ಭಾರತ್ ಜೋಡೋ ಯಾತ್ರೆ ಪೋಸ್ಟರ್ ಹರಿದು ಕಿಡಿಗೇಡಿಗಳು – ಪೊಲೀಸರಿಗೆ ಕಾಂಗ್ರೆಸ್ ದೂರು

ರಾಹುಲ್ ಗಾಂಧೀ ನೇತೃತ್ವದಲ್ಲಿ ಕಾಂಗ್ರೆಸ್​ ಭಾರತ್ ಜೋಡೋ ಯಾತ್ರೆ ಮಾಡುತ್ತಿದೆ. ಈ ಯಾತ್ರೆ ಸೆ.30 ರಂದು ರಾಜ್ಯಕ್ಕೆ ಎಂಟ್ರಿ ಕೊಡಲಿದೆ. ಈ ನಡುವೆ, ಗುಂಡ್ಲುಪೇಟೆಯಲ್ಲಿ ಕಾಂಗ್ರೆಸ್​​ ಹಾಕಿದ್ದ ಬ್ಯಾನರ್​​​ನ್ನು ಕಿಡಿಗೇಡಿಗಳು ಹರಿದು ಹಾಕಿದ್ದಾರೆ. ಈ ಬಗ್ಗೆ ಡಿಕೆ ಶಿವಕುಮಾರ್ ಪೊಲೀಸರಿಗೆ ದೂರು ನೀಡಿದ್ದಾರೆ.

ಚಾಮರಾಜನಗರದ ಗುಂಡ್ಲುಪೇಟೆಯಲ್ಲಿ ಕಾಂಗ್ರೆಸ್​​ ಪಾದಯಾತ್ರೆ ಸಂಬಂಧ ಬ್ಯಾನರ್ ಹಾಕಿತ್ತು. ಈ ಬ್ಯಾನರ್​ನಲ್ಲಿ ರಾಹುಲ್ ಗಾಂಧಿ, ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್​​ ಅವರ ಪೋಟೋಗಳನ್ನು ಕಿಡಿಗೇಡಿಗಳು ಹರಿದು ಹಾಕಿದ್ದಾರೆ. ಈ ಬಗ್ಗೆ ಕಾಂಗ್ರೆಸ್​ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿತ್ತು. ಇದನ್ನೂ ಓದಿ :Bharat Jodo Yatra : ಯಾತ್ರೆಗೆ ಮೈಸೂರಲ್ಲಿ ಪ್ರಿಯಾಂಕ ಗಾಂಧಿ ಸೇರ್ಪಡೆ ಸಾಧ್ಯತೆ

ಇದೀಗ, ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್ ಗುಂಟ್ಲುಪೇಟೆ ಪೊಲೀಸ್ ಠಾಣೆಗೆ ತೆರಳಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರನ್ನು ಒತ್ತಾಯಿಸಿದ್ದಾರೆ.

ಭಾರತ್ ಜೋಡೋ ಪಾದಯಾತ್ರೆ ರಾಜ್ಯಕ್ಕೆ ಸೆ.30 ರಂದು ಚಾಮರಾಜನಗರದ ಮೂಲಕ ಎಂಟ್ರಿ ಕೊಡಲಿದೆ. ರಾಜ್ಯದ 8 ಜಿಲ್ಲೆಗಳಲ್ಲಿ ಸಾಗಲಿರುವ ಈ ಯಾತ್ರೆ 21 ದಿನಗಳ ಕಾಲ 510 ಕಿ.ಮೀ ಕ್ರಮಿಸಲಿದೆ.

ಇದನ್ನೂ ಓದಿ : ಇಡಿ ವಿಚಾರಣೆ ಮಧ್ಯೆ ಡಿಕೆಶಿಗೆ ಅನಾರೋಗ್ಯ – ವೈದ್ಯರ ತಪಾಸಣೆ