ಪ್ರಾದೇಶಿಕ ಪಕ್ಷಗಳನ್ನು ತನ್ನ ವಶ ಮಾಡಿಕೊಂಡು ತನ್ನ ಪ್ರಾಬಲ್ಯ ತೋರುವ ಲೆಕ್ಕಾಚಾರದಲ್ಲಿದ್ದ ಬಿಜೆಪಿಗೆ ಸಮೀಕ್ಷಾ ವರದಿಯೊಂದು ಶಾಕ್ ಕೊಟ್ಟಿದೆ.
ಬಿಜೆಪಿ ಮೈತ್ರಿಕೂಟಕ್ಕೆ ಹೀನಾಯ ಸೋಲಿನ ಸುಳಿವು ಕೊಟ್ಟಿದೆ ಈ ಸಮೀಕ್ಷೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ ಅವರನ್ನು ಕಟ್ಟಿ ಹಾಕುವ ಪ್ರಧಾನಿ ನರೇಂದ್ರ ಮೋದಿ ಮತ್ತು ತೆಲುಗು ದೇಶಂ ನಾಯಕ ಚಂದ್ರಬಾಬು ನಾಯ್ಡು ಮತ್ತು ಪವರ್ಸ್ಟಾರ್ ಪವನ್ ಕಲ್ಯಾಣ್ ಯತ್ನ ಫಲಿಸಿಲ್ಲ ಎಂದು ಈ ಸಮೀಕ್ಷೆ ಅಂದಾಜು ಮಾಡಿದೆ.
ಆಂಧ್ರಪ್ರದೇಶದಲ್ಲಿ ಮೇ 13 ರಂದು ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯ ಮತದಾನ ಏಕಕಾಲದಲ್ಲಿ ನಡೆಯಲಿದೆ. ಆಂಧ್ರಪ್ರದೇಶದಲ್ಲಿ ಒಟ್ಟು 175 ವಿಧಾನಸಭಾ ಕ್ಷೇತ್ರಗಳಿವೆ. 25 ಲೋಕಸಭಾ ಕ್ಷೇತ್ರಗಳಿವೆ.
ಪೊಲಿಟಿಕಲ್ ಕ್ರಿಟಿಕ್ ಸಮೀಕ್ಷೆ ಪ್ರಕಾರ ವೈಎಸ್ಆರ್ ಕಾಂಗ್ರೆಸ್ ಪಕ್ಷ ಈ ಬಾರಿಯೂ ವಿಧಾನಸಭಾ ಚುನಾವಣೆಯಲ್ಲಿ ಶೇಕಡಾ 50ಕ್ಕಿಂತ ಹೆಚ್ಚು ವೋಟ್ ಶೇರ್ ಪಡೆದುಕೊಳ್ಳಲಿದೆ.
ವೈಎಸ್ಆರ್ ಕಾಂಗ್ರೆಸ್ ಶೇಕಡಾ 50.20ರಷ್ಟು ಮತಗಳನ್ನು ಪಡೆಯಲಿದೆ. ಟಿಡಿಪಿ ಮತ್ತು ಬಿಜೆಪಿ ಮತ್ತು ಜನಸೇನಾ ಮೈತ್ರಿಕೂಟ 44.60ರಷ್ಟು ಮತಗಳನ್ನು ಪಡೆಯಲಿದೆ.
ಕಾಂಗ್ರೆಸ್ ಕೇವಲ ಶೇಕಡಾ 2.20ರಷ್ಟು ಮತಗಳನ್ನು ಪಡೆಯಲಿದೆ. ಇತರರು ಶೇಕಡಾ 3ರಷ್ಟು ಮತಗಳನ್ನು ಪಡೆಯಲಿದೆ.
ಈ ಸಮೀಕ್ಷೆಯ ಪ್ರಕಾರ ವೈಎಸ್ಆರ್ ಕಾಂಗ್ರೆಸ್ 121 ರಿಂದ 131 ಸೀಟುಗಳನ್ನು ಗೆಲ್ಲಲಿದೆ. ಟಿಡಿಪಿ ಮತ್ತು ಬಿಜೆಪಿ ಮತ್ತು ಜನಸೇನಾ ಕೇವಲ 44 ರಿಂದ 54 ಸೀಟುಗಳನ್ನು ಪಡೆಯಲಿದೆ. ಕಾಂಗ್ರೆಸ್ ಒಂದೇ ಒಂದೂ ಕ್ಷೇತ್ರವನ್ನೂ ಗೆಲ್ಲೋದಿಲ್ಲ ಅಂತ ಅಂದಾಜು ಮಾಡಲಾಗಿದೆ.
ಇನ್ನು ಲೋಕಸಭೆಯ ಲೆಕ್ಕಾಚಾರಕ್ಕೆ ಬರುವುದಾದರೆ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿ ಮತ್ತು ಜನಸೇನಾ ಮತ್ತು ಟಿಡಿಪಿ ಮೈತ್ರಿಕೂಟಕ್ಕೆ ದೊಡ್ಡ ಲಾಭ ಆಗ್ತಿಲ್ಲ.
ಲೋಕಸಭಾ ಚುನಾವಣೆಯಲ್ಲಿ ವೈಎಸ್ಆರ್ ಕಾಂಗ್ರೆಸ್ ಶೇಕಡಾ 50.5ರಷ್ಟು, ಟಿಡಿಪಿ+ಬಿಜೆಪಿ ಮತ್ತು ಜನಸೇನಾ ಮೈತ್ರಿಕೂಟ 44ರಷ್ಟು ಮತ್ತು ಕಾಂಗ್ರೆಸ್ ಶೇಕಡಾ 3ರಷ್ಟು ಮತಗಳನ್ನು ಪಡೆಯಲಿದೆ.
ಒಟ್ಟು 25 ಲೋಕಸಭಾ ಕ್ಷೇತ್ರಗಳ ಪೈಕಿ ವೈಎಸ್ಆರ್ಕಾಂಗ್ರೆಸ್ 19ರಿಂದ 21, ಟಿಡಿಪಿ+ಬಿಜೆಪಿ ಮತ್ತು ಜನಸೇನಾ ಮೈತ್ರಿಕೂಟ 4 ರಿಂದ 6 ಸ್ಥಾನಗಳನ್ನು ಗೆಲ್ಲಲಿದೆ. ಕಾಂಗ್ರೆಸ್ ಒಂದೂ ಲೋಕಸಭಾ ಕ್ಷೇತ್ರಗಳನ್ನು ಗೆಲ್ಲಲ್ಲ ಎಂದು ಪೊಲಿಟಿಕಲ್ ಕ್ರಿಟಿಕ್ ಅಂದಾಜು ಮಾಡಿದೆ.
ADVERTISEMENT
ಆಂಧ್ರಪ್ರದೇಶದ ಗ್ರಾಮೀಣ ಮತ್ತು ಮಹಿಳಾ ಮತದಾರರು ನೆರೆಯ ರಾಜ್ಯ ತೆಲಂಗಾಣದಲ್ಲಿ ಗ್ಯಾರಂಟಿ ಯೋಜನೆಗಳನ್ನ ನಂಬಿ ಕಾಂಗ್ರೆಸ್ ಕೈಹಿಡದ ರೀತಿಯಲ್ಲೇ , ಜಗನ್ ಮೋಹನ್ ರೆಡ್ಡಿ ಸಾಕಷ್ಟು ಮಹಿಳಾ ಕೇಂದ್ರಿದ ಯೋಜನೆಗಳಿಂದಾಗಿಯೇ ವೈಎಸ್ ಆರ್ ಮುನ್ನಡೆಗೆ ಕಾರಣವಾಗಲಿದೆ.
ಇನ್ನು ಬಿಜೆಪಿ ಜೊತೆ ಟಿಡಿಪಿ ಮೈತ್ರಿ ಒಪ್ಪದ ಟಿಡಿಪಿಯ ಹಿಂದುಳಿದ ವರ್ಗದ ಮತದಾರರು ಕೂಡ ವೈಎಸ್ಆರ್ ಕಾಂಗ್ರೆಸ್ ಪಕ್ಷದತ್ತ ವಾಲಿದ್ದಾರೆ.
ADVERTISEMENT