ಪ್ರಧಾನಿ ನರೇಂದ್ರ ಮೋದಿ ನಿಂದನಾತ್ಮಕ ಹೇಳಿಕೆ ನೀಡಿರುವ ಆರೋಪ ಎದುರಿಸ್ತಿರುವ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರಿಗೆ ಸುಪ್ರೀಂಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ಸಹಜ ಜಾಮೀನು ಪಡೆಯಲು ಅರ್ಜಿ ಸಲ್ಲಿಸುವವರೆಗೂ ಮತ್ತು ಆ ಜಾಮೀನು ಅರ್ಜಿ ವಿಚಾರಣೆ ನಡೆಯುವವರೆಗೂ ದೆಹಲಿ ಕೋರ್ಟ್ ನೀಡುವ ಮಧ್ಯಂತರ ಜಾಮೀನಿನಡಿಯಲ್ಲಿ ಇವತ್ತು ಸಂಜೆ ಬಿಡುಗಡೆಗೊಳಿಸುವಂತೆ
ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿ ಪಿ ಎನ್ ನರಸಿಂಹ ಮತ್ತು ನ್ಯಾಯಮೂರ್ತಿ ಎಂ ಆರ್ ಶಾಹಾ ಅವರ ಪೀಠ ಅಸ್ಸಾಂ ಪೊಲೀಸರಿಗೆ ಸೂಚಿಸಿದೆ.
ಇವತ್ತು ಬೆಳಗ್ಗೆ ರಾಷ್ಟ್ರ ರಾಜಧಾನಿ ದೆಹಲಿಗೆ ಬಂದ ಅಸ್ಸಾಂ ಪೊಲೀಸರು ಇಂಡಿಗೋ ವಿಮಾನದಿಂದ ಇಳಿಸಿ ಪವನ್ ಖೇರಾ ಅವರನ್ನು ಅಸ್ಸಾಂ ಪೊಲೀಸರು ಬಂಧಿಸಿದ್ದರು
ರಾಯ್ಪುರದಲ್ಲಿ ಆಯೋಜನೆಗೊಂಡಿರುವ ಎಐಸಿಸಿ ಅಧಿವೇಶನಕ್ಕೆ ಇತರೆ ಕಾಂಗ್ರೆಸ್ ನಾಯಕರ ಜೊತೆಗೆ ಪವನ್ ಖೇರಾ ಅವರು ತೆರಳಲು ಸಿದ್ಧರಾಗಿದ್ದರು.
ದೆಹಲಿ ವಿಮಾನನಿಲ್ದಾಣಕ್ಕೆ ಬಂದ ಅಸ್ಸಾಂ ಪೊಲೀಸರು ಕಾಂಗ್ರೆಸ್ನ ಮಾಧ್ಯಮ ಮತ್ತು ಸಾರ್ವಜನಿಕ ಪ್ರಚಾರ ಸಮಿತಿ ಮುಖ್ಯಸ್ಥ ಖೇರಾ ಅವರನ್ನು ಬಂಧಿಸಿದ್ದರು.
ಅಸ್ಸಾಂ ಮತ್ತು ಉತ್ತರಪ್ರದೇಶದಲ್ಲಿ ದಾಖಲಾಗಿರುವ ಎರಡೂ ಎಫ್ಐಆರ್ಗಳನ್ನು ಜೊತೆಗೊಳಿಸಿ ವಿಚಾರಣೆ ನಡೆಸಬೇಕೆಂದು ಪವನ್ ಖೇರಾ ಮಾಡಿರುವ ಮನವಿ ಬಗ್ಗೆ ಉತ್ತರಿಸುವಂತೆ ಅಸ್ಸಾಂ ಮತ್ತು ಉತ್ತರಪ್ರದೇಶ ಸರ್ಕಾರಕ್ಕೆ ಸೂಚಿಸಿದೆ.
ADVERTISEMENT
ADVERTISEMENT