ರೋಹಿಣಿ ವಿರುದ್ಧ ಸುದ್ದಿ ಪ್ರಸಾರಕ್ಕೆ ಟಿವಿ9 ಕನ್ನಡಕ್ಕೆ ನಿರ್ಬಂಧ ಇಲ್ಲ – ಕಾರಣ ಏನ್​ ಗೊತ್ತಾ..?

ಐಎಎಸ್​ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಯಾವುದೇ ಮಾನಹಾನಿಕರ ಸುದ್ದಿಗಳನ್ನು ಪ್ರಸಾರ ಮಾಡದಂತೆ ಬೆಂಗಳೂರಿನ 73ನೇ ಹೆಚ್ಚುವರಿ ಸಿಟಿ ಸಿವಿಲ್​ ಕೋರ್ಟ್​ ಆದೇಶ ನೀಡಿದೆ.

ರೋಹಿಣಿ ಸಿಂಧೂರಿ ಸಲ್ಲಿಸಿರುವ ಅರ್ಜಿಯಲ್ಲಿ ಟಿವಿ9 ಕನ್ನಡ ಮೂರನೇ ಪ್ರತಿವಾದಿಯಾಗಿದ್ದಾರೆ. ಆದರೆ ಟಿವಿ9 ಕನ್ನಡ ನ್ಯಾಯಾಲಯದಲ್ಲಿ ಕೇವಿಯಟ್​ ಸಲ್ಲಿಸಿದೆ.

ಟಿವಿ9 ಕನ್ನಡ ಹೊರತುಪಡಿಸಿ ಕನ್ನಡ ಉಳಿದ ಸುದ್ದಿವಾಹಿನಿಗಳು, ಪತ್ರಿಕೆಗಳು, ಇಂಗ್ಲೀಷ್​ ಮತ್ತು ಹಿಂದಿ ಸುದ್ದಿವಾಹಿನಿ ಮತ್ತು ಇಂಗ್ಲೀಷ್​ ಪತ್ರಿಕೆಗಳಿಗೆ ಮಾನಹಾನಿಕರ ಸುದ್ದಿ ಪ್ರಸಾರ ಮಾಡದಂತೆ ನಿರ್ಬಂಧ ಹೇರಲಾಗಿದೆ.

ನಾಗರಿಕ ಕ್ರಿಯಾ ಸಂಹಿತೆ (ಸಿಪಿಸಿ) ಕಾಯಿದೆಯ 148ಎ ಅಡಿಯಲ್ಲಿ ಕೇವಿಯೆಟ್​ ಸಲ್ಲಿಸಲು ಅವಕಾಶ ಇದೆ. ತಮ್ಮ ವಿರುದ್ಧ ದಾವೆಗಳನ್ನು ಹೂಡಬಹುದು ಎಂಬ ನಿರೀಕ್ಷೆಗಳಿದ್ದಲ್ಲಿ ಅಂತಹ ದಾವೆ ಆಧರಿಸಿ ತಮ್ಮ ಮೇಲೆ ಆದೇಶ ಕೊಡುವುದಕ್ಕೂ ಮೊದಲು ತಮ್ಮ ಗಮನಕ್ಕೆ ತರಬೇಕೆಂದು ಕೋರಿ ಸಲ್ಲಿಸುವ ಅರ್ಜಿಯೇ ಕೇವಿಯೇಟ್​.

ಹೀಗಾಗಿ ನ್ಯಾಯಾಲಯ ಟಿವಿ9ಗೆ ಎಮರ್ಜೆಂಟ್​​ ನೋಟಿಸ್​ ಜಾರಿ ಮಾಡಿದೆ.

ಟಿವಿ9 ಕನ್ನಡಕ್ಕೆ ನೋಟಿಸ್​ ಜಾರಿ ಮಾಡಲಾಗಿದ್ದು, ಮಾರ್ಚ್​​ 7ರೊಳಗೆ  ಉತ್ತರಿಸುವಂತೆ ಸೂಚಿಸಿದೆ. 60ನೇ ಪ್ರತಿವಾದಿಯಾಗಿರುವ ಡಿ ರೂಪಾ ಅವರಿಗೂ ಮಾರ್ಚ್​​ 7ರೊಳಗೆ ಉತ್ತರಿಸಲು ಸೂಚಿಸಲಾಗಿದೆ.

ಉಳಿದ ಪ್ರತಿವಾದಿಗಳಿಗೆ ಮಾರ್ಚ್​​ 17ರೊಳಗೆ ಉತ್ತರಿಸಲು ಸೂಚಿಸಲಾಗಿದೆ.

ಕೋರ್ಟ್​ ಆದೇಶದ ಪ್ರತಿ:

display_pdf (1)

LEAVE A REPLY

Please enter your comment!
Please enter your name here