Jasprit Bumra : ಟಿ20 ವಿಶ್ವಕಪ್​ನಿಂದ ಜಸ್ಪ್ರಿತ್ ಬುಮ್ರಾ ಔಟ್

Jasprit Bumra

ಬೆನ್ನುಮೂಳೆ ನೋವಿನಿಂದ ಭಾರತ ಕ್ರಿಕೆಟ್ ತಂಡದ ಪ್ರಮುಖ ಬೌಲರ್ ಜಸ್ಪ್ರಿತ್ ಬುಮ್ರಾ (Jasprit Bumra) ಅವರನ್ನು ಮುಂದಿನ ಟಿ20 ವಿಶ್ವಕಪ್​ನಿಂದ (T20 World Cup) ಹೊರಗಿಡಲಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಇವರ ಸ್ಥಾನಕ್ಕೆ ವೇಗಿ ಮೊಹಮ್ಮದ್ ಸಿರಾಜ್ ಎಂಟ್ರಿ ಕೊಡಲಿದ್ದಾರೆ ಎನ್ನುವ ಬಗ್ಗೆ ತಿಳಿದುಬಂದಿದೆ.

ಬೆನ್ನು ಮೂಳೆ ನೋವಿನಿಂದ ಜಸ್ಪ್ರಿತ್ ಬುಮ್ರಾ (Jasprit Bumra) ರನ್ನು ಈ ವರ್ಷದ ಏಷ್ಯಾಕಪ್​ನಿಂದ ಹೊರಗಿಡಲಾಗಿತ್ತು. ಇದೀಗ, ಟಿ20 ವಿಶ್ವಕಪ್​ಗೂ ಅವರು ಹೊರಗುಳಿಯಲಿದ್ದಾರೆ.

ಇದನ್ನೂ ಓದಿ : Umesh Yadav : ಟಿ20 ಸರಣಿಯಿಂದ ಶಮಿಗೆ ಗೇಟ್​ಪಾಸ್ – ಉಮೇಶ್ ಯಾದವ್​ಗೆ ಸ್ಥಾನ

ನಿನ್ನೆ ಗುರುವಾರ ನಡೆದಿದ್ದ ಭಾರತ ಹಾಗೂ ದ.ಆಫ್ರಿಕಾದ ನಡುವಿನ ಟಿ20 ಪಂದ್ಯದಿಂದ ಅವರನ್ನು ಏಕಾಏಕಿ ಕೈಬಿಡಲಾಗಿತ್ತು.

ಟಿ20 ವಿಶ್ವಕಪ್ ಇದೇ ಅಕ್ಟೋಬರ್ 16ರಿಂದ ಆರಂಭವಾಗಲಿದೆ. ನವೆಂಬರ್ 13 ರಂದು ಅಂತಿ ಪಂದ್ಯ ನಡೆಯಲಿದೆ.