ಪುನೀತ್ ರಾಜ್​ಕುಮಾರ್ ಜನ್ಮದಿನ ಸ್ಪೂರ್ತಿ ದಿನವಾಗಿ ಆಚರಣೆ : ರಾಜ್ಯ ಸರ್ಕಾರ

Inspiration Day

ಮುಂದಿನ ಅಕ್ಟೋಬರ್ 29 ಕ್ಕೆ ಪವರ್ ಸ್ಟಾರ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನಗಲಿ ಒಂದು ವರ್ಷ ಕಳೆಯಲಿದೆ. ಆದರೂ ಅವರ ನೆನಪು ಮಾತ್ರ ಕಿಂಚಿತ್ತೂ ಮಾಸಿಲ್ಲ. ಕನ್ನಡಿಗರು ಪುನೀತ್​ ರಾಜ್​ಕುಮಾರ್​​ ಸದಾ ನಮ್ಮ ಜೊತೆ ಇದ್ದಾರೆ ಎನ್ನುವಂತೆಯೇ ಅವರನ್ನು ಆರಾಧಿಸುತ್ತಿದ್ದಾರೆ. ಇದೀಗ, ರಾಜ್ಯ ಸರ್ಕಾರವೂ ಪುನೀತ್​ ರಾಜ್​ಕುಮಾರ್​ ಅವರಿಗೆ ಮತ್ತೊಂದು ಗೌರವ ಸಲ್ಲಿಸಲು ಸಿದ್ದವಾಗಿದೆ.

ವೈಯಕ್ತಿಕ ಹಾಗೂ ಸಾಮಾಜಿಕ ಕಾರ್ಯಗಳಿಂದಾಗಿ ದೇಶದೆಲ್ಲೆಡೆ ಅಪಾರ ಜನರ ಪ್ರೀತಿ ಗಳಿಸಿದ್ದ ಪುನೀತ್ ರಾಜ್ ಕುಮಾರ್ ಅವರಿಗೆ ಸರ್ಕಾರ ಹಾಗೂ ಸಂಘ ಸಂಸ್ಥೆಗಳಿಂದ ಗೌರವಗಳು ಮುಂದುವರೆದಿವೆ.

ಯುವಕರ ಪಾಲಿಗೆ ಸ್ಪೂರ್ತಿಯಾಗಿದ್ದ ದಿವಂಗತ ಪುನೀತ್ ರಾಜ್ ಕುಮಾರ್ ಅವರಿಗೆ ರಾಜ್ಯ ಸರ್ಕಾರದಿಂದ ಮತ್ತೊಂದು ಅತ್ಯುನ್ನತ ಗೌರವ ಸಿಗುತ್ತಿದೆ. ಅವರ ಜನ್ಮ ದಿನವಾದ ಮಾರ್ಚ್ 17ನ್ನು ಇನ್ನು ಸ್ಪೂರ್ತಿ ದಿನವಾಗಿ (Inspiration Day) ಸರ್ಕಾರದ ವತಿಯಿಂದ ಆಚರಿಸಲು ಸರ್ಕಾರ ನಿರ್ಧರಿಸಿದೆ.

ಈ ಕುರಿತು ಟ್ವೀಟ್ ಮಾಡಿರುವ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನೀಲ್ ಕುಮಾರ್, ಅಪ್ಪು ಜನ್ಮದಿನ, ಮಾರ್ಚ್ 17 ಇನ್ನು ಮುಂದೆ ಸ್ಪೂರ್ತಿ ದಿನವೆಂದು (Inspiration Day) ಆಚರಿಸುವ ಮೂಲಕ ನಾಡಿನ ಲಕ್ಷಾಂತರ ಯುವಕರಿಗೆ ಸ್ಫೂರ್ತಿಯಾಗಲಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಜನ್ಮದಿನವನ್ನು ಸ್ಫೂರ್ತಿ ದಿನ ಎಂದು ಸರಕಾರದ ವತಿಯಿಂದಲೇ ನಡೆಸಬೇಕೆಂಬ ನನ್ನ ಮನವಿಗೆ ಸ್ಪಂದಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಧನ್ಯವಾದ ಎಂದು ಹೇಳಿದ್ದಾರೆ. ಇದನ್ನೂ ಓದಿ : ಚಿರು ಸರ್ಜಾ, ಪುನೀತ್​, ಸೋನಾಲಿ ಪೊಗಾಟ್ – ಭಾರತೀಯ ಯುವಕರಲ್ಲೇಕೆ​​ ಹೃದಯಾಘಾತ ಹೆಚ್ಚು

LEAVE A REPLY

Please enter your comment!
Please enter your name here