BIG BREAKING: ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಶಾಸಕತ್ವ ರದ್ದು – CM ಸ್ಥಾನಕ್ಕೆ ರಾಜೀನಾಮೆ ಅನಿವಾರ್ಯ

ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ಜಾರ್ಖಂಡ್ (Jharkhand) ಮುಖ್ಯಮಂತ್ರಿ ಹೇಮಂತ್ ಸೊರೆನ್ (Hemanth Soren) ರವರ ಸದಸ್ಯತ್ವವನ್ನು ಚುನಾವಣಾ ಆಯೋಗ ರದ್ದುಪಡಿಸಿದೆ

ಈ ಮೂಲಕ ಜಾರ್ಖಂಡ್ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡಿದ್ದಾರೆ.

ಮುಖ್ಯಮಂತ್ರಿ ಮತ್ತು ಗಣಿ ಸಚಿವರಾಗಿ ಸೊರೇನ್ ಅವರು  ತಮ್ಮ ಹೆಸರಲ್ಲಿ ಕಲ್ಲು ಗಣಿಗಾರಿಕೆ ಗುತ್ತಿಗೆ ಪಡೆದು ಕೊಂಡಿದ್ದರು.

ಈ ಮೂಲಕ ಲಾಭದಾಯಕ ಹುದ್ದೆ ಹೊಂದಬಾರದು ಮತ್ತು ಆ ಸಂಬಂಧ ಜನಪ್ರತಿನಿಧಿಗಳ ಕಾಯ್ದೆಯ ಸೆಕ್ಷನ್​ 9ಎ ಅಡಿ ಅನರ್ಹಗೊಳಿಸಬೇಕು ಎಂದು  ಆಗ್ರಹಿಸಿ ಮುಖ್ಯಮಂತ್ರಿಗಳ ಶಾಸಕ ಸ್ಥಾನ ರದ್ದುಪಡಿಸುವಂತೆ ಬಿಜೆಪಿ ರಾಜ್ಯಪಾಲರು ಮತ್ತು ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು.

ರಾಜ್ಯಪಾಲ ರಮೇಶ್​ ಬೈಸ್​ ಅವರು ಸಿಎಂ ಸೊರೆನ್​ ಶಾಸಕ ಸ್ಥಾನ ರದ್ದತಿ ಸಂಬಂಧ ಚುನಾವಣಾ ಆಯೋಗದ (Election Commission) ಅಭಿಪ್ರಾಯ ಕೇಳಿದ್ದರು.

ಆ ಸಂಬಂಧ ಬಿಜೆಪಿ ಮತ್ತು JMM ಪಕ್ಷಗಳ ವಾದ ಆಲಿಸಿತ್ತು.

ಈ ಬಳಿಕ ಚುನಾವಣಾ ಆಯೋಗ ರಾಜ್ಯಪಾಲ ರಮೇಶ್ ಬೈಸ್ ಅವರಿಗೆ ವರದಿ ನೀಡಿತ್ತು.

ಆ ವರದಿಯಲ್ಲಿ CM ಸೊರೇನ್ ಶಾಸಕತ್ವ ರದ್ದುಪಡಿಸುವಂತೆ ಶಿಫಾರಸು ಮಾಡಲಾಗಿದೆ.

LEAVE A REPLY

Please enter your comment!
Please enter your name here