ಓಣಂ : ಬರೋಬ್ಬರಿ 47 ಸಾವಿರ ರೂ.ಗೆ ಹರಾಜಾಯ್ತು ಕುಂಬಳಕಾಯಿ

ಓಣಂ

ಕೇರಳದ ಇಡುಕ್ಕಿಯ ಗುಡ್ಡಗಾಡು ಪ್ರದೇಶದ ವಲಸೆ ಗ್ರಾಮವಾದ ಚೆಮ್ಮನ್ನಾರ್‌ನಲ್ಲಿ ಓಣಂ ಹಬ್ಬದ ಪ್ರಯುಕ್ತ ನಡೆದ ಸಾರ್ವಜನಿಕ ಹರಾಜಿನಲ್ಲಿ ಒಂದು ಕುಂಬಳಕಾಯಿ ಬರೋಬ್ಬರಿ 47 ಸಾವಿರ ರೂಪಾಯಿಗೆ ಮಾರಾಟವಾಗಿದ್ದು, ಅಚ್ಚರಿ ಮೂಡಿಸಿದೆ.

ಕೇರಳದಲ್ಲಿ ಓಣಂ ಹಬ್ಬವನ್ನು ಎಲ್ಲ ಧರ್ಮೀಯರೂ ಸೇರಿ ಆಚರಿಸುತ್ತಾರೆ. ಈ ವರ್ಷ ಓಣಂ ಹಬ್ಬದ ಆಚರಣೆಯ ಹಿನ್ನೆಲೆಯಲ್ಲಿ ಕುಂಬಳಕಾಯಿ ಹರಾಜಿಗೆ ಇಟ್ಟಿದ್ದರು. ಸಂಘಟಕರಿಗೆ ಈ ಕುಂಬಳಕಾಯಿಯನ್ನು ಅಲ್ಲಿನ ಸ್ಥಳೀಯರೊಬ್ಬರು ಉಚಿತವಾಗಿ ನೀಡಿದ್ದರು. ಇದನ್ನೇ ಸಂಘಟಕರು ಹರಾಜಿನಲ್ಲಿ ಇಟ್ಟಾಗ 47 ಸಾವಿರ ರೂ.ಗಳಿಗೆ ದಾಖಲೆ ಮೊತ್ತಕ್ಕೆ ಮಾರಾಟವಾಯಿತು.

ಸಾಮಾನ್ಯವಾಗಿ ಅಲ್ಲಿ ನಡೆಯುವ ಹರಾಜಿನಲ್ಲಿ ಟಗರು, ಹುಂಜ ಮುಂತಾದವು 10 ಸಾವಿರ ರೂಪಾಯಿಗೂ ಅಧಿಕ ಬೆಲೆಗೆ ಮಾರಾಟವಾಗುತ್ತಿತ್ತು. ಈ ಸಲ ಐದು ಕೇಜಿ ತೂಕದ ಕುಂಬಳಕಾಯಿ ಇದಕ್ಕಿಂತಲೂ ಹೆಚ್ಚಿನ ಬೆಲೆಗೆ ಮಾರಾಟವಾಗಿದ್ದು ಒಂದು ದಾಖಲೆಯಾಗಿದೆ. ಹಬ್ಬದಂದು ಖರೀದಿ ಮಾಡುವ ಯಾವುದೇ ವಸ್ತುಗಳು ಶುಭದ ಸಂಕೇತ ಎಂಬ ಕಾರಣದಿಂದ ವಸ್ತುಗಳ ಹರಾಜಿನಲ್ಲಿ ದುಬಾರಿ ಬೆಲೆಗೆ ಖರೀದಿಯಾಗುತ್ತದೆ. ಈ ವೇಳೆ ಬಿಡ್ಡಿಂಗ್‌ನಲ್ಲೇ ವಿಜೇತರು ಕುಂಬಳಕಾಯಿಯನ್ನು ಹಿಡಿದುಕೊಂಡು ಅಲ್ಲೇ ಪ್ರೇಕ್ಷಕರೆದರು ನರ್ತಿಸಿದರು. ಇದನ್ನೂ ಓದಿ : Tomato flu; ಕೇರಳದಲ್ಲಿ ಟೊಮ್ಯಾಟೋ ಫ್ಲೂ.. ವೈರಸ್ ಲಕ್ಷಣಗಳು ಏನು?

LEAVE A REPLY

Please enter your comment!
Please enter your name here