವಾಗಲಿದೆ.

ಲಿಂಗಾಯತ ಮತಗಳ ಪೈಕಿ ಶೆಟ್ಟರ್ ಅವರ ಸಮುದಾಯದ​ ಬಣಜಿಗ ಲಿಂಗಾಯತ ಮತಗಳು 12,500ರಷ್ಟಿವೆ.

ಕಾರಣಗಳು:

1. ಬಿಜೆಪಿ ವಿರುದ್ಧದ ಆಡಳಿತ ವಿರೋಧಿ ಅಲೆ 

2. ಕಾಂಗ್ರೆಸ್​ ಗ್ಯಾರಂಟಿ ಘೋಷಣೆಗಳು

3. ಮೀಸಲಾತಿ ವಿಷಯದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ  ಪಂಚಮಸಾಲಿ ಸಮುದಾಯದ ಸಿಟ್ಟು

4. ಲಿಂಗಾಯತ ಸಮುದಾಯವನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ ಎಲ್​ ಸಂತೋಷ್​ ಮತ್ತು ಪ್ರಹ್ಲಾದ್​ ಜೋಶಿ ತುಳಿಯುತ್ತಿದ್ದಾರೆ ಎಂಬ ಸಿಟ್ಟು

5. ಲಿಂಗಾಯತ ನಾಯಕ ಶೆಟ್ಟರ್​​ಗೆ ಟಿಕೆಟ್​ ಕೊಡದೇ ಬಿಜೆಪಿ ಅವಮಾನ ಮಾಡಿದ್ದು ಮತ್ತು ಇದು ಸ್ವಾಭಿಮಾನದ ಚುನಾವಣೆ ಎಂಬ ಶೆಟ್ಟರ್​ ಘೋಷಣೆ

6. ಶೆಟ್ಟರ್​ ಕಾಂಗ್ರೆಸ್​ಗೆ ಬಂದಿದ್ದರಿಂದ ಮುಸಲ್ಮಾನ, ದಲಿತ ಮತ್ತು ಕ್ರಿಶ್ಚಿಯನ್​ ಸಮುದಾಯದ ಮತಗಳು ಶೆಟ್ಟರ್​ಗೆ ಕ್ರೋಢೀಕರಣ ಆಗುವ ನಿರೀಕ್ಷೆ