ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅತ್ಯಧಿಕ ಸ್ಥಾನಗಳನ್ನು ಗಳಿಸಲಿದೆ ಎಂದು ಖಾಸಗಿ ಸಮೀಕ್ಷಾ ಸಂಸ್ಥೆ ಅಂದಾಜಿಸಿದೆ.
ಈ ಸಮೀಕ್ಷೆಯ ಪ್ರಕಾರ ಕರ್ನಾಟಕದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟ ಒಂದಂಕಿಗೆ ಕುಸಿಯಲಿದೆ.
ಚುನಾವಣಾ ವಿಶ್ಲೇಷಕ ಗುರುರಾಜ್ ಅಂಜನ್ ಅವರು ನಡೆಸಿರುವ ಸಮೀಕ್ಷೆ ಪ್ರಕಾರ ಕರ್ನಾಟಕದಲ್ಲಿ ಕಾಂಗ್ರೆಸ್ 16 ರಿಂದ 22 ಸ್ಥಾನಗಳನ್ನು ಗಳಿಸಲಿದೆ.
ಇದೇ ಮೊದಲ ಬಾರಿಗೆ ಸಮೀಕ್ಷಾ ಸಂಸ್ಥೆಯೊಂದು ಕರ್ನಾಟಕದಲ್ಲಿ ಕಾಂಗ್ರೆಸ್ 20 ಸ್ಥಾನಗಳನ್ನು ದಾಟಬಹುದು ಎಂಬ ಅಂದಾಜು ಮಾಡಿದೆ.
ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟ ಕೇವಲ 6 ರಿಂದ 9 ಸ್ಥಾನಗಳನ್ನು ಗೆಲ್ಲಬಹುದು ಎಂದು ಗುರುರಾಜ್ ಅಂಜನ್ ಅವರು ಅಂದಾಜು ಮಾಡಿದ್ದಾರೆ.
ಗುರುರಾಜ್ ಅಂಜನ್ ಅವರ ತಂಡ ಕರ್ನಾಟಕದಲ್ಲಿ 67,242 ಮಂದಿಯ ಅಭಿಪ್ರಾಯವನ್ನು ಪಡೆದು ಸಮೀಕ್ಷೆ ನಡೆಸಿದೆ.
ಈ ಮೂಲಕ ಕರ್ನಾಟಕದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನೇತೃತ್ವದ ಮೈತ್ರಿಕೂಟಕ್ಕೆ ಹೀನಾಯ ಸೋಲಾಗಲಿದೆ ಎಂದು ಸಮೀಕ್ಷೆ ಅಂದಾಜಿಸಿದೆ.