ದಾಖಲೆಗಳ ಪರಿಶೀಲನೆಗಾಗಿ ಟ್ರಾಫಿಕ್ ಪೊಲೀಸರು ಅಡ್ಡಹಾಕಿದರೆ ಈ ಟ್ವೀಟ್ ತೋರಿಸಿ ಸಾಕು – ಪೊಲೀಸ್ ಮಹಾನಿರ್ದೇಶಕರ ಕಟ್ಟಪ್ಪಣೆ

ಓದುಗರೇ, ನಿಮಗೆ ಎಲ್ಲಾದರೂ ಟ್ರಾಫಿಕ್ ಪೊಲೀಸರು `ದಾಖಲೆ ತಪಾಸಣೆಗಾಗಿಯೇ’ ನಿಮ್ಮ ವಾಹನವನ್ನು ಅಡ್ಡಹಾಕಿದರೆ ಈ ಕೆಳಗಿನ ಟ್ವೀಟ್‌ನ್ನು ಆ ಪೊಲೀಸರಿಗೆ ತೋರಿಸಿ.

ಈ ಟ್ವೀಟ್ ರಾಜ್ಯದ ಪೊಲೀಸ್ ಮಹಾ ನಿರ್ದೇಶಕ ಅರ್ಥಾತ್ ಪೊಲೀಸ್ ಇಲಾಖೆಯ ಮುಖ್ಯಸ್ಥ ಪ್ರವೀಣ್ ಸೂದ್ ಅವರದ್ದು.

ಇವರ ಟ್ವೀಟ್‌ನಲ್ಲಿ ಏನಿದೆ ಅಂತ ಹೇಳುವುದಕ್ಕೂ ಮೊದಲು ಇವರು ಯಾಕೆ ಹೀಗೆ ಟ್ವೀಟ್ ಮಾಡಿದ್ರು ಅಂತ ಹೇಳ್ತೀವಿ.

ಪ್ರಮುಖ ಸುದ್ದಿವಾಹಿನಿ ನ್ಯೂಸ್ 18 ಕನ್ನಡದ ಡಿ ಪಿ ಸತೀಶ್ ಅವರು,

`ಭಾನುವಾರ ಮಧ್ಯಾಹ್ನ ಎಲೆಕ್ಟಾçನಿಕ್ ಸಿಟಿ ಫ್ಲೆöÊಒವರ್‌ನ ಆರಂಭದಲ್ಲಿ ಒಂದು ಕಿಲೋ ಮೀಟರ್ ಟ್ರಾಫಿಕ್ ಜಾಮ್ ಇತ್ತು. ಟ್ರಾಫಿಕ್ ಪೊಲೀಸರು ಇರಲಿಲ್ಲ. ಎಲ್ಲರೂ ಬೇರೆಲ್ಲೂ ದಂಡ ವಸೂಲಿ ಮಾಡುವುದರಲ್ಲಿ ಬ್ಯುಸಿ ಆಗಿದ್ದರು. ಬೆಂಗಳೂರು ಬಿಟ್ಟು ಜಗತ್ತಿನ ಬೇರೆಲ್ಲೂ ಟ್ರಾಫಿಕ್ ಪೊಲೀಸರೇ ಟ್ರಾಫಿಕ್ ಜಾಮ್ ಉಂಟು ಮಾಡಲ್ಲ. ದಾಖಲೆ ಪರಿಶೀಲಿಸುವುದು ನಿಮ್ಮ ಕೆಲಸವಲ್ಲ’ ಎಂದು ಟ್ವೀಟಿಸಿ ಅದನ್ನು ಮುಖ್ಯಮಂತ್ರಿ ಬೊಮ್ಮಾಯವರಿಗೆ ಟ್ಯಾಗ್ ಮಾಡಿದ್ದರು.

ಡಿ ಪಿ ಸತೀಶ್ ಅವರ ಈ ಟ್ವೀಟ್ ಗೆ ಶ್ರೀವತ್ಸ ವಾಜಪೇಯಂ ಎಂಬವರು ಪ್ರತಿಕ್ರಿಯಿಸಿ ಟ್ವೀಟ್ ಮಾಡ್ತಾರೆ.

`ಪ್ರವೀಣ್ ಸೂದ್ ಅವರು ಸಂಚಾರಿ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿದ್ದಾಗ ದಾಖಲೆ ಪರಿಶೀಲನೆಗಾಗಿ ವಾಹನಗಳನ್ನು ನಿಲ್ಲಿಸುವುದನ್ನು ನಿಷೇಧಿಸಿದ್ದರು. ಕೇವಲ ತಪ್ಪಿಗಷ್ಟೇ ನಿಲ್ಲಿಸಬಹುದು ಎಂದಿದ್ದರು. ಈಗ ಪ್ರವೀಣ್ ಸೂದ್ ಡಿಜಿಪಿ, ಪ್ರತಿ ದಿನ ಬೆಳಗ್ಗೆ ದಾಖಲೆ ಪರಿಶೀಲನೆಗಾಗಿ ವಾಹನಗಳನ್ನು ನಿಲ್ಲಿಸುವುದು ಸಾಮಾನ್ಯವಾಗ್ಬಿಟ್ಟಿದೆ’

ಎಂದು ಟ್ವೀಟಿಸಿ ಪ್ರವೀಣ್ ಸೂದ್ ಅವರ ಟ್ವಿಟ್ಟರ್ ಖಾತೆಗೆ ಟ್ಯಾಗ್ ಮಾಡಿದ್ದರು.

ಈ ಟ್ವೀಟ್‌ಗೆ ಸ್ವತಃ ಡಿಜಿಪಿ ಪ್ರವೀಣ್ ಸೂದ್ ಅವರೇ ತಮ್ಮ ಟ್ವಿಟ್ಟರ್ ಖಾತೆಯಿಂದ ಪ್ರತಿಕ್ರಿಯಿಸಿದ್ದಾರೆ.

`ಹೌದು ನಾನು ಹೇಳಿದ್ದಕ್ಕೆ ಬದ್ಧನಾಗಿದ್ದೇನೆ ಮತ್ತು ಅದನ್ನು ಪುನರುಚ್ಚರಿಸುತ್ತೇನೆ. ಬರಿಗಣ್ಣುವ ಕಾಣುವಂತೆ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ್ದು ಕಂಡುಬರದೇ ಇದ್ದಲ್ಲಿ ಕೇವಲ ದಾಖಲೆಗಳ ಪರಿಶೀಲನೆಗಾಗಿ ಯಾವುದೇ ವಾಹನಗಳನ್ನು ನಿಲ್ಲಿಸುವಂತಿಲ್ಲ. ಡ್ರಂಕನ್ ಡ್ರೆöÊವಿಂಗ್‌ನಲ್ಲಷ್ಟೇ ವಾಹನ ನಿಲ್ಲಿಸಿ ತಪಾಸಣೆ ಮಾಡಬಹುದು. ತಕ್ಷಣವೇ ಇದನ್ನು ಅನುಷ್ಠಾನಗೊಳಿಸುವಂತೆ ಬೆಂಗಳೂರು ಪೊಲೀಸ್ ಆಯಕ್ತಕರು ಮತ್ತು ಸಂಚಾರಿ ವಿಭಾಗದ ಜಂಟಿ ಆಯುಕ್ತರಿಗೆ ಸೂಚಿಸುತ್ತೇನೆ’

ಎಂದು ಪ್ರತಿಕ್ರಿಯಿಸಿದ್ದಾರೆ.

ಡಿಜಿಪಿ ಪ್ರವೀಣ್ ಸೂದ್ ಅವರು ತಮ್ಮ ವೈಯಕ್ತಿಕ ಖಾತೆಯಿಂದ ಮಾಡಿದ ಟ್ವೀಟ್‌ನ್ನು ಡಿಜಿಪಿ ಕರ್ನಾಟಕ ಇವರ ಅಧಿಕೃತ ಟ್ವಿಟ್ಟರ್ ಖಾತೆಯಿಂದ ರಿ ಟ್ವೀಟ್ ಮಾಡಲಾಗಿದೆ.

ಅಂದರೆ ದಾಖಲೆಗಳ ಪರಿಶೀಲನೆಗಾಗಿಯೇ ವಾಹನಗಳನ್ನು ತಡೆಹಿಡಿದು ಬೆಂಗಳೂರು ಒಳಗೊಂಡAತೆ ರಾಜ್ಯದ ಯಾವುದೇ ಕಡೆಯಲ್ಲಿ ಪೊಲೀಸರು ಅಡ್ಡಹಾಕಿ ನಿಲ್ಲಿಸುವಂತಿಲ್ಲ.

 

LEAVE A REPLY

Please enter your comment!
Please enter your name here