Dinesh Karthik : ಐಸಿಸಿ ಟಿ20ಗೆ ಆಯ್ಕೆಯಾದ ಬೆನ್ನಲ್ಲೇ, ಡಿಕೆ ಹೇಳಿದ್ದೇನು..?

Dinesh Karthik

ICC T20 ಕ್ರಿಕೆಟ್​ಗೆ ಇಂದು ಭಾರತದ ಕ್ರಿಕೆಟ್ ತಂಡ ಪ್ರಕಟವಾಗಿದೆ. ಇದರಲ್ಲಿ ಡಿಕೆ ಎಂದೇ ಖ್ಯಾತಿಯಾಗಿರುವ ದಿನೇಶ್ ಕಾರ್ತಿಕ್ (Dinesh Karthik) ಅವಕಾಶ ಪಡೆದುಕೊಂಡಿದ್ದಾರೆ. ಆ ಮೂಲಕ ಆರ್​ಸಿಬಿಯ ಗ್ರೇಟ್ ಫಿನಿಶರ್​​ಗೆ ಮತ್ತೊಂದು ಅವಕಾಶ ಒದಗಿಬಂದಿದೆ.

ಐಸಿಸಿ ಟಿ20 ಕ್ರಿಕೆಟ್​ಗೆ ಆಯ್ಕೆಯಾದ ಬೆನ್ನಲ್ಲೇ, ಟ್ವೀಟ್ ಮಾಡಿ ಪ್ರತಿಕ್ರಿಯೆ ನೀಡಿರುವ ದಿನೇಶ್ ಕಾರ್ತಿಕ್ ‘ಕನಸುಗಳು ನನಸಾಗುತ್ತವೆ’ ಎಂದು ಬರೆದುಕೊಂಡಿದ್ದಾರೆ.

ಇತ್ತೀಚೆಗೆ ದಿನೇಶ್ ಕಾರ್ತಿಕ್ (Dinesh Karthik) ಆರ್​ಸಿಬಿ ಪರವಾಗಿ ಅತ್ಯುತ್ತಮ ಬ್ಯಾಟಿಂಗ್ ಮಾಡಿದ್ದರು. ಆರ್​ಸಿಬಿಯ ಗ್ರೇಟ್ ಫಿನಿಶರ್ ಎಂದು ಗುರುತಿಸಿಕೊಂಡಿದ್ದರು. ಅನಂತರ ಟೀಂ ಇಂಡಿಯಾ ತಂಡಕ್ಕೆ ಆಯ್ಕೆಯಾಗಿ ಅಲ್ಲಿಯೂ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಇತ್ತೀಚೆಗೆ ನಡೆದ ಏಷ್ಯಾಕಪ್ ಟಿ20 ಯಲ್ಲಿ ಅವರಿಗೆ ಬ್ಯಾಟಿಂಗ್​ನಲ್ಲಿ ಅವಕಾಶ ಸಿಕ್ಕಿರಲಿಲ್ಲ. ಇದನ್ನೂ ಓದಿ : ICC T20 World Cup : ಭಾರತ ತಂಡ ಪ್ರಕಟ, ರೋಹಿತ್ ಶರ್ಮಾಗೆ ನಾಯಕತ್ವ

LEAVE A REPLY

Please enter your comment!
Please enter your name here