ಆಸ್ಟ್ರೇಲಿಯಾ ವಿರುದ್ಧದ ತವರಿನ ಟಿ20 ಸರಣಿಗೆ ಆಯ್ಕೆ ಆಗಿದ್ದ ವೇಗಿ ಮೊಹಮ್ಮದ್ ಶಮಿಗೆ ಕೊರೊನಾ ಪಾಸಿಟಿವ್ ಕಂಡುಬಂದ ಕಾರಣ ಈ ಸರಣಿಯಿಂದ ಹೊರ ನಡೆದಿದ್ದು, ಬರೋಬ್ಬರಿ 3 ವರ್ಷಗಳ ಬಳಿಕೆ ಉಮೇಶ್ ಯಾದವ್ಗೆ (Umesh Yadav) ಸ್ಥಾನ ಲಭಿಸಲಿದೆ ಎನ್ನಲಾಗಿದೆ.
ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿ ಸೆ.20 ರಿಂದ ಆರಂಭವಾಗಲಿದ್ದು, ಈಗಾಗಲೇ ಆಟಗಾರರು ತಂಡ ಸೇರಿಕೊಂಡಿದ್ದಾರೆ. ಈ ವೇಳೆ ಕೊರೊನಾ ಟೆಸ್ಟ್ ಮಾಡಿದಾಗ ಶಮಿಗೆ ಪಾಸಿಟಿವ್ ವರದಿಯಾಗಿದೆ. ಬಳಿಕ ಅವರನ್ನು ಕ್ವಾರಂಟೈನ್ಗೆ ಒಳಪಡಿಸಿದ್ದು, ಆಸ್ಟ್ರೇಲಿಯಾ ಸರಣಿಯಿಂದ ಹೊರಗುಳಿಯಲಿದ್ದಾರೆ. ಮುಂದಿನ ದಕ್ಷಿಣ ಆಫ್ರಿಕಾ ಸರಣಿ ವೇಳೆ ತಂಡ ಸೇರಿಕೊಳ್ಳುವ ಸಾಧ್ಯತೆ ಇದೆ ಎಂದು ಬಿಸಿಸಿಐನ (BCCI) ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ : ಟೆಸ್ಟ್ ಕ್ರಿಕೇಟ್ ಪಂದ್ಯ : ಭಾರತೀಯ ಆಟಗಾರರು ಪ್ರಯಾಣಿಸುವ ಬಸ್ನಲ್ಲಿ ಸಜೀವ ಗುಂಡುಗಳು ಪತ್ತೆ
ಶಮಿ ತಂಡದಿಂದ ಹೊರನಡೆದಿರುವುದರಿಂದ ಅವರ ಸ್ಥಾನಕ್ಕೆ ಉಮೇಶ್ ಯಾದವ್ (Umesh Yadav) ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ ಎಂದು ವರದಿಯಾಗಿದ್ದು, ಉಮೇಶ್ ಯಾದವ್ ಆಯ್ಕೆ ಆದರೆ 3 ವರ್ಷಗಳ ಬಳಿಕ ಟಿ20 ತಂಡಕ್ಕೆ ಕಂಬ್ಯಾಕ್ ಮಾಡಿದಂತಾಗುತ್ತದೆ. ಉಮೇಶ್ ಯಾದವ್ 2019ರಲ್ಲಿ ಕೊನೆಯದಾಗಿ ಭಾರತ ಪರವಾಗಿ ಟಿ20 ಪಂದ್ಯವಾಡಿದ್ದರು ಬಳಿಕ ಟಿ20 ತಂಡದಿಂದ ಡ್ರಾಪ್ ಆಗಿದ್ದ ಉಮೇಶ್ ಯಾದವ್ 2022ರ ಐಪಿಎಲ್ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಭರ್ಜರಿ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದರು.
ಇದೀಗ ಶಮಿ ಬದಲಿಗೆ ಯಾದವ್ ಕಡೆ ಆಯ್ಕೆ ಸಮಿತಿ ಒಲವು ತೋರಿದ್ದು, ಯಾದವ್ ಕೌಂಟಿ ಕ್ರಿಕೆಟ್ನಲ್ಲೂ ಗಮನಾರ್ಹ ಬೌಲಿಂಗ್ ಪ್ರದರ್ಶಿಸಿದ್ದರು. ಹಾಗಾಗಿ ಮತ್ತೊಮ್ಮೆ ಟಿ20 ತಂಡಕ್ಕೆ ಯಾದವ್ ಆಯ್ಕೆ ಆದರೂ ಅಚ್ಚರಿ ಪಡಬೇಕಾಗಿಲ್ಲ ಎಂದು ವಿಮರ್ಶಿಸಲಾಗುತ್ತಿದೆ. ಇದನ್ನೂ ಓದಿ : Dinesh Karthik : ಐಸಿಸಿ ಟಿ20ಗೆ ಆಯ್ಕೆಯಾದ ಬೆನ್ನಲ್ಲೇ, ಡಿಕೆ ಹೇಳಿದ್ದೇನು..?