ಮಾಹಾರಾಷ್ಟ್ರ ರಾಜಕೀಯದಲ್ಲಿ ಬಿಕ್ಕಟ್ಟು ಏರ್ಪಟ್ಟು ಈಗಾಗಲೇ ಒಂದು ವಾರ ಕಳೆಯುತ್ತ ಬಂತು. ಮಹಾರಾಷ್ಟ್ರದ ಅಘಾಡಿ ಮೈತ್ರಿಕೂಟ ಪತನದಂಚಿಗೆ ಬಂದು ನಿಂತಿದೆ. ಇದೀಗ, ಶಿವಸೇನೆ ಸಂಸದ ಸಂಜಯ್ ರಾವತ್ ಗೆ ಜಾರಿ ನಿರ್ದೇಶಣಾಲಯ(ಇಡಿ) ನೋಟಿಸ್ ಜಾರಿ ಮಾಡಿದೆ.
ಸಂಜಯ್ ರಾವತ್ಗೆ ಸಮನ್ಸ್ ಜಾರಿ ಮಾಡಿರುವ ಇಡಿ, ಮಂಗಳವಾರ ಜೂನ್ 28 ರಂದೇ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದೆ.
ಶಿವಸೇನೆಯಲ್ಲಿ ಸಿಎಂ ಉದ್ಧವ್ ಠಾಕ್ರೆ ಪರವಾಗಿ ಅಚಲವಾಗಿ ನಿಂತು ಬಂಡಾಯ ಶಾಸಕರಿಗೆ ತಿರುಗೇಟು ನೀಡುತ್ತಿರುವ ಸಂಜಯ್ ರಾವತ್, ಎಷ್ಟು ದಿನ ಅಡಗಿರುತ್ತೀರಿ. ಇಂದಲ್ಲ, ನಾಳೆ ನೀವು ಮುಂಬೈಗೆ ಬರಲೇಬೇಕಲ್ಲವೇ ಎಂದು ಪ್ರಶ್ನಿಸಿದ ಬೆನ್ನಲ್ಲೇ, ಈ ನೋಟಿಸ್ ಜಾರಿ ಮಾಡಲಾಗಿದೆ.